ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಹೋಂಡಾ ಹೈನೆಸ್ ಸಿಬಿ 350 ಬೈಕ್ ಕೆಲವು ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕ್ಲಾಸಿಕ್ ರೆಟ್ರೊ ಶೈಲಿಯ ಈ ಬೈಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡುತ್ತದೆ.

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಹೋಂಡಾ ಹೈನೆಸ್ ಸಿಬಿ 350 ಬೈಕ್ ಗಳನ್ನು ದೇಶಾದ್ಯಂತ ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಹೋಂಡಾ ಹೈನೆಸ್ ಸಿಬಿ 350 ಬೈಕಿನಲ್ಲಿ 349 ಸಿಸಿಯ 4-ಸ್ಟ್ರೋಕ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 20.78 ಬಿಹೆಚ್‌ಪಿ ಪವರ್ ಹಾಗೂ 30 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ಸ್ಲಿಪ್ಪರ್ ಕ್ಲಚ್ ಸೌಲಭ್ಯವನ್ನೂ ಒದಗಿಸಲಾಗಿದೆ.

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಹೋಂಡಾ ಹೈನೆಸ್ ಸಿಬಿ 350 ಬೈಕ್ ದೇಶಾದ್ಯಂತವಿರುವ ಬೈಕ್ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇತ್ತೀಚಿಗೆ ನಡೆದಿದೆ. ಅಭಿನವ್ ಭಟ್ ಎಂಬ ಯೂಟ್ಯೂಬರ್ ತಮ್ಮ ಹೋಂಡಾ ಹೈನ್ಸ್ ಸಿಬಿ 350 ಬೈಕಿನಲ್ಲಿ ಇತ್ತೀಚೆಗೆ ಉತ್ತರಾಖಂಡದ ಪರ್ವತ ರಸ್ತೆಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಅವರು ಬೈಕಿನಲ್ಲಿ ಸಾಗುತ್ತಿರುವಾಗ ಲಾರಿ ಚಾಲಕನೊಬ್ಬ ಅವರನ್ನು ಹಿಂಬಾಲಿಸಿದ್ದಾನೆ. ಇದನ್ನು ಅರಿತ ಅಭಿನವ್ ಭಟ್ ಬೈಕಿನ ವೇಗವನ್ನು ಹೆಚ್ಚಿಸಿದ್ದಾರೆ. ಅಭಿನವ್ ಭಟ್ ಬೈಕಿನ ವೇಗವನ್ನು ಹೆಚ್ಚಿಸಿದಂತೆಲ್ಲಾ ಲಾರಿ ಚಾಲಕನು ಸಹ ಲಾರಿಯನ್ನು ವೇಗವಾಗಿ ಚಲಾಯಿಸಿದ್ದಾನೆ.

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಇದು ಅಭಿನವ್ ಭಟ್ ಅವರಿಗೆ ಭೀತಿಯನ್ನುಂಟು ಮಾಡಿದೆ. ಈ ಕಾರಣಕ್ಕೆ ಟ್ರಕ್ ಗೆ ದಾರಿ ಮಾಡಿಕೊಡಲು ಬೈಕ್ ಅನ್ನು ಪಕ್ಕಕ್ಕೆ ಹಾಕಿದ್ದಾರೆ. ಆಗ ಲಾರಿ ಚಾಲಕನು ಸಹ ತನ್ನ ಲಾರಿಯನ್ನು ನಿಲ್ಲಿಸಿ ಅಭಿನವ್ ಭಟ್ ಅವರ ಬಳಿ ಬಂದಿದ್ದಾನೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಅಭಿನವ್ ಭಟ್ ಅವರಿಗೆ ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ಟ್ರಕ್ ಚಾಲಕ ಕೆಳಗಿಳಿದು ಬಂದಾಗ ಅವರ ಅನುಮಾನ, ಗೊಂದಲಗಳು ಬಗೆಹರಿದಿವೆ. ಹೋಂಡಾ ಹೈನೆಸ್ ಸಿಬಿ 350 ಬೈಕ್ ಅನ್ನು ಹತ್ತಿರದಿಂದ ನೋಡಲು ಹಾಗೂ ಆ ಬೈಕಿನ ಬಗ್ಗೆ ತಿಳಿದುಕೊಳ್ಳಲು ಲಾರಿ ಚಾಲಕ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಆ ಟ್ರಕ್ ಚಾಲಕ ಮೋಟಾರ್ ಸೈಕಲ್ ಉತ್ಸಾಹಿಯಾಗಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಹೋಂಡಾ ಹೈನೆಸ್ ಸಿಬಿ 350 ಬೈಕ್ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಅಭಿನವ್ ಭಟ್ ಅವರನ್ನು ಹಿಂಬಾಲಿಸಿದ್ದಾನೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಆ ಟ್ರಕ್ ಚಾಲಕನ ಮನಸ್ಸಿನಲ್ಲಿ 2 ಪ್ರಶ್ನೆಗಳು ಮೂಡಿದ್ದವು. ಹೋಂಡಾ ಹೈನೆಸ್ ಸಿಬಿ 350 ಬೈಕ್ ಎಷ್ಟು ಮೈಲೇಜ್ ನೀಡುತ್ತದೆ ಎಂಬುದು ಆತನ ಮೊದಲ ಪ್ರಶ್ನೆ. ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 40 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಅಭಿನವ್ ಭಟ್ ಉತ್ತರಿಸಿದ್ದಾರೆ.

ಹೋಂಡಾ ತನ್ನ ಎಲ್ಲಾ ಶೋ ರೂಂಗಳ ಮೂಲಕ ಹೈನೆಸ್ ಸಿಬಿ 350 ಬೈಕ್ ಅನ್ನು ಮಾರಾಟ ಮಾಡುತ್ತದೆಯೇ ಎಂಬುದು ಆತನ ಎರಡನೇ ಪ್ರಶ್ನೆ. ಹೋಂಡಾ ಕಂಪನಿಯು ಸದ್ಯಕ್ಕೆ ಹೈನೆಸ್ ಸಿಬಿ 350 ಬೈಕ್ ಅನ್ನು ಕೆಲವು ಡೀಲರ್‌ಗಳ ಮೂಲಕ ಮಾತ್ರ ಮಾರಾಟ ಮಾಡುತ್ತದೆ ಎಂದು ಅಭಿನವ್ ಭಟ್ ಉತ್ತರಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಬೈಕ್ ಮೇಲಿನ ಕುತೂಹಲಕ್ಕೆ ಟ್ರಕ್ ಚಾಲಕ ಮಾಡಿದ್ದೇನು ಗೊತ್ತಾ?

ಭಾರತದಲ್ಲಿ ಹೋಂಡಾ ಕಂಪನಿಯ ನಿಯಮಿತ ಮಾರಾಟಗಾರರಿಗೆ ಹೋಲಿಸಿದರೆ ಪ್ರೀಮಿಯಂ ಮಾರಾಟಗಾರರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಹೋಂಡಾ ಹೈನೆಸ್ ಬೈಕ್ ಯಾವ ರೀತಿಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡಬಲ್ಲದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

Most Read Articles

Kannada
English summary
Lorry driver chases a Honda hness cb350 bike to get more information. Read in Kannada.
Story first published: Thursday, November 5, 2020, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X