45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಲೀಲಾ ಪ್ಯಾಲೇಸ್ ಹೊಟೇಲ್ ಗ್ರೂಪ್ ಭಾರತದ ಜನಪ್ರಿಯ ಐಷಾರಾಮಿ ಹೋಟೆಲ್ ಗಳಲ್ಲಿ ಒಂದಾಗಿದೆ. ಈ ಕಂಪನಿಯು ಭಾರತದ ವಿವಿಧ ನಗರಗಳಲ್ಲಿ ಹಲವಾರು ಹೋಟೆಲ್‌ಗಳನ್ನು ಹೊಂದಿದೆ. ಲೀಲಾ ಪ್ಯಾಲೇಸ್ ಗ್ರೂಪ್ ಗಾಗಿ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು 45 ಕಾರುಗಳನ್ನು ವಿತರಿಸಿದೆ.

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಬಿಎಂಡಬ್ಲ್ಯು ಕಂಪನಿಯ 7 ಸೀರಿಸ್, 5 ಸೀರಿಸ್ ಹಾಗೂ ಎಕ್ಸ್ 5 ಕಾರುಗಳನ್ನು ಲೀಲಾ ಹೊಟೇಲ್ ಗ್ರೂಪ್ ಗೆ ವಿತರಿಸಲಾಗಿದೆ. ಈ ಹೊಸ ಕಾರುಗಳ ಮೂಲಕ ತಮ್ಮ ಅತಿಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ಲೀಲಾ ಗ್ರೂಪ್ ಮುಂದಾಗಿದೆ. ಲೀಲಾ ಗ್ರೂಪ್ ಪ್ರತಿ ಮಾದರಿಯಲ್ಲಿ ಎಷ್ಟು ಕಾರುಗಳನ್ನು ಖರೀದಿಸಿದೆ ಎಂಬ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ಲೀಲಾ ಗ್ರೂಪ್‌ಗೆ ಕಾರುಗಳನ್ನು ವಿತರಿಸುತ್ತಿರುವ ಬಿಎಂಡಬ್ಲ್ಯು ಕಂಪನಿಯು ಅಲ್ಲಿನ ಸಿಬ್ಬಂದಿಗೆ ತರಬೇತಿಯನ್ನು ಸಹ ನೀಡಲಿದೆ.

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಲೀಲಾ ಗ್ರೂಪ್‌ ಸಿಬ್ಬಂದಿಗೆ ಬಿಎಂಡಬ್ಲ್ಯು ಕಂಪನಿಯು ಕಾರುಗಳ ಸಾಮರ್ಥ್ಯ, ಪರ್ಫಾಮೆನ್ಸ್ ಹಾಗೂ ಹೊಸ ಫೀಚರ್ ಗಳ ಬಗ್ಗೆ ವಿವರಿಸಲಿದೆ. ಇದರಿಂದಾಗಿ ಚಾಲಕರು ಹೊಸ ಕಾರುಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಹೊಸ ಕಾರುಗಳನ್ನು ಪರೀಕ್ಷಿಸಿದ ನಂತರ ಅತಿಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲಾಗುವುದು. ಲೀಲಾ ಹೊಟೇಲ್ ಗೆ ಬರುವ ಅತಿಥಿಗಳು ಬಿಎಂಡಬ್ಲ್ಯು ವಾಹನಗಳ ಪ್ರಯಾಣವನ್ನು ಆನಂದಿಸಬಹುದು. ಲೀಲಾ ಗ್ರೂಪ್ ಖರೀದಿಸಿರುವ ಎಲ್ಲಾ ಬಿಎಂಡಬ್ಲ್ಯು ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ ಎಂಬುದು ವಿಶೇಷ.

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಲೀಲಾ ಗ್ರೂಪ್‌ಗೆ ಬಿಎಂಡಬ್ಲ್ಯು ಕಂಪನಿಯು ವಿತರಿಸಿರುವ 5 ಸೀರಿಸ್ ನ ಮೂಲ ಮಾದರಿಯ ಬೆಲೆ ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ರೂ.55 ಲಕ್ಷಗಳಾಗಿದೆ. ಬಿಎಂಡಬ್ಲ್ಯು ಎಕ್ಸ್ 5ನ ಬೇಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.75 ಲಕ್ಷಗಳಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಲೀಲಾ ಗ್ರೂಪ್ ಖರೀದಿಸಿರುವ 3 ಮಾದರಿಗಳಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಮಾದರಿಯು ಹೆಚ್ಚು ಬೆಲೆಯನ್ನು ಹೊಂದಿದೆ. ಬಿಎಂಡಬ್ಲ್ಯು 7 ಸೀರಿಸ್ ನ ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.35 ಕೋಟಿಗಳಾಗಿದೆ.

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಈ ಕಾರುಗಳ ಆನ್-ರೋಡ್ ಬೆಲೆ ಇನ್ನೂ ಹೆಚ್ಚಾಗುತ್ತದೆ. ಭಾರತದ ಅನೇಕ ಪ್ರಮುಖ ಹೋಟೆಲ್‌ಗಳು ತಮ್ಮ ಅತಿಥಿಗಳನ್ನು ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಂತಹ ಸ್ಥಳಗಳಿಂದ ಪಿಕ್ ಅಪ್ ಹಾಗೂ ಡ್ರಾಪ್ ಮಾಡಲು ದುಬಾರಿ ಬೆಲೆಯ ಕಾರುಗಳನ್ನು ಬಳಸುತ್ತವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

45 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿದ ಐಷಾರಾಮಿ ಹೋಟಲ್

ಲೀಲಾ ಗ್ರೂಪ್ ಖರೀದಿಸಿರುವ ಬಿಎಂಡಬ್ಲ್ಯು ಕಾರುಗಳನ್ನು ಹೊಟೇಲ್ ಗೆ ಭೇಟಿ ನೀಡುವ ಅತಿಥಿಗಳಿಗಾಗಿ ಬಳಸಲಾಗುತ್ತದೆ. ಬಿಎಂಡಬ್ಲ್ಯು ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವುದು ಲೀಲಾ ಗ್ರೂಪ್ ಹೋಟೆಲ್‌ಗಳಿಗೆ ಭೇಟಿ ನೀಡುವ ಅತಿಥಿಗಳಿಗೆ ವಿಭಿನ್ನ ಅನುಭವವನ್ನು ನೀಡಲಿದೆ.

Most Read Articles

Kannada
English summary
Leela group gets the delivery of 45 BMW cars. Read in Kannada.
Story first published: Saturday, August 29, 2020, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X