70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ಆಕಾಶಕ್ಕೆ ಹೋಗಿ ಅಲ್ಲಿಂದ ಭೂಮಿಯನ್ನು ನೋಡಬೇಕೆಂಬ ಕನಸು ಹಲವರಿಗಿರುತ್ತದೆ. ಆದರೆ ಕೆಲವೇ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಈ ಕನಸನ್ನು ನನಸು ಮಾಡಿಕೊಳ್ಳುವವರು ಶತಕೋಟಿ ಡಾಲರ್‌ಗಳ ಒಡೆಯರಾಗಿರಬೇಕು.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ಆಗ ಮಾತ್ರ ಈ ರೀತಿಯ ವಿಚಿತ್ರ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ. ಬಾಹ್ಯಾಕಾಶ ಪ್ರವಾಸೋದ್ಯಮದ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಚರ್ಚೆಗಳು ಈಗ ಕಾರ್ಯರೂಪಕ್ಕೆ ಬರುತ್ತಿವೆ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ರಿಚರ್ಡ್ ಬ್ರಾನ್ಸನ್ ಲಂಡನ್ ಮೂಲದ ವರ್ಜಿನ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಅವರು ವಿಶ್ವದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ಅವರಿಗೆ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ನಿನ್ನೆ ರಿಚರ್ಡ್ ಬ್ರಾನ್ಸನ್ ಸೇರಿದಂತೆ 11 ಜನರು ನ್ಯೂ ಮೆಕ್ಸಿಕೊದಿಂದ ಬಾಹ್ಯಾಕಾಶಯಾನ ಕೈಗೊಂಡಿದ್ದಾರೆ. ಈ ಮೂಲಕ ಬಾಹ್ಯಾಕಾಶಯಾನ ಕೈಗೊಳ್ಳಲು ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ರಿಚರ್ಡ್ ಬ್ರಾನ್ಸನ್ ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಯಾದ ವರ್ಜಿನ್ ಗ್ಯಾಲಕ್ಟಿಕ್ ಒಡೆತನದ ವಿಎಸ್ಎಸ್ ಯೂನಿಟಿ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಯಾನಕ್ಕೆ ತೆರಳಿದ್ದಾರೆ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ಜನಪ್ರಿಯ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಹಾಗೂ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್'ರಂತಹ ದಿಗ್ಗಜ ಉದ್ಯಮಿಗಳು ಸಹ ಬಾಹ್ಯಾಕಾಶಯಾನ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದಾರೆ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

2000ರಲ್ಲಿ ಬ್ಲೂ ಒರಿಜಿನ್ ಬಾಹ್ಯಾಕಾಶ ಕಂಪನಿಯನ್ನು ಆರಂಭಿಸಿದ ಅಮೆಜಾನ್ ಸಂಸ್ಥಾಪಕರಾದ ಜೆಫ್ ಬೆಜೋಸ್'ರವರು ಜುಲೈ 20ರಂದು ಬಾಹ್ಯಾಕಾಶಯಾನ ಕೈಗೊಳ್ಳಲು ಸಜ್ಜಾಗಿದ್ದಾರೆ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ಎಲಾನ್ ಮಸ್ಕ್ ಸಹ ಬಾಹ್ಯಾಕಾಶಯಾನ ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ. ಇವರಿಬ್ಬರಿಗಿಂತ ಮುಂಚೆಯೇ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶಯಾನ ಕೈಗೊಂಡಿದ್ದಾರೆ. ಜೆಫ್ ಬೆಜೋಸ್‌ನ ಬಾಹ್ಯಾಕಾಶ ಕಂಪನಿ ಸ್ಥಾಪಿಸಿದ ಸುಮಾರು 4 ವರ್ಷಗಳ ನಂತರ ಬ್ರಾನ್ಸನ್ ತಮ್ಮ ಬಾಹ್ಯಾಕಾಶ ಕಂಪನಿಯನ್ನು ಸ್ಥಾಪಿಸಿದರು ಎಂಬುದು ಗಮನಾರ್ಹ.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ಜೆಫ್ ಬೆಜೋಸ್‌ರಂತೆಯೇ ರಿಚರ್ಡ್ ಬ್ರಾನ್ಸನ್ ತಮ್ಮೊಂದಿಗೆ ಹಲವರನ್ನು ಬಾಹ್ಯಾಕಾಶಯಾನಕ್ಕೆ ಕರೆದೊಯ್ದಿದ್ದಾರೆ. ಇಂಗ್ಲೆಂಡಿನ ಈ ಮಿಲಿಯನೇರ್ ತಾವು ಭಾರತದ ಮೂಲದವರು ಎಂದು ಹಿಂದೊಮ್ಮೆ ಹೇಳಿದ್ದರು.

70ನೇ ವಯಸ್ಸಿನಲ್ಲಿ ಬಾಹ್ಯಾಕಾಶಯಾನ ಕೈಗೊಂಡ ಲಂಡನ್ ಮೂಲದ ಉದ್ಯಮಿ

ಮುಂಬೈನಿಂದ ಲಂಡನ್‌ಗೆ ವರ್ಜಿನ್ ಅಟ್ಲಾಂಟಿಕ್‌ನ ವಿಮಾನಯಾನ ಸೇವೆಗೆ 2019ರಲ್ಲಿ ಚಾಲನೆ ನೀಡಿ ಮಾತನಾಡಿದ್ದ ಬ್ರಾನ್ಸನ್, ತಮ್ಮ ಪೂರ್ವಜರು ತಮಿಳುನಾಡಿನ ಕಡಲೂರಿನವರು ಎಂದು ಹೇಳಿದ್ದರು.

Most Read Articles

Kannada
English summary
London based billionaire Richard Branson goes for space trip. Read in Kannada.
Story first published: Monday, July 12, 2021, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X