ಬಿಡುಗಡೆಗೂ ಮುನ್ನ ಹ್ಯುರಕೇನ್ ಸೂಪರ್ ಕಾರಿನ ಡ್ರಿಫ್ಟಿಂಗ್
ವಿಶೇಷವಾಗಿ ಎಂಜಿನ್ ಟ್ಯೂನ್ ಮಾಡಿದ ರೇಸ್ ಕಾರುಗಳಿಂದ ಮಾತ್ರ ಡ್ರಿಫ್ಟಿಂಗ್ ಸಾಧ್ಯವಾಗುತ್ತದೆ. ಆದರೆ ಇನ್ನಷ್ಟೇ ಆಗಮನವಾಗಬೇಕಾಗಿರುವ ಹ್ಯುರಕೇನ್ ಸೂಪರ್ ಕಾರಿನಲ್ಲಿ ಡ್ರಿಫ್ಟ್‌ನಲ್ಲಿ ಭಾಗಿಯಾಗಿರುವುದು ವಿಶೇಷವೆನಿಸಿದೆ.
ಇಟಲಿಯ ಸೂಪರ್ ಕಾರಾಗಿರುವ ಹ್ಯುರಕೇನ್ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು 5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಗರಿಷ್ಠ 610 ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಅಂತೆಯೇ ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.
ಇದೇ ಕಾರಣಕ್ಕಾಗಿ ಹ್ಯುರಕೇನ್ ಡ್ರಿಫ್ಟಿಂಗ್ ಪ್ರಿಯರಿಗೆ ನೆಚ್ಚಿನ ಕಾರೆನಿಸಿಕೊಂಡಿದೆ. ಇಲ್ಲಿದೆ ನೋಡಿ ರೋಚಕ ವೀಡಿಯೋ...


Click it and Unblock the Notifications








