ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಇಟಲಿ ಮೂಲದ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ, ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಲ್ಯಾಂಬೊರ್ಗಿನಿ ಕಾರುಗಳು ವಿಶ್ವದ ದುಬಾರಿ ಕಾರುಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿವೆ.

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಲ್ಯಾಂಬೊರ್ಗಿನಿ ಕಾರುಗಳನ್ನು ಖರೀದಿಸುವುದು ಹಲವು ಜನರ ಕನಸು. ಕೆಲವರಿಗೆ ಈ ಕನಸು ನನಸಾದರೆ ಇನ್ನೂ ಕೆಲವರಿಗೆ ಈ ಕನಸು ನನಸಾಗುವುದೇ ಇಲ್ಲ. ಅಂತಹ ಜನರು ತಮ್ಮ ಬಳಿಯಿರುವ ಕಾರುಗಳನ್ನು ಲ್ಯಾಂಬೊರ್ಗಿನಿ ಕಾರಿನ ರೀತಿಯಲ್ಲಿ ಮಾಡಿಫೈ ಮಾಡಿಸುತ್ತಾರೆ.

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಕಾರು ಮಾಡಿಫಿಕೇಷನ್'ಗಳು ಭಾರತದಲ್ಲಿ ಸಾಮಾನ್ಯವಾಗಿವೆ. ಹಲವು ಕಾರು ಗ್ಯಾರೇಜುಗಳು ಕಡಿಮೆ ಖರ್ಚಿನಲ್ಲಿ ಕಾರುಗಳನ್ನು ಮಾಡಿಫೈಗೊಳಿಸುತ್ತವೆ. ಇತ್ತೀಚೆಗೆ ಸ್ಕ್ರಾಪ್'ಗಳಿಂದ ತಯಾರಾದ ಲ್ಯಾಂಬೊರ್ಗಿನಿ ಕಾರಿನ ಪ್ರತಿರೂಪವೊಂದು ಇಂಟರ್ ನೆಟ್'ನಲ್ಲಿ ಭಾರಿ ಸದ್ದು ಮಾಡುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಈ ಕಾರಿಗೆ ಸಂಬಂಧಿಸಿದ ವೀಡಿಯೊವನ್ನು ಅರುಣ್ ಸ್ಮೋಕಿ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಕಾರನ್ನು ಸ್ಕ್ರಾಪ್'ಗಳಿಂದ ತಯಾರಿಸಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಈ ಕಾರನ್ನು ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗಿದೆ. ಕಾರಿಗೆ ಹಸಿರು ಬಣ್ಣವನ್ನು ನೀಡಲು ಹಸಿರು ಬಣ್ಣದ ಪೋಸ್ಟರ್‌ಗಳನ್ನು ಬಳಸಲಾಗಿದೆ. ಸ್ಕ್ರಾಪ್'ನಿಂದ ತಯಾರಾಗಿರುವ ಈ ಕಾರಿನಲ್ಲಿ ಹಲವಾರು ಕೊರತೆಗಳಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಈ ಕಾರಿನ ಫಿನಿಶಿಂಗ್ ಕೂಡ ಸರಿಯಾಗಿಲ್ಲ. ಈ ಕಾರು ಇದುವರೆಗೂ ಇಂಟರ್'ನೆಟ್'ನಲ್ಲಿ ಕಾಣಿಸಿಕೊಂಡ ಲ್ಯಾಂಬೊರ್ಗಿನಿ ಕಾರಿನ ಪ್ರತಿಕೃತಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಈ ಕಾರಿನ ಎಲ್ಲಾ ಎಕ್ಸ್ ಟಿರಿಯರ್ ಪ್ಯಾನೆಲ್ ಗಳನ್ನು ಫ್ಲೆಕ್ಸ್ ಬ್ಯಾನರ್‌ನಿಂದ ತಯಾರಿಸಲಾಗಿದೆ. ಜೊತೆಗೆ ಹೆಡ್‌ಲೈಟ್, ಏರ್ ಡಕ್ಟ್ ಎಲ್ಲವನ್ನೂ ಕೈಯಿಂದ ತಯಾರಿಸಲಾಗಿದೆ.

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಕೇರಳದ ಇಡುಕ್ಕಿ ಜಿಲ್ಲೆಯ ಯುವಕನೊಬ್ಬ ಈ ಕಾರನ್ನು ನಿರ್ಮಿಸಿದ್ದಾನೆ. ಆತ ಬಾಲ್ಯದಿಂದಲೂ ಕಾರುಗಳ ಬಗ್ಗೆ ಆಸಕ್ತಿ ಹೊಂದಿದ್ದ. ಹಲವು ದಿನಗಳಿಂದ ಕಾರನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದ. ಕೊನೆಗೆ ಜನರು ಬಳಸಿ ಬಿಸಾಡಿದ ವಸ್ತುಗಳನ್ನು ಬಳಸಿ ಈ ಕಾರನ್ನು ತಯಾರಿಸಿದ್ದಾನೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಫ್ರೇಮ್ ಹಾಗೂ ಅಲಾಯ್ ವ್ಹೀಲ್ ಅನ್ನು ಹತ್ತಿರದ ಗ್ಯಾರೇಜ್‌ನಲ್ಲಿ ನಿರ್ಮಿಸಲಾಗಿದೆ. ಫ್ರೇಮ್ ಸಿದ್ಧವಾದ ನಂತರ, ಅಲಾಯ್ ವ್ಹೀಲ್ ತಯಾರಿಸಲಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಹಳೆಯ ಮಾರುತಿ 800 ಕಾರಿನ ಟಯರ್ ಅನ್ನು ಹತ್ತಿರದ ಗ್ಯಾರೇಜ್‌ನಿಂದ ಖರೀದಿಸಲಾಗಿದೆ.

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಲ್ಯಾಂಬೊರ್ಗಿನಿ ಕಾರಿನಲ್ಲಿರುವಂತೆ ಎಂಜಿನ್ ಅನ್ನು ಹಿಂಭಾಗದಲ್ಲಿ ಇರಿಸಲಾಗಿದೆ. ಜೊತೆಗೆ ಗಾಜಿನ ರೂಫ್ ನೀಡಲಾಗಿದೆ. ಈ ಕಾರಿನಲ್ಲಿ ಹೀರೋ ಗ್ಲಾಮರ್ ಬೈಕಿನ ಎಂಜಿನ್ ಬಳಸಲಾಗಿದೆ. ಫ್ಯೂಯಲ್ ಫಿಲ್ಲರ್ ಕ್ಯಾಪ್ ಅನ್ನು ಹಳೆಯ ಪ್ಲಾಸ್ಟಿಕ್ ಕ್ಯಾನ್‌ನಿಂದ ತಯಾರಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ನೋಡುವ ಮೂಲಕ ಈ ಕಾರನ್ನು ತಯಾರಿಸಿದ್ದೇನೆ ಎಂದು ಕಾರನ್ನು ಅಭಿವೃದ್ದಿಪಡಿಸಿರುವ ಯುವಕ ತಿಳಿಸಿದ್ದಾನೆ. ಈ ಕಾರಿನೊಳಗೆ ಪವರ್ ವಿಂಡೋ ಸ್ವಿಚ್, ಮ್ಯೂಸಿಕ್ ಸಿಸ್ಟಂ, ರಿವರ್ಸ್ ಹಾಗೂ ಫ್ರಂಟ್ ವೀವ್ ಕ್ಯಾಮೆರಾ ಹಾಗೂ ಸ್ಪೀಡೋ ಮೀಟರ್'ಗಳನ್ನು ಅಳವಡಿಸಲಾಗಿದೆ.

ಕಾರಿನೊಳಗಿರುವ ಡ್ಯಾಶ್‌ಬೋರ್ಡ್ ಅನ್ನು ಸಹ ಸ್ಕ್ರಾಪ್'ನಿಂದ ತಯಾರಿಸಲಾಗಿದೆ. ಈ ಎಲ್ಲಾ ಸಾಧನಗಳ ನಿಯಂತ್ರಣ ವ್ಯವಸ್ಥೆಯನ್ನು ಡ್ಯಾಶ್‌ಬೋರ್ಡ್‌ನಲ್ಲಿ ನೀಡಲಾಗಿದೆ. ಅವುಗಳನ್ನು ನಿರ್ವಹಿಸಲು ಅನೇಕ ಸ್ವಿಚ್‌ಗಳನ್ನು ಸಹ ನೀಡಲಾಗಿದೆ. ಈ ಕಾರು ನಾಲ್ಕು ಗೇರ್‌ಗಳ ಜೊತೆಗೆ ರಿವರ್ಸ್ ಗೇರ್ ಅನ್ನು ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸ್ಕ್ರಾಪ್'ಗಳಿಂದ ತಯಾರಾಯ್ತು ಅತಿ ಚಿಕ್ಕ ಲ್ಯಾಂಬೊರ್ಗಿನಿ ಕಾರು

ಗಮನಿಸಬೇಕಾದ ಸಂಗತಿಯೆಂದರೆ ಈ ಕಾರು ಹೀರೋ ಗ್ಲಾಮರ್‌ನಲ್ಲಿರುವ 125 ಸಿಸಿಯ ಎಂಜಿನ್ ಹೊಂದಿದೆ. ಕಾರಿನೊಳಗೆ ಇಬ್ಬರು ಕುಳಿತುಕೊಳ್ಳಬಹುದು. ಈ ಕಾರು ಲ್ಯಾಂಬೊರ್ಗಿನಿ ಕಾರಿನ ಮೂಲ ಮಾದರಿಗಿಂತ ಚಿಕ್ಕದಾಗಿದೆ. ಈ ಕಾರಣಕ್ಕೆ ಒಳಗೆ ಹೋಗುವುದಕ್ಕೆ ಹಾಗೂ ಹೊರಕ್ಕೆ ಬರುವುದಕ್ಕೆ ತುಸು ಕಷ್ಟವಾಗುತ್ತದೆ. ಈ ಚಿತ್ರಗಳನ್ನು ಅರುಣ್ ಸ್ಮೋಕಿ ಯೂಟ್ಯೂಬ್ ಚಾನೆಲ್ ನಿಂದ ಪಡೆಯಲಾಗಿದೆ.

Most Read Articles

Kannada
English summary
Lamborghini Replica made from scrap materials. Read in Kannada.
Story first published: Wednesday, January 6, 2021, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X