ಭಾರತದಲ್ಲಿನ ಅತಿ ಉದ್ದದ ರೈಲ್ವೆ ಸುರಂಗಗಳಿವು... ಒಮ್ಮೆ ಪ್ರಯಾಣಿಸಿ ನೋಡಿ

ಭಾರತದ ರೈಲ್ವೆ ಮತ್ತು ರಸ್ತೆ ಮಾರ್ಗಗಳು ವಿಶ್ವದ ಅತಿದೊಡ್ಡ ಸಾರಿಗೆ ಜಾಲಗಳಾಗಿವೆ. ಕಳೆದ ಕೆಲವು ದಶಕಗಳಲ್ಲಿ ಉದ್ದವಾದ ರೈಲು ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೇಲ್ಸೇತುವೆ ಹಾಗೂ ದೊಡ್ಡ ಸುರಂಗಗಳಂತಹ ಮೆಗಾಸ್ಟ್ರಕ್ಚರ್‌ಗಳಿಗೆ ದೇಶ ಸಾಕ್ಷಿಯಾಗಿದೆ. ಇಂತಹ ಸುರಂಗಳ ನಡುವೆ ಪ್ರಯಾಣಿಸವುದು ಒಂದು ವಿಭಿನ್ನವಾದ ಅನುಭವ ನೀಡುತ್ತದೆ. ಅಲ್ಲಿ ನಿಶ್ಯಬ್ದತೆ ತುಂಬಿರುತ್ತದೆ.

ದೇಶದಲ್ಲಿನ ಬಹುತೇಕ ಸುರಂಗಗಳು ಹಿಮಾಲಯ ಶ್ರೇಣಿಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿವೆ. ರೈಲ್ ಕಮ್ ರೋಡ್ ಬ್ರಿಡ್ಜ್ ಒಂದು ರೀತಿಯ ರಚನೆಯಾಗಿದ್ದು, ಅದು ರೈಲುಗಳು ಮತ್ತು ವಾಹನಗಳು ಸಂಚರಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ ಅಣೆಕಟ್ಟೆಗಳಿಂದ ನೀರನ್ನು ಸಾಗಿಲು ಸುರಂಗಳನ್ನು ನಿರ್ಮಿಸಲಾಗುತ್ತದೆ. ಸದ್ಯ ವಾಹನ ಹಾಗೂ ರೈಲು ಸಂಚಾರಕ್ಕೂ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಭಾರತದಲ್ಲಿರುವ ಕೆಲವು ಉದ್ದವಾದ ರೈಲ್ವೆ ಸುರಂಗಗಳ ಬಗ್ಗೆ ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಭಾರತದಲ್ಲಿನ ಅತಿ ಉದ್ದದ ರೈಲ್ವೆ ಸುರಂಗಗಳಿವು... ಒಮ್ಮೆ ಪ್ರಯಾಣಿಸಿ ನೋಡಿ

ಪಿರ್ ಪಂಜಾಲ್ ರೈಲ್ವೆ ಸುರಂಗವು ದೇಶದ ಅತಿ ಉದ್ದದ ರೈಲು ಸುರಂಗವಾಗಿದೆ. ಅಸ್ಸಾಂನ ಬೋಗಿಬೀಲ್ ಸೇತುವೆಯು ದೇಶದ ಅತಿ ಉದ್ದದ ರೈಲ್ ಕಮ್ ರೋಡ್ ಬ್ರಿಡ್ಜ್ ಆಗಿದೆ. ಭಾರತೀಯ ರೈಲ್ವೆಯು ಮಧ್ಯಪ್ರದೇಶದಲ್ಲಿ ಪಾತಾಳಪಾನಿ ರೈಲು ಸುರಂಗವನ್ನು ನಿರ್ಮಿಸಲು ಉದ್ದೇಶಿಸಿದೆ. ಅದು 2025ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಈ ಸುರಂಗವು 49 ಕಿಲೋಮೀಟರ್ ಉದ್ದವನ್ನು ಹೊಂದಿವ ಮೂಲಕ ದೇಶದಲ್ಲೇ ಅತಿ ಉದ್ದದ ರೈಲ್ವೆ ಸುರಂಗವಾಗಲಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಹಿಮಾಲಯ ಪರ್ವತ ಶ್ರೇಣಿಯ ಹೃದಯಭಾಗದಲ್ಲಿರುವ ಪಿರ್ ಪಾಂಚಾಲ್ ಸುರಂಗ ಭಾರತದಲ್ಲಿನ ಸದ್ಯದ ಅತಿ ಉದ್ದದ ರೈಲು ಸುರಂಗಗಳಲ್ಲಿ ಒಂದಾಗಿದೆ. 11,200 ಮೀಟರ್ ಉದ್ದವನ್ನು ಹೊಂದಿದೆ. ಅಲ್ಲದೆ, ಇದು ಏಷ್ಯಾದ ಎರಡನೇ ಅತಿ ಉದ್ದದ ರೈಲ್ವೆ ಸುರಂಗವು ಆಗಿದೆ. ಈ ಸುರಂಗವನ್ನು ಅತಿ ಎತ್ತರದ ಪರ್ವತ ಶ್ರೇಣಿಯಾದ ಪೀರ್ ಪಾಂಚಲ್‌ನಲ್ಲಿ ನಿರ್ಮಿಸಲಾಗಿದೆ. ಈ ಸುರಂಗ ಜಮ್ಮು ಮತ್ತು ಕಾಶ್ಮೀರದ ಬನಿಯಾಲ್ ಪಟ್ಟಣದ ಉತ್ತರದಲ್ಲಿದೆ. 2013ರಲ್ಲಿ ಉದ್ಘಾಟನೆಗೊಂಡ ಈ ರೈಲು ಸುರಂಗದ ಮೂಲಕ ಹಾದುಹೋಗಲು ಸುಮಾರು ಒಂಬತ್ತು ನಿಮಿಷ ಬೇಕಾಗಲಿದೆ.

ಕೇರಳದ ತಿರುವನಂತಪುರ ಪೋರ್ಟ್ ಸುರಂಗವನ್ನು ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ನಿರ್ಮಾಣ ಮಾಡುತ್ತಿದೆ. 9.02 ಕಿ. ಮೀ ಉದ್ದದ ಈ ಸುರಂಗದ ಸಂಪೂರ್ಣ ಕಾಮಗಾರಿ ಇದೇ ವರ್ಷ (2022) ಕೊನೆಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸುರಂಗ ನಿರ್ಮಾಣ ಪೂರ್ಣಗೊಂಡರೆ ಇದು ಭಾರತದ ಎರಡನೇ ಅತಿ ಉದ್ದದ ರೈಲು ಸುರಂಗವಾಗಲಿದೆ. ಬಲರಾಮಪುರಂ ರೈಲು ನಿಲ್ದಾಣದಿಂದ ವಿಝಿಂಜಂ ಬಂದರನ್ನು ಸಂಪರ್ಕಿಸಲು ಇದನ್ನು ನಿರ್ಮಿಸಲಾಗುತ್ತಿದ್ದು, 1,030 ಕೋಟಿ ರೂ.ಗಳ ಯೋಜನೆ ಇದಾಗಿದೆ.

ಕರ್ಬುಡೆ ಸುರಂಗವು ಮಹಾರಾಷ್ಟ್ರದ ಉಕ್ಷಿ ಮತ್ತು ಭೋಕೆ ರೈಲು ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. 6.5 ಕಿಲೋಮೀಟರ್ ಉದ್ದದ ಈ ಸುರಂಗವನ್ನು 1997ರಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದು ಕೊಂಕಣ ರೈಲ್ವೆಯ ಅತಿ ಉದ್ದದ ಮತ್ತು ಪ್ರಮುಖ ರೈಲ್ವೆ ಸುರಂಗವಾಗಿದೆ. ಸಂಗಲ್ಡನ್ ರೈಲ್ವೆ ಸುರಂಗವು 7.1 ಕಿಲೋಮೀಟರ್ ಉದ್ದವಿದ್ದು, ಕತ್ರಾ ಮತ್ತು ಬನಿಹಾಲ್ ಅನ್ನು ಸಂಪರ್ಕಿಸುತ್ತದೆ. ಇದನ್ನು ಡಿಸೆಂಬರ್ 2010ರಲ್ಲಿ ನಿರ್ಮಿಸಲಾಯಿತು. ಈ ರೈಲು ಸುರಂಗವು ಒಂದೇ ಮಾರ್ಗವನ್ನು ಹೊಂದಿದ್ದು, ಎಲ್ಲಾ ರೈಲುಗಳು ಗಂಟೆಗೆ 75 ಕಿಮೀ ವೇಗದಲ್ಲಿ ಚಲಿಸುತ್ತವೆ.

ನಾಥುವಾಡಿ ಸುರಂಗ ಭಾರತದ ಅತಿ ಉದ್ದದ ರೈಲ್ವೆ ಸುರಂಗಗಳಲ್ಲಿ ಪ್ರಮುಖವಾಗಿದೆ. ಇದನ್ನು ಮಹಾರಾಷ್ಟ್ರದ ಕರಂಚಾಡಿ ಮತ್ತು ದಿವಾನ್ ಖವಾಟಿ ನಿಲ್ದಾಣಗಳ ನಡುವೆ ನಿರ್ಮಿಸಲಾಗಿದೆ. ಇದು 300 ಮೀಟರ್ ಉದ್ದವಿದ್ದು, 1997ರಲ್ಲಿ ಲೋಕಾರ್ಪಣೆಗೊಂಡಿತು. ಇದು ಭಾರತದ ಅತ್ಯಂತ ಸುಂದರವಾದ, ಸ್ವಚ್ಛ ಹಾಗೂ ಉತ್ತಮವಾಗಿ ನಿರ್ವಹಿಸಲ್ಪಟ್ಟ ಸುರಂಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ ಕರ್ನಾಟಕದ ಮಂಗಳೂರಿನಿಂದ ಪ್ರಯಾಣವನ್ನು ಆರಂಭಿಸಿ, ಗೋವಾ ಮೂಲಕ ಮುಂಬೈಗೆ ತೆರಳುವಾಗ ಪಶ್ಚಿಮ ಘಟ್ಟಗಳ ಅದ್ಬುತ ಪ್ರಯಾಣದ ಅನುಭವವನ್ನು ಪಡೆಯಬಹುದು.

ಸುಮಾರು 4 ಕಿಮೀ ಉದ್ದದ ಟೈಕ್ ಸುರಂಗವು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶವಾದ ರತ್ನಗಿರಿ ಮತ್ತು ನಿವಾಸರ ನಡುವೆ ಇದೆ. ರತ್ನಗಿರಿ ಪ್ರದೇಶವು ತನ್ನ ವೈವಿಧ್ಯಮಯ ಮಾವಿನ ಮರಗಳು ಮತ್ತು ಹಚ್ಚ ಹಸಿರಿನ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ರತ್ನಗಿರಿ ಮಹಾರಾಷ್ಟ್ರದ ಒಂದು ಸುಂದರವಾದ ಬಂದರು ನಗರ. ಇದು ಸಹ್ಯಾದ್ರಿ ಪರ್ವತ ಶ್ರೇಣಿಯೊಂದಿಗೆ ಬೆರಗುಗೊಳಿಸುವ ಕೊಂಕಣದ ಭಾಗವಾಗಿದೆ. ಟೈಕ್ ಸುರಂಗವು ಎಲ್ಲರೂ ಭಯಪಡುವ ರೀತಿಯಿಲ್ಲದೆ ವಿಭಿನ್ನ ಪ್ರಯಾಣದ ಅನುಭವವನ್ನು ನೀಡುತ್ತದೆ. ಇನ್ನೂ ಅನೇಕ ಸುರಂಗಗಳು ದೇಶದಲ್ಲಿದ್ದು, ಹಲವು ನಿರ್ಮಾಣ ಹಂತದಲ್ಲಿವೆ.

Most Read Articles

Kannada
English summary
Longest railway tunnels in india take a trip and see
Story first published: Friday, December 2, 2022, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X