ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ಕೆಲ ದಿನಗಳ ಹಿಂದೆ ಅಹಮದಾಬಾದ್-ಗಾಂಧಿನಗರ ಹೆದ್ದಾರಿಯಲ್ಲಿದ್ದ ಕೆರೆಯಲ್ಲಿ ಐಷಾರಾಮಿ ಕಾರೊಂದು ಮುಳುಗಿದ ಬಗ್ಗೆ ವರದಿಯಾಗಿತ್ತು. ಲಾಕ್‌ಡೌನ್ ಕಾರಣಕ್ಕೆ ನಿರ್ಜನವಾಗಿದ್ದ ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ.

ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಘಟನೆ ಮಾಸುವ ಮುನ್ನವೇ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಈ ಘಟನೆಯಲ್ಲಿ ನವವಿವಾಹಿತರು ಸ್ವಲ್ಪದರಲ್ಲೇ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ಕಳೆದ ಭಾನುವಾರ ಜಾರ್ಖಂಡ್‌ನಲ್ಲಿ ಈ ಘಟನೆ ನಡೆದಿದೆ. ಮದುವೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ನವವಿವಾಹಿತರ ಹೆಸರನ್ನು ಬಹಿರಂಗ ಪಡಿಸಿಲ್ಲ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ಪ್ರವಾಹ ಪರಿಸ್ಥಿತಿಯಿಂದಾಗಿ ನವ ದಂಪತಿ ಚಲಿಸುತ್ತಿದ್ದ ಹೋಂಡಾ ಸಿಟಿ ಕಾರು ನದಿಯ ಸೆಳೆತಕ್ಕೆ ಸಿಲುಕಿದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಗುಜರಾತ್‌ನಲ್ಲಿ ನಡೆದಿದ್ದ ಘಟನೆಗೆ ವೇಗವಾಗಿ ಕಾರು ಚಾಲನೆ ಮಾಡಿದ್ದು ಕಾರಣವಾದರೆ, ಈ ಘಟನೆಗೆ ಪ್ರವಾಹ ಪರಿಸ್ಥಿತಿ ಕಾರಣವೆಂಬುದು ತಿಳಿದು ಬಂದಿದೆ.

ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ವೇಗವಾಗಿ ಕಾರು ಚಾಲನೆ ಮಾಡಿದರೆ ಚಾಲಕನ ನಿಯಂತ್ರಕ್ಕೆ ಸಿಗದೇ ಅಪಘಾತಗಳಾಗುತ್ತವೆ ಎಂಬುದು ತಿಳಿದಿದ್ದರೂ ಚಾಲಕರು ಅಜಾಗರೂಕತೆಯಿಂದ ಕಾರು ಚಾಲನೆ ಮಾಡುತ್ತಲೇ ಇದ್ದಾರೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಆರಂಭವಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ಇದರಿಂದಾಗಿ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಾರ್ಖಂಡ್‌ನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಮಲಯ್ ನದಿಯ ಪ್ರವಾಹಕ್ಕೆ ಸಿಲುಕಿದ ಕಾರು ನದಿಗಿಳಿದಿದೆ. ಸುಮಾರು 500 ಮಿ.ಮೀ ಆಳಕ್ಕಿಳಿದಿದೆ. ತಕ್ಷಣವೇ ಸ್ಥಳೀಯರು ಕಾರಿನಲ್ಲಿದ್ದವರನ್ನು ಹಗ್ಗಗಳ ಸಹಾಯದಿಂದ ರಕ್ಷಿಸಿದ್ದಾರೆ.

ಲೈವ್ ಹಿಂದೂಸ್ತಾನ್ ಅಪ್‌ಲೋಡ್ ಮಾಡಿರುವ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕಾರಿನ ಡೋರ್ ಹಾಗೂ ವಿಂಡೋಗಳು ಲಾಕ್ ಆಗಿದ್ದ ಕಾರಣಕ್ಕೆ ಅವುಗಳನ್ನು ಒಡೆದು ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆಪದ್ಬಾಂದವರಾದ ಸ್ಥಳೀಯರು, ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ನವ ದಂಪತಿ

ಅವಘಡದ ಸಂದರ್ಭದಲ್ಲಿ ಕಾರಿನ ಡೋರ್ ಹಾಗೂ ವಿಂಡೋಗಳು ಲಾಕ್ ಆದರೆ ಹೊರ ಬರುವುದು ಕಷ್ಟವಾಗಲಿದೆ. ಇಂತಹ ಸಂದರ್ಭಗಳನ್ನು ನಿಭಾಯಿಸಲು ಗ್ಲಾಸ್ ಮಿರರ್ ಬ್ರೇಕರ್‌ಗಳನ್ನು ಕಾರಿನಲ್ಲಿಟ್ಟು ಕೊಳ್ಳುವುದು ಒಳ್ಳೆಯದು.

ಚಿತ್ರ ಕೃಪೆ: ಲೈವ್ ಹಿಂದೂಸ್ತಾನ್

Most Read Articles

Kannada
English summary
Local people rescue newly wed couple from drowning in Jharkhand. Read in Kannada.
Story first published: Tuesday, June 23, 2020, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X