ಆಫ್ರಿಕಾ ದಟ್ಟಾರಣ್ಯದ ಹೈವೇಯಲ್ಲಿ ಸಿಂಹ ಕಾಳಗ
ದಕ್ಷಿಣ ಆಫ್ರಿಕಾದ ವನ್ಯ ಜೀವಿ ಸಂರಕ್ಷಣಾ ಕೇಂದ್ರದ ನಡುವೆ ಹಾದು ಹೋಗುವ ಹೈವೇಯಲ್ಲಿ ಸಿಂಹ ಕಾಳಗವು ಪ್ರವಾಸಿಗರನ್ನು ರೋಮಾಂಚನಗೊಳಿಸಿತ್ತಲ್ಲದೆ ಕೆಲವು ಸಮಯ ಭಯಭೀತರಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.
Also Read : ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ
ಸಫಾರಿ ಪಾರ್ಕ್ ರಸ್ತೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಸಿಂಹ ಘರ್ಜನೆಯನ್ನು ಕೇಳಿ ಗಲಿಬಿಲಿಗೊಂಡರು. ಅಲ್ಲದೆ ಕಾರಿನಲ್ಲೇ ಇದ್ದುಕೊಂಡು ರೋಚಕ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿರುವ ಕ್ರುಗರ್ ರಾಷ್ಟ್ರೀಯ ಪಾರ್ಕ್ ನಲ್ಲಿ ಘಟನೆ ನಡೆದಿತ್ತು. ಇನ್ನೇನು ಭಾರಿ ಹಸಿವಿನಲ್ಲಿದ್ದ ಸಿಂಹ ಹೆದ್ದಾರಿ ಮಧ್ಯದಲ್ಲೇ ಹರಿಣವೊಂದರ ಮೇಲೆ ದಾಳಿ ನಡೆಸಿತ್ತು.

ಒಂದಲ್ಲ ಎರೆಡೆರಡು ಸಿಂಹಗಳು ತಾನ್ಯಾಕೆ ಕಾಡಿಗೆ ರಾಜ ಎಂಬುದನ್ನು ಸಾಬೀತುಪಡಿಸುವಂತಿತ್ತು.

ಪ್ರತ್ಯಕ್ಷದರ್ಶಿಗಳ ಪ್ರಕಾರ ಆಹಾರವನ್ನು ಹುಡುಕಾಟದಲ್ಲಿದ್ದ ಸಿಂಹ ಸಂಪೂರ್ಣ ಗೇಮ್ ಪ್ಲಾನ್ ನೊಂದಿಗೆ ಅವಿತು ಕುಳಿತಿತ್ತು.

ಇದನ್ನರಿಯದ ಜಿಂಕೆ ಅತ್ತ ಬಂದಾಗ ಏಕಾಏಕಿ ಸಿನೆಮಾ ಶೈಲಿಯಲ್ಲಿ ದಾಳಿ ನಡೆಸಿತ್ತು ಎಂದು ಘಟನೆಯನ್ನು ವಿವರಿಸುತ್ತಾರೆ.

ಸದ್ಯ ಬಚಾವ್, ನಾವು ಕಾರಿನಲ್ಲಿದ್ದೆವು. ಅಬ್ಬಾ ಇದರಿಂದ ಸದ್ಯ ಸಿಂಹದ ಬಾಯಿಯಿಂದ ಬಚಾವಾದೆವು ಎಂದು ಕಾರು ಪ್ರಯಾಣಿಕರೊಬ್ಬರು ತಿಳಿಸುತ್ತಾರೆ.

ವನ್ಯಜೀವಿಗಳ ದರ್ಶನಕ್ಕಾಗಿ ಇಲ್ಲಿಗೆ ಭೇಟಿ ಕೊಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂತಹ ಘಟನೆಗಳು ಸಾಮಾನ್ಯವಾಗಿಬಿಟ್ಟಿದೆ.

ಅಂತಿಮವಾಗಿ ಬೇರೆ ದಾರಿಯಿಲ್ಲದೆ ಹೆಚ್ಚು ಭುಜಬಲ ಹೊಂದಿರುವ ಸಿಂಹಕ್ಕೆ ಜಿಂಕೆ ಶರಣಾಗಲೇ ಬೇಕಾಯಿತು.

ಹಸಿವು ನೀಗಿಸಿದ ಖುಷಿಯಲ್ಲಿ ಕ್ಯಾಮೆರಾಗೆ ಫೋಸ್ ಕೊಡುತ್ತಿರುವ ಸಿಂಹ ರಾಜ

ಜೀವಶಾಸ್ತ್ರದ ಮೂಲಭೂತ ತತ್ವವೇ ಇದು. ತನ್ನ ಅಸ್ತಿತ್ವಕ್ಕಾಗಿ ಒಂದು ಪ್ರಾಣಿಯು ಮಗದೊಂದು ಜೀವಿಯ ಪ್ರಾಣವನ್ನೇ ಕಿತ್ತೊಗೆಯುತ್ತದೆ. ಒಂದೆಡೆ ಜಿಂಕೆಯ ಬಗ್ಗೆ ಬೇಸರ ತರಿಸಿದರೂ ಸಿಂಹ ಯುದ್ಧ ಗೆದ್ದ ಖುಷಿಯಲ್ಲಿತ್ತು.

ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ

ಕಾರಿನ ಮೇಲೆ ಆಫ್ರಿಕನ್ ಗಜಪಡೆಯ ಸವಾರಿ


Click it and Unblock the Notifications








