ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ನಟಿ ಲಾರಾ ದತ್ತಾರವರು ಶೀಘ್ರದಲ್ಲೇ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಅವತಾರದಲ್ಲಿ ಅವರು ರಾಯಲ್ ಎನ್‌ಫೀಲ್ಡ್ ಬೈಕ್‌ ಸವಾರಿ ಮಾಡಲಿದ್ದಾರೆ. ಈ ಕುರಿತು ಮಾತನಾಡಿರುವ ಲಾರಾ ದತ್ತಾರವರು ಬೈಕ್ ಸವಾರಿ ಮಾಡುವಾಗ ತುಂಬಾ ಭಯಭೀತಳಾಗಿದ್ದೆ. ಬೈಕ್ ಸವಾರಿ ಸ್ಮರಣೀಯ ಅನುಭವ ನೀಡಿದೆ ಎಂದು ಹೇಳಿದ್ದಾರೆ.

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ಲಾರಾ ದತ್ತಾ ತಮ್ಮ ಮುಂಬರುವ ಸರಣಿ ಹಂಡ್ರೆಡ್‌ನಲ್ಲಿ ಸಾಂಪ್ರದಾಯಿಕ ಸೀರೆಯಲ್ಲಿ ಮಹಿಳಾ ಬೈಕ್ ರಾಲಿಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಕಾಣಬಹುದು. ಬೈಕ್ ಅನ್ನು ವಿಶಿಷ್ಟ ರೀತಿಯಲ್ಲಿ ಚಾಲನೆ ಮಾಡಿದ್ದಾರೆ. ಸುಮಾರು 20 ವರ್ಷಗಳ ನಂತರ ಬೈಕ್‌ ಓಡಿಸಿದ್ದಾಗಿ ಲಾರಾ ದತ್ತಾ ಹೇಳಿದ್ದಾರೆ.

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ಲಾರಾ ದತ್ತಾ ಹಂಡ್ರೆಡ್‌ನಲ್ಲಿ ಸೌಮ್ಯಾ ಶರ್ಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ನವರಿ ಸೀರೆಯಲ್ಲಿ ಓಡಿಸುವುದು ಹೊಸ ಅನುಭವವಾಗಿದೆ. ಈ ಮುಂಚೆ ಈ ರೀತಿಯ ಪಾತ್ರವನ್ನು ಮಾಡಿಲ್ಲ. ಯುವತಿಯಾಗಿದ್ದಾಗ ನಾನು ಬೈಕು ಸವಾರಿ ಮಾಡುತ್ತಿದ್ದೆ. ಮುಂಬೈಗೆ ಬಂದ ನಂತರ ಬೈಕ್ ಚಾಲನೆ ಮಾಡಿಲ್ಲ ಎಂದು ಹೇಳಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

20 ವರ್ಷಗಳ ನಂತರ ಬೈಕ್ ಚಾಲನೆ ಮಾಡಿದೆ. ಈ ಕಾರಣಕ್ಕೆ ಸೀರೆಯಲ್ಲಿ ಬೈಕ್ ಸವಾರಿ ಮಾಡಲು ಹೆದರಿಕೆಯಾಯಿತು. ರೈಡರ್ ಗುಂಪಿನ ಭಾಗವಾಗಿರುವ ಮಹಿಳೆಯರೊಂದಿಗೆ ಬೈಕ್ ಚಾಲನೆ ಮಾಡಲು ನನಗೆ ಅವಕಾಶ ಸಿಕ್ಕಿತು ಎಂದು ಅವರು ಹೇಳಿದರು.

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ಲಾರಾ ದತ್ತಾ ಅವರು ಹಿಂದೆ ಅನೇಕ ಕಾರ್ಯಗಳಿಗಾಗಿ ಬೈಕ್ ಚಾಲನೆ ಮಾಡಿದ್ದಾಗಿ ಹೇಳಿದ್ದಾರೆ. ಈ ದೃಶ್ಯವನ್ನು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಅನುಭವವೆಂದು ಬಣ್ಣಿಸಿದ್ದಾರೆ. ಈ ದೃಶ್ಯದಲ್ಲಿ ನಟಿಸುವಾಗ ತಾವು ಹಾಗೂ ರೈಡರ್ ಗುಂಪು ಎಂಜಾಯ್ ಮಾಡಿದ್ದಾಗಿ ಹೇಳಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ದೇಶಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. ಈ ಬೈಕ್‌ಗಳು ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲಿಯೂ ಜನಪ್ರಿಯವಾಗಿವೆ. ಅನೇಕ ಬಾಲಿವುಡ್‌ ನಟರು ಸಹ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹೊಂದಿದ್ದಾರೆ.

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ಬಾಲಿವುಡ್‌ನ ಅನೇಕ ನಟ-ನಟಿಯರು ಬೈಕ್‌ಗಳ ಬಗ್ಗೆ ಕ್ರೇಜ್ ಹೊಂದಿದ್ದು, ಬೈಕ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಕ್ರಿಕೆಟಿಗ ಸಂಜು ಸ್ಯಾಮ್ಸನ್ ಕೂಡ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಅಭಿಮಾನಿಯಾಗಿದ್ದು, ಇತ್ತೀಚೆಗಷ್ಟೇ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೊಂದಿಗೆ ಕಾಣಿಸಿಕೊಂಡಿದ್ದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೊಸ ಚಿತ್ರಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಲ್ಲಿ ಕಾಣಿಸಿಕೊಂಡ ಲಾರಾ ದತ್ತಾ

ಲಾರಾ ದತ್ತಾರವರು ತಮ್ಮ ಹೊಸ ಸರಣಿಯ ಬಗ್ಗೆ ಹಾಗೂ ಬೈಕ್ ಸವಾರಿ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಹಂಡ್ರೆಡ್‌ ಸರಣಿಯು ಏಪ್ರಿಲ್ 25ರಂದು ಬರಲಿದ್ದು, ಇದರಲ್ಲಿ ಅವರು ಬೈಕ್ ಸವಾರಿ ಮಾಡುವುದನ್ನು ಕಾಣಬಹುದು.

Article Published On: Saturday, April 25, 2020, 16:57 [IST]
English summary
Lara Dutta seen riding Royal Enfield bike in new show. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+