ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 24ರಂದು ಲಾಕ್‌ಡೌನ್ ಜಾರಿಗೊಳಿಸಲಾಯಿತು. ಲಾಕ್‌ಡೌನ್ ನಂತರ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಯಿತು. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೊರಬಂದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು.

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಕರೋನಾ ವೈರಸ್‌ ಭೀತಿಯಿಂದಾಗಿ ಹಾಗೂ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆಯುತ್ತಾರೆ ಎಂಬ ಕಾರಣದಿಂದಾಗಿ ಹಲವಾರು ಜನ ತಮ್ಮ ವಾಹನಗಳನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದ್ದರು. ಈಗ ಲಾಕ್‌ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ದೀರ್ಘ ವಿರಾಮದ ನಂತರ ಜನರು ತಮ್ಮ ವಾಹನಗಳನ್ನು ಹೊರತೆಗೆಯುತ್ತಿದ್ದಾರೆ. ಸಾಮಾನ್ಯವಾಗಿ ವಾಹನಗಳನ್ನು ದೀರ್ಘ ಕಾಲದವರೆಗೆ ಬಳಸದೆ ಇರುವಾಗ ನಾನಾ ಸಮಸ್ಯೆಗಳು ತಲೆದೋರುವುದು ಸಹಜ.

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಬ್ಯಾಟರಿ ಚಾರ್ಜಿಂಗ್ ವೈಯರ್ ಗಳನ್ನು ಇಲಿಗಳು ಕಚ್ಚುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಕಾರುಗಳ ಮಾಲೀಕರು ಈಗ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಇದರಿಂದಾಗಿ ಹಲವು ನಗರಗಳಲ್ಲಿರುವ ಸರ್ವೀಸ್ ಸೆಂಟರ್​ಗಳು ಈಗ ಹೆಚ್ಚು ಕಾರ್ಯನಿರತವಾಗಿವೆ. ಅದರಲ್ಲಿಯೂ ಚೆನ್ನೈ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ಸರ್ವೀಸ್ ಸೆಂಟರ್​ಗಳಿಗೆ ಒಯ್ಯಲಾಗುತ್ತಿದೆ.

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಹಲವು ತಿಂಗಳುಗಳ ನಂತರ ತಮ್ಮ ಕಾರುಗಳನ್ನು ಬಳಸಲು ಶುರು ಮಾಡಿರುವ ಜನರು ಅವುಗಳನ್ನು ಸರ್ವೀಸ್ ಮಾಡಿಸುತ್ತಿದ್ದಾರೆ. ಪ್ರಮುಖ ವಾಹನ ತಯಾರಕ ಕಂಪನಿಗಳ ಅಧಿಕೃತ ಸರ್ವೀಸ್ ಸೆಂಟರ್​ಗಳು ಮಾತ್ರವಲ್ಲದೇ ಖಾಸಗಿ ಸರ್ವೀಸ್ ಸೆಂಟರ್​ಗಳೂ ಸಹ ಹೆಚ್ಚು ಕಾರ್ಯನಿರತವಾಗಿವೆ ಎಂದು ಹೇಳಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಲಾಕ್‌ಡೌನ್ ಗೂ ಮುನ್ನ ದಿನಕ್ಕೆ ಮೂರರಿಂದ ನಾಲ್ಕು ಕಾರುಗಳನ್ನು ಸರ್ವೀಸ್ ಮಾಡಲಾಗುತ್ತಿತ್ತು. ಆದರೆ ಈಗ ದಿನಕ್ಕೆ ಸುಮಾರು 15ಕ್ಕೂ ಕಾರುಗಳನ್ನು ಸರ್ವೀಸ್ ಮಾಡಲಾಗುತ್ತಿದೆ ಎಂದು ಅಡ್ಯಾರ್‌ನ ಮಾರುತಿ ಸುಜುಕಿ ಸರ್ವೀಸ್ ಸೆಂಟರ್ ನ ಧನಪತಿ ಹೇಳಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಹೆಚ್ಚಿನ ಕಾರುಗಳು ಬ್ಯಾಟರಿ, ಬ್ರೇಕ್‌ ಹಾಗೂ ಲೈಟ್ ಗಳ ಸಮಸ್ಯೆಗಳನ್ನು ಹೊಂದಿವೆ ಎಂದು ಹೇಳಿದ ಅವರು, ಕೆಲವು ಕಾರುಗಳಲ್ಲಿರುವ ವೈಯರ್ ಗಳನ್ನು ಇಲಿಗಳು ಹಾನಿಪಡಿಸಿವೆ ಎಂದು ಹೇಳಿದರು. ಚೆನ್ನೈನಲ್ಲಿರುವ ಹ್ಯುಂಡೈ ಹಾಗೂ ಹೋಂಡಾ ಸರ್ವೀಸ್ ಸೆಂಟರ್​ಗಳಲ್ಲಿಯೂ ಇದೇ ಕಾರಣಕ್ಕೆ ಕಾರುಗಳನ್ನು ಸರ್ವೀಸ್ ಗೆ ನೀಡಲಾಗುತ್ತಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಹೆಚ್ಚಿನ ಸರ್ವೀಸ್ ಸೆಂಟರ್​ಗಳು ಸರ್ವೀಸ್ ಸೆಂಟರ್​ಗಳಲ್ಲಿ ಉಂಟಾಗುವ ದಟ್ಟಣೆಯನ್ನು ತಪ್ಪಿಸಲು ಪಿಕಪ್, ಡ್ರಾಪ್ ಸೇವೆಯನ್ನು ನೀಡುತ್ತಿವೆ. ಈ ಸೇವೆ ನೀಡಲು ಪಾರ್ಟ್ ಟೈಮ್ ಚಾಲಕರನ್ನು ನೇಮಿಸಿ ಕೊಳ್ಳಲಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡವರಲ್ಲಿ ಟ್ಯಾಕ್ಸಿ ಚಾಲಕರು ಸೇರಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಸಿಕ್ಕಾಪಟ್ಟೆ ಬಿಜಿಯಾದ ಸರ್ವೀಸ್ ಸೆಂಟರ್​ಗಳು

ಹೀಗೆ ಉದ್ಯೋಗ ಕಳೆದುಕೊಂಡ ಚಾಲಕರನ್ನು ನೇಮಿಸಿಕೊಳ್ಳಲಾಗಿದೆ. ಈ ಮೂಲಕ ಟ್ಯಾಕ್ಸಿ ಚಾಲಕರು ಆದಾಯ ಗಳಿಸುತ್ತಿದ್ದಾರೆ. ಮಣಿಕಂದನ್ ಎಂಬ ಟ್ಯಾಕ್ಸಿ ಡ್ರೈವರ್ ಈಗ ದಿನಕ್ಕೆ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ 500 ರೂಪಾಯಿ ಗಳಿಸುತ್ತಿದ್ದಾರೆ. ಈ ಬಗ್ಗೆ ಇಟಿ ಆಟೋ ವರದಿ ಮಾಡಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Lockdown effect car service centers are too busy in servicing cars. Read in Kannada.
Story first published: Monday, October 5, 2020, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X