Auto Kannadiga: "ಕನ್ನಡದ ತೇರು" ಆಟೋ ಹತ್ತಿ ಪರ ಭಾಷಿಕರು ಕನ್ನಡ ಕಲಿಬಹುದು!
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengalutu) ನಿಮಗೆ ಕನ್ನಡ ಮಾತನಾಡುವರೆ ಸಿಗುವುದು ಕಡಿಮೆಯಾಗುತ್ತಿದೆ. ಸಿಲಿಕಾನ್ ಸಿಟಿಯಲಿ ಕನ್ನಡಿಗರೇ ಕನ್ನಡ ಭಾಷೆ ಮಾತನಾಡಲು ಹಿಂದೇಟು ಹಾಕ್ತಾರೆ. ಉದ್ಯೋಗ ಅರಸಿಕೊಂಡು ಹೊರರಾಜ್ಯಗಳಿಂದ ಎಷ್ಟೋ ಪರಭಾಷಿಕರು ಬೆಂಗಳೂರಿಗೆ ಕಾಲಿಡುತ್ತಾರೆ. ನಂತರ ಇಲ್ಲೇ ಜೀವನ ನಡೆಸುತ್ತಾರೆ. ಆದ್ರೆ ಕನ್ನಡ ಕಲಿಯುವ ಬಗ್ಗೆ ಅಸಡ್ಡೆ ತೋರುತ್ತಾರೆ. ಕಲಿಯುವ ಅನಿರ್ವಾಯತೆ ಕೂಡ ಬರಲ್ಲ. ಇದರ ನಡುವೆ ಬೆಂಗಳೂರು ಆಟೋ ಚಾಲಕ ಪರ ಭಾಷಿಗರಿಗೆ ಸ್ವಲ್ಪವಾದರೂ ಕನ್ನಡ ಭಾಷೆಯಲ್ಲಿ ಕಲಿಸಲು ವಿನೂತನ ಪ್ರಯತ್ನ ಮಾಡಿದ್ದಾರೆ. ಇದು ಆಟೋ ಚಾಲಕನ ಸಿಂಪಲ್ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಟೋ ಚಾಲಕ ತನ್ನ ಆಟೋದಲ್ಲಿ ಕನ್ನಡ ಪೋಸ್ಟರ್‌ಅನ್ನು ಅಂಟಿಸಿದ್ದಾನೆ. ಇದು ಪ್ರಯಾಣಿಕರಿಗೆ ಆಟೋದಲ್ಲಿ ಪ್ರಯಾಣ ಮಾಡುವ ಸಮಯದಲ್ಲಿಯೇ ಕನ್ನಡ ಕಲಿಯುವ ಅವಕಾಶ ಮಾಡಿದ್ದಾರೆ. ಆಟೋ ಕನ್ನಡಿಗನೊಂದಿಗೆ ಕನ್ನಡ ಕಲಿಯಿರಿ' ಎನ್ನುವ ಶೀರ್ಷಿಕೆಯೊಂದಿಗೆ ಸೋಶಿಯಲ್ ಮೀಡಿಯಾದ ಪೋಸ್ಟರ್ ವೈರಲ್ ಆಗಿದೆ. ಈ ವೈರಲ್ ಆಟೋ ಡ್ರೈವರ್ ಸಂದರ್ಶನದ ವೀಡೀಯೋ ಇಲ್ಲಿದೆ.
ಕನ್ನಡ ಗೊತ್ತಿಲ್ಲದವರೆಗೆ ʼಲರ್ನ್ ಕನ್ನಡ ವಿತ್ ಆಟೋ ಕನ್ನಡಿಗʼ (Learn Kannada With Auto Kannadiga) ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಪರ ಭಾಷಿಗರಿಗೆ ಸಾಮಾನ್ಯ ಕನ್ನಡ ಪದಗಳನ್ನು ಕಲಿಸುವಂತಹ ಪ್ರಯತ್ನ ಆಟೋ ಡ್ರೈವರ್ ಮಾಡಿದ್ದಾರೆ. ಪ್ಯಾಸೆಂಜರ್ ಕುಳಿತುಕೊಳ್ಳುವ ಜಾಗದಲ್ಲಿ ಆಟೋ ಚಾಲಕರು ಸಾಮಾನ್ಯ ಕನ್ನಡ ಪದಗಳನ್ನ ಬರೆದಿರುವ ಪೋಸ್ಟರ್‌ವೊಂದನ್ನು ಅಂಟಿಸಿದ್ದಾರೆ. ಇದು ಆಟೋ ಚಾಲಕರ ಜೊತೆ ಮಾತನಾಡಬೇಕಾದ ಸಾಮ್ಯನ್ಯ ಪದಗಳಾಗಿವೆ.
ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಪದಗಳನ್ನು ಸೇರಿಸಿದ್ದಾರೆ. ಈ ಪೋಸ್ಟರ್ ನೋಡಿ ಯಾರೂ ಬೇಕಾದರು ಕನ್ನಡ ಬರದವರು ಸುಲಭವಾಗಿ ಕನ್ನಡದಲ್ಲಿ ವ್ಯವಹರಿಸಬಹುದಾಗಿದೆ. ಈ ಪೋಸ್ಟರ್‌ನಲ್ಲಿ ಕನ್ನಡದಲ್ಲಿ ದೈನಂದಿನವಾಗಿ ಆಟೋ ಡ್ರೈವರ್ ಜೊತೆ ಗ್ರಾಹಕರು ಬಳಕೆ ಮಾಡುವ ಹಲವು ಸಾಲುಗಳನ್ನು ಹೊಂದಿದೆ. 'Namasakara sir' (Hello, sir) ಎನ್ನುವ ಸಾಲುಗಳು ಇಂಗ್ಲೀಷ್‌ನಲ್ಲಿದೆ.

'Elli idira' (Where are you?), "Yeshtu aaytu" (How much?) ಹಾಗೂ "UPI idya athva cash aa?" (Is it UPI or cash?) ಎನ್ನುವ ಸಾಲುಗಳನ್ನು ಅವರು ಅಂಟಿಸಿರುವ ಪೋಸ್ಟರ್ ನಲ್ಲಿ ಪೋಸ್ಟರ್‌ಗಳ ಆಚೆಗೆ, ಚಾಲಕ ಆನ್‌ಲೈನ್‌ನಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. Instagram, YouTube ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಕೂಡ ಕನ್ನಡ ಕ್ಲಾಸ್ ಶೇರ್ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications