ಹೆಲ್ಮೆಟ್‌ನಲ್ಲೇ ಲಭಿಸಲಿದೆ ಲೈವ್ ಮ್ಯಾಪ್ ಸೇವೆ
ರಷ್ಯಾ ಮೂಲದ ಲೈವ್ ಮ್ಯಾಪ್ ಕಂಪನಿಯೊಂದು ಹೊಸ ತಂತ್ರಜ್ಞಾನವನ್ನು ಕಂಡುಹುಡುಕಿದ್ದು, ಇದರ ನೆರವಿನಿಂದ ಹೆಲ್ಮೆಟ್‌ನಿಂದಲೇ ಲೈವ್ ಮ್ಯಾಪ್ ಸೇವೆಯನ್ನು ಪಡೆಯಬಹುದಾಗಿದೆ.
ಕೈಗಳ ಸಹಾಯವಿಲ್ಲದೆ ನೇವಿಗೇಷನ್ ಸೌಲಭ್ಯ ಒದಗಿಸುವುದು ಈ ವಿಧಾನದ ಪ್ರಮುಖ ಉದ್ದೇಶವಾಗಿದೆ. ನಾವು ನೋಡಿರುವಂತೆಯೇ ಕಾರುಗಳಲ್ಲಿ ಆಳವಡಿಸಲಾಗಿರುವ ನೇವಿಗೇಷನ್ ಡಿಸ್‌ಪ್ಲೇ ನೆರವನಿಂದ ಚಾಲಕರು ಸುಲಭವಾಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇದು ಬೈಕ್‌ಗಳಿಗೆ ಹೋಲಿಸಿದರೆ ಮಾಹಿತಿ ಪಡೆಯುವುದು ಸ್ವಲ್ಪ ಕ್ಲಿಷ್ಟಕರವಾಗಿದೆ. ಇದೇ ಕಾರಣಕ್ಕಾಗಿ ಹೆಲ್ಮೆಟ್‌ಗಳಲ್ಲೇ ಲೈವ್ ಮ್ಯಾಪ್ ಅಪ್‌ಡೇಷನ್ ವಿಧಾನ ಕುರಿತು ಕಂಪನಿ ಚಿಂತನೆ ನಡೆಸಿತ್ತು.

ಕಾರ್ಬರ್ ಫೈಬರ್‌ನಿಂತ ತಯಾರಿಸಲಾಗಿರುವ ಲೈವ್ ಮ್ಯಾಪ್ ಹೆಲ್ಮೆಟ್ ದರ 1 ಲಕ್ಷ ರು. ಅಂದಾಜಿಸಲಾಗಿದೆ.

ಇದರಲ್ಲಿ ಮೈಕ್ರೋ ಡಿಸ್‌ಪ್ಲೇ, ಲೈಟ್ ಸೆನ್ಸಾರ್, ಮೈಕ್ರೋಫೋನ್, ಇಯರ್ ಫೋನ್, ಎಲೆಕ್ಟ್ರಾನಿಕ್ ಮೈನ್ ಬೋರ್ಡ್ ಹಾಗೂ ಬ್ಯಾಟರಿ ಲಗತ್ತಿಸಲಾಗಿರುತ್ತದೆ.

ಆಡ್ರಾಯ್ಡ್ ತಲಹದಿಯಲ್ಲಿ ತಯಾರಿಸಲಾಗಿರುವ ಲೈವ್ ಮ್ಯಾಪ್‌ನಲ್ಲಿ ಜಗತ್ತಿನ ಎಲ್ಲ ದೇಶಗಳ ನಕ್ಷೆ ಲಭ್ಯವಿದ್ದು, ಇದು ಸ್ಥಳ ಮಾಹಿತಿ ಜತೆಗೆ ಹವಾಮಾನ ಹಾಗೂ ವಾಹನ ದಟ್ಟಣೆ ಬಗ್ಗೆ ಮಾಹಿತಿ ನೀಡಲಿದೆ.

ಇದು ಶಬ್ದ ಮೂಲಕವೂ ಮಾಹಿತಿ ರವಾನಿಸುತ್ತದೆ. ಹಾಗೊಂದು ವೇಳೆ ಅಪಘಾತ ಸಂಭವಿಸಿದ್ದೇ ಮಾಹಿತಿ ಕೂಡಾ ರವಾನಿಸಲಿದೆ.

ಲೈವ್ ಮ್ಯಾಪ್ 3000mAh ಬ್ಯಾಟರಿಗಳಿಂದ ನಿಯಂತ್ರಿಸಲ್ಪಡುತ್ತಿದ್ದು, 1.4 ಕೆ.ಜಿ ತೂಕವಿದೆ.

ಲೈವ್ ಮ್ಯಾಪ್ ತಯಾರಿಸುವುದಕ್ಕಾಗಿ ರಷ್ಯಾದಿಂದ ವಿವಿಧ ಸಂಸ್ಥೆಗಳಿಂದ ಆರ್ಥಿಕ ನೆರವು ಲಭಿಸಿದೆ. ಇದರಲ್ಲಿ ಮೊಸ್ಕೋ ವಿಜ್ಞಾನ ಇಲಾಖೆ ಹಾಗೂ ಕೈಗಾರಿಕಾ ಇಲಾಖೆ ಸೇರಿವೆ.


Click it and Unblock the Notifications








