ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಸೂಯೆಜ್ ಕಾಲುವೆ ಪ್ರಪಂಚದ ಸರಕು ಸಾಗಣೆಯ ಪ್ರಮುಖ ಜಲಮಾರ್ಗವಾಗಿದೆ. ವಿಶ್ವದ ಸುಮಾರು 12%ನಷ್ಟು ಸರಕು ಸೂಯೆಜ್ ಕಾಲುವೆಯ ಮೂಲಕ ಹಾದು ಹೋಗುತ್ತದೆ. ಸೂಯೆಜ್ ಕಾಲುವೆ ಮೂಲಕ ಕಡಿಮೆ ಅಂತರದಲ್ಲಿ ಏಷ್ಯಾದಿಂದ ಯುರೋಪ್ ತಲುಪಬಹುದು.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಈ ಕಾಲುವೆ ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಸೂಯೆಜ್ ಕಾಲುವೆ 163 ಕಿ.ಮೀ ಉದ್ದ ಹಾಗೂ 300 ಮೀ ಅಗಲವಿದೆ. ಸಮುದ್ರ ಮಾರ್ಗದಲ್ಲಿ ಏಷ್ಯಾದಿಂದ ಯುರೋಪಿಗೆ ಪ್ರಯಾಣಿಸಲು 34 ದಿನಗಳು ಬೇಕಾಗುತ್ತವೆ. ಹಡಗುಗಳು ಈ ಕಾಲುವೆ ದಾಟಲು 16 ಗಂಟೆ ತೆಗೆದುಕೊಳ್ಳುತ್ತವೆ.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಸೂಯೆಜ್ ಕಾಲುವೆ ವಿಶ್ವ ಸರಕು ಸಾಗಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇತ್ತೀಚಿಗೆ ತೈವಾನಿನ ಎವರ್ ಗ್ರೀನ್ ಮೆರೈನ್ ಕಾರ್ಪೊರೇಶನ್ ಒಡೆತನದ ಬೃಹತ್ ಸರಕು ಹಡಗು ಸೂಯೆಜ್ ಕಾಲುವೆ ದಾಟುವ ವೇಳೆ ಅವಘಡ ಸಂಭವಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಈ ಹಡಗು ಸೂಯೆಜ್ ಕಾಲುವೆಯ ಎರಡೂ ದಡಗಳನ್ನು ಅಪ್ಪಳಿಸಿದೆ. ಈ ಬೃಹತ್ ಹಡಗು ಸೂಯೆಜ್ ಕಾಲುವೆಯ ಅಗಲಕ್ಕಿಂತ ಉದ್ದವಾಗಿರುವುದೇ ಈ ದುರಂತಕ್ಕೆ ಕಾರಣವೆಂದು ತಿಳಿದು ಬಂದಿದೆ.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಈ ಹಡಗು 400 ಮೀಟರ್ ಉದ್ದವಿದ್ದರೆ, ಸೂಯೆಜ್ ಕಾಲುವೆ 300 ಮೀಟರ್ ಅಗಲವನ್ನು ಹೊಂದಿದೆ. ಈ ಕಾರಣಕ್ಕೆ ಈ ಬೃಹತ್ ಹಡಗು ಕಾಲುವೆಯ ಉದ್ದಕ್ಕೂ ಸಿಲುಕಿ ಕೊಂಡಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗಾಟವು ಸ್ಥಗಿತಗೊಂಡಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಬೊಕ್ಲೈನ್ ಯಂತ್ರೋಪಕರಣಗಳ ನೆರವಿನೊಂದಿಗೆ ಹಡಗನ್ನು ಹಿಂದಕ್ಕೆ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬಾರ್ಜ್'ಗಳ ಸಹಾಯದಿಂದ ಹಡಗನ್ನುಸಾಗಿಸುವ ಪ್ರಯತ್ನಗಳು ಸಹ ಸಾಗುತ್ತಿವೆ. ಸೂಯೆಜ್ ಕಾಲುವೆಯ ಕೆಲವು ಭಾಗಗಳಲ್ಲಿ ದ್ವಿಮುಖ ಪಥಗಳಿವೆ.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಆದರೆ ಹಡಗು ಸಿಲುಕಿರುವ ಮಾರ್ಗದಲ್ಲಿ ಒಂದೇ ಪಥವಿರುವ ಕಾರಣಕ್ಕೆ ಈ ಮಾರ್ಗದಲ್ಲಿನ ಸಾಗಾಟವು ಸ್ಥಗಿತಗೊಂಡಿದೆ. ಸೂಯೆಜ್ ಕಾಲುವೆಯಲ್ಲಿ ಸಾಗುವ ನೂರಾರು ಹಡಗುಗಳ ಸಾಗಾಟವು ಸ್ಥಗಿತಗೊಂಡಿರುವುದರಿಂದ ಪ್ರತಿ ಗಂಟೆಗೆ ರೂ.3,000 ಕೋಟಿ ನಷ್ಟವಾಗುತ್ತಿದೆ. ಇದರ ಜೊತೆಗೆ ವಿವಿಧ ಸರಕುಗಳನ್ನು ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟ ದೇಶಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಕಚ್ಚಾ ತೈಲವನ್ನು ಸಾಗಿಸುವ ಟ್ಯಾಂಕರ್‌ಗಳ ಸಂಚಾರವು ಸ್ಥಗಿತಗೊಂಡಿರುವುದರಿಂದ ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಯುರೋಪಿನಿಂದ ಭಾರತಕ್ಕೆ ಕಾರುಗಳನ್ನು ಸಾಗಿಸುವ ಹಡಗುಗಳು ಸಹ ಈ ಮಾರ್ಗದ ಮೂಲಕವೇ ಸಾಗುತ್ತವೆ.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಇದರಿಂದಾಗಿ ಕಾರುಗಳ ವಿತರಣಾ ಅವಧಿ ಹೆಚ್ಚಾಗಲಿದೆ. ಅಗತ್ಯ ವಸ್ತು ಹಾಗೂ ಕಚ್ಚಾ ಸಾಮಗ್ರಿಗಳ ಸಾಗಾಟಕ್ಕೆ ಅಡಚಣೆ ಉಂಟಾಗಿರುವುದು ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹಲವು ದೇಶಗಳು ಕಳವಳ ವ್ಯಕ್ತಪಡಿಸಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಈ ಘಟನೆಗೆ ಸಂಬಂಧಿಸಿದಂತೆ ಹಡಗು ಕಂಪನಿಯ ಮಾಲೀಕರು ಕ್ಷಮೆಯಾಚಿಸಿದ್ದಾರೆ. ಹಡಗನ್ನು ಹಿಂದಕ್ಕೆ ತರುವ ಪ್ರಯತ್ನಗಳು ಭರದಿಂದ ಸಾಗಿವೆ. ಎರಡು ರಕ್ಷಣಾ ಹಡಗುಗಳು ಈ ಹಡಗಿಗೆ ಯಾವುದೇ ಹಾನಿಯಾಗದಂತೆ ಹಿಂದಕ್ಕೆ ತರುವ ಪ್ರಯತ್ನದಲ್ಲಿವೆ.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

8 ಬಾರ್ಜ್ ಟ್ರಾಲರ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಗಳು ಹಡಗಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚು ಸಮರ್ಥ ಬಾರ್ಜ್‌ಗಳನ್ನು ನಿಯೋಜಿಸಲು ಚಿಂತನೆ ನಡೆಸಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಈ ಮಾರ್ಗದಲ್ಲಿ ಉಂಟಾಗಿರುವ ದಟ್ಟಣೆಯನ್ನು ನಿಯಂತ್ರಿಸಲು ಈಜಿಪ್ಟ್ ಸರ್ಕಾರವು ಹಳೆಯ ಸೂಯೆಜ್ ಕಾಲುವೆಯನ್ನು ತೆರೆದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕು ಸಾಗಾಟವು ಮತ್ತಷ್ಟು ನಿಧಾನವಾಗುವ ಸಾಧ್ಯತೆಗಳಿವೆ.

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಸೂಯೆಜ್ ಕಾಲುವೆಯಲ್ಲಿ ಸಿಲುಕಿರುವ ಎವರ್ ಗ್ರೀನ್ ಹೊರ ಬಂದರೆ ಮಾತ್ರ ಸೂಯೆಜ್ ಕಾಲುವೆಯಲ್ಲಿನ ಸಾಗಾಟವು ಸಹಜ ಸ್ಥಿತಿಗೆ ಬರಲಿದೆ. ವಿಶ್ವದ ಅತಿದೊಡ್ಡ ಹಡಗುಗಳಲ್ಲಿ ಒಂದಾದ ಎವರ್ ಗ್ರೀನ್ ಒಂದೇ ಬಾರಿಗೆ 20,000 ಕಂಟೇನರ್'ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರಪಂಚದ ಸರಕು ಸಾಗಾಟದ ಮೇಲೆ ಪರಿಣಾಮ ಬೀರಿದ ಸೂಯೆಜ್ ಕಾಲುವೆಯಲ್ಲಿನ ಅವಘಡ

ಈ ಹಡಗನ್ನು 2018ರಲ್ಲಿ ನಿರ್ಮಿಸಲಾಯಿತು. ಈ ಹಡಗನ್ನು ಭಾರತೀಯ ನಾವಿಕರ ತಂಡವು ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ. ಈ ಹಡಗಿನಲ್ಲಿ 25 ಮಂದಿ ಸಿಬ್ಬಂದಿ ಇದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

Most Read Articles

Kannada
English summary
Largest ship blocks Suez canal and interrupts commodity transportation of the world. Read in Kannada.
Story first published: Friday, March 26, 2021, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X