ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದ ಚಿರತೆ..!!

Written By:

ರಾಜಧಾನಿ ದೆಹಲಿ ಬಳಿ ಇರುವ ಮಾರುತಿ ಸುಜುಕಿ ಮನೆಸರ್ ಕಾರು ಉತ್ಪಾದನಾ ಘಟಕಕ್ಕೆ ಚಿರತೆಯೊಂದು ನುಗ್ಗಿರುವ ಘಟನೆ ನಡೆದಿದೆ. ಸದ್ಯ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

To Follow DriveSpark On Facebook, Click The Like Button
ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದ ಚಿರತೆ..!!

ನಿನ್ನೆ ಸಾಯಂಕಾಲ 7 ಗಂಟೆಗೆ ಹೊತ್ತಿಗೆ ನಾಲ್ಕು ವರ್ಷದ ಚಿರತೆಯೊಂದು ಮನೆಸರ್ ಉತ್ಪಾದನಾ ಘಟಕದ ಹಿಂಬದಿ ಪ್ರವೇಶ ದ್ವಾರದ ಮೂಲಕ ಒಳ ನುಗ್ಗಿದ್ದು, ಭದ್ರತಾ ಸಿಬ್ಬಂದಿಯ ಮುಂಜಾಗ್ರತಾ ಕ್ರಮದಿಂದಾಗಿ ಎಲ್ಲ ಕಾರ್ಮಿಕರನ್ನು ತಕ್ಷಣವೇ ಹೊರ ಕಳುಹಿಸಿಲಾಗಿದೆ.

ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದ ಚಿರತೆ..!!

ಆದ್ರೆ ಮಾರುತಿ ಸುಜುಕಿ ಮನೆಸರ್ ಕಾರು ಉತ್ಪಾದನಾ ಘಟಕವು ಬರೋಬ್ಬರಿ 600 ಎಕರೆಯಷ್ಟು ವಿಸ್ತಾರವಾಗಿರುವ ಹಿನ್ನೆಲೆ ಚಿರತೆ ಪತ್ತೆ ಹಚ್ಚಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮಾರುತಿ ಸುಜುಕಿ ಭದ್ರತಾ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

Recommended Video
Tata Nexon Price And Features Variant-wise - DriveSpark
ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದ ಚಿರತೆ..!!

ಸದ್ಯ ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕದ ಇಂಜಿನಿಯರಿಂಗ್ ವಿಭಾಗದಲ್ಲಿ ಚಿರತೆ ಅಡುಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು, ಚಿರತೆ ಹಿಡಿಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದ ಚಿರತೆ..!!

ಇನ್ನು ಮನೆಸರ್ ಕಾರು ಉತ್ಪಾದನಾ ಘಟಕವು ಅರಾವಳಿ ಪರ್ವತ ಶ್ರೇಣಿಗೆ ಹತ್ತಿರದಲ್ಲೇ ಇದ್ದು, ಆಹಾರ ಅರಸಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ನುಗ್ಗಿದ ಚಿರತೆ..!!

ಕಾರು ಉತ್ಪಾದನಾ ಘಟಕಕ್ಕೆ ಚಿರತೆ ನುಗ್ಗಿದ ಪರಿಣಾಮ ಮನೆಸರ್ ಉತ್ಪಾದನಾ ಘಟಕ ನಿನ್ನೆಯಿಂದಲೇ ಸಂಪೂರ್ಣ ಸ್ಥಗಿತಗೊಂಡಿದ್ದು, ಮನೆಸರ್ ಸುತ್ತಮತ್ತಲಿನ ಜನತೆ ಕೂಡಾ ಭಯದಲ್ಲೇ ಬದುಕುವಂತಾಗಿದೆ.

English summary
Read in Kannada about Maruti Halts Production Momentarily At Its Manesar Plant.
Story first published: Friday, October 6, 2017, 18:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark