ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಭಾರತದ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಬೇಕಾದರೆ ಹಲವಾರು ಟೋಲ್‍‍ಗಳನ್ನು ದಾಟಿ ಹೋಗಬೇಕಾಗುತ್ತದೆ. ಕೆಲವೊಮ್ಮೆ ಟೋಲ್‍‍ಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾಗುತ್ತದೆ. ಟೋಲ್‍‍ಗಳಲ್ಲಿ ಕಾಯುವುದನ್ನು ತಪ್ಪಿಸಲು ಸರ್ಕಾರವು ಫಾಸ್ಟ್‌ಟ್ಯಾಗ್‍ಗಳನ್ನು ಜಾರಿಗೆ ತಂದಿದೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಈ ಮೊದಲು ಟೋಲ್‍‍ಗಳಲ್ಲಿ ಶುಲ್ಕ ಪಾವತಿಸಲು ಫಾಸ್ಟ್‌ಟ್ಯಾಗ್‍ಗಳು ಕಡ್ಡಾಯವೆಂದು ತಿಳಿಸಿದ್ದ ಸರ್ಕಾರವು ಡಿಸೆಂಬರ್ 1ರ ಗಡುವನ್ನು ವಿಧಿಸಿತ್ತು. ಹೆಚ್ಚು ಜನರು ಆಸಕ್ತಿಯನ್ನು ತೋರದ ಕಾರಣ ಈ ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಿತ್ತು. ಈಗ ಅಂತಿಮ ಗಡುವನ್ನು ಜನವರಿ 15ರವರೆಗೆ ವಿಸ್ತರಿಸಲಾಗಿದೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಈಗಾಗಲೇ ಹಲವರು ಫಾಸ್ಟ್‌ಟ್ಯಾಗ್‍ಗಳ ಮೂಲಕ ಟೋಲ್‍‍ಗಳಲ್ಲಿ ಪಾವತಿಸುತ್ತಿದ್ದಾರೆ. ಅಂತಿಮ ಗಡುವಿಗೆ ಒಂದು ವಾರವಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್‌ಟ್ಯಾಗ್‍ಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಈ ಫಾಸ್ಟ್‌ಟ್ಯಾಗ್‍ಗಳನ್ನು ವಾಹನಗಳ ಮುಂಭಾಗದಲ್ಲಿರುವ ವಿಂಡ್‍‍ಶೀಲ್ಡ್ ಗಳ ಮೇಲೆ ಅಳವಡಿಸಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಇವುಗಳನ್ನು ರಿಚಾರ್ಜ್ ಮಾಡಬೇಕಾಗುತ್ತದೆ. ಟೋಲ್‍‍ಗಳಲ್ಲಿ ಅಳವಡಿಸಿರುವ ಸ್ಕ್ಯಾನರ್‍‍ಗಳು, ವಾಹನಗಳು ಟೋಲ್‍‍ಗಳಿಗೆ ಬಂದಾಗ ಈ ಫಾಸ್ಟ್‌ಟ್ಯಾಗ್‍ಗಳನ್ನು ಗ್ರಹಿಸಿ, ಸಂಬಂಧಿಸಿದ ಶುಲ್ಕವನ್ನು ಆಟೋಮ್ಯಾಟಿಕ್ ಆಗಿ ಸಂಗ್ರಹಿಸುತ್ತವೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಫಾಸ್ಟ್‌ಟ್ಯಾಗ್‍ ಅಕೌಂಟ್‍‍ನ ಅವಧಿ ಮುಗಿದಿದ್ದರೆ, ಅವುಗಳನ್ನು ರಿಚಾರ್ಜ್ ಮಾಡಬಹುದು. ಈ ಫಾಸ್ಟ್‌ಟ್ಯಾಗ್‍‍ಗಳಿಂದ ಟೋಲ್‍‍ಗಳಲ್ಲಿ ಕಾಯುವುದು ತಪ್ಪುತ್ತದೆ. ಇದರಿಂದಾಗಿ ವಾಹನಗಳ ಇಂಧನದ ಜೊತೆಗೆ ಸಮಯದ ಉಳಿತಾಯವಾಗುತ್ತದೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಫಾಸ್ಟ್‌ಟ್ಯಾಗ್‍ ಹೊಂದಿರುವ ವಾಹನಗಳು ವೇಗವಾಗಿ ಚಲಿಸುವುದರಿಂದ ಟೋಲ್‍‍ಗಳಲ್ಲಿ ಉಂಟಾಗುವ ವಾಹನ ದಟ್ಟಣೆ ಕಡಿಮೆಯಾಗಲಿದೆ. ಇಷ್ಟೆಲ್ಲಾ ಅನುಕೂಲಗಳನ್ನು ಹೊಂದಿರುವ ಫಾಸ್ಟ್‌ಟ್ಯಾಗ್‍‍‍‍ಗಳನ್ನು ಕೆಲವು ಲಾರಿ ಡ್ರೈವರ್‍‍ಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಇದಕ್ಕಾಗಿ ಹೊಸ ಟ್ರಿಕ್‍‍ಗಳನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಲಾರಿ ಡ್ರೈವರ್‍‍ಗಳು 2 ಫಾಸ್ಟ್‌ಟ್ಯಾಗ್‍ ಟ್ರಿಕ್‍‍ಗಳನ್ನು ಬಳಸುತ್ತಿದ್ದಾರೆ. ಲಾರಿ ಡ್ರೈವರ್‍‍ಗಳು ಬ್ಲಾಕ್ ಲಿಸ್ಟ್ ಮಾಡಲಾದ 2 ಫಾಸ್ಟ್‌ಟ್ಯಾಗ್‍ ಸ್ಟಿಕ್ಕರ್‍‍ಗಳನ್ನು ತಮ್ಮ ಲಾರಿಗಳ ಮೇಲೆ ಅಂಟಿಸಿಕೊಂಡು ವಂಚಿಸುತ್ತಿದ್ದಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಈ ವಂಚನೆ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿವರಿಸಿದ್ದಾರೆ. ನಾವು ಭಾರತದ ಹೈವೇ ಮ್ಯಾನೇಜ್‍‍ಮೆಂಟ್ ಕಂಪನಿ ಲಿಮಿಟೆಡ್‍‍ಗೆ 2 ಟ್ಯಾಗ್‍‍ಗಳನ್ನು ಹೊತ್ತೊಯ್ಯುವ ವಾಹನಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದೇವೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

2 ಫಾಸ್ಟ್‌ಟ್ಯಾಗ್‍‍‍‍ಗಳಿದ್ದ ಲಾರಿ ಡ್ರೈವರ್‍‍ಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದರು. ಈ ಡ್ರೈವರ್‍‍ಗಳು ಬ್ಲಾಕ್‍‍ಲಿಸ್ಟ್ ಆಗಿರುವ ಫಾಸ್ಟ್‌ಟ್ಯಾಗ್‍‍ಗಳನ್ನು ಲಾರಿಗಳ ಮಿರರ್‍‍ಗಳಿಗೆ ಅಂಟಿಸಿಕೊಂಡಿರುತ್ತಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಟೋಲ್ ಪ್ಲಾಜಾಗಳಿಗೆ ಬಂದ ನಂತರ ಈ ಸ್ಟಿಕ್ಕರ್‍‍ಗಳು ಸ್ಕ್ಯಾನರ್‍‍ನಲ್ಲಿ ಪತ್ತೆಯಾಗುವುದಿಲ್ಲ. ಈ ಕಾರಣಕ್ಕೆ ಅಲ್ಲಿರುವ ಸಿಬ್ಬಂದಿಯೊಂದಿಗೆ ಜಗಳವಾಡುತ್ತಾರೆ. ಇದರಿಂದ ಅಲ್ಲಿನ ಸಿಬ್ಬಂದಿ ಶುಲ್ಕ ವಿಧಿಸದೇ ಕಳುಹಿಸುತ್ತಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಈ ರೀತಿಯ ಜಗಳದಿಂದಾಗಿ ಟೋಲ್ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಶುಲ್ಕ ವಿಧಿಸಲು ತಿಳಿಸಿದರೆ ಬ್ಲಾಕ್‍‍ಲಿಸ್ಟ್ ಆಗಿರುವ ಫಾಸ್ಟ್‌ಟ್ಯಾಗ್‍ಗಳನ್ನು ಸ್ಕ್ಯಾನ್ ಮಾಡಿ ಮುಂದೆ ಸಾಗುತ್ತಾರೆ. ಇದರಿಂದಾಗಿ ಪ್ರಾಧಿಕಾರಕ್ಕೆ ನಷ್ಟ ಉಂಟಾಗುತ್ತಿದೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಟ್ರಕ್ ಡ್ರೈವರ್‍‍ಗಳು ಟೋಲ್ ಸಿಬ್ಬಂದಿಯೊಂದಿಗೆ ಜಗಳವಾಡುವ ಸಂದರ್ಭದಲ್ಲಿ ಟೋಲ್‍‍ಗೇಟ್ ಬಳಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದರಿಂದಾಗಿ ಟೋಲ್ ಸಿಬ್ಬಂದಿಯು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಟೋಲ್ ಸಿಬ್ಬಂದಿ ಟ್ರಕ್‍‍ಗಳಿಗೆ ಯಾವುದೇ ಶುಲ್ಕವನ್ನು ವಿಧಿಸದೇ ಕಳುಹಿಸಿದರೆ ಪ್ರತಿಯೊಂದು ಟ್ರಕ್ ದಿನಕ್ಕೆ ರೂ.1,000ದಿಂದ ರೂ.1,500ಗಳವರೆಗೆ ಉಳಿಸಿದಂತಾಗುತ್ತದೆ. ಇದರಿಂದ ಪ್ರಾಧಿಕಾರಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತದೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ಈ ಕಾರಣಕ್ಕಾಗಿ 2 ಫಾಸ್ಟ್‌ಟ್ಯಾಗ್‍‍ಗಳನ್ನು ಹೊಂದಿರುವ ಟ್ರಕ್‍‍ಗಳನ್ನು ಗುರುತಿಸಿ ಅವುಗಳನ್ನು ಚಾಲನೆ ಮಾಡುವವರನ್ನು ವಶಕ್ಕೆ ಪಡೆಯಬೇಕೆಂದು ಸೂಚಿಸಲಾಗಿದೆಯೆಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಮಾಡುತ್ತಿರುವ ಲಾರಿ ಡ್ರೈವರ್‍‍ಗಳು

ರಾಜಸ್ತಾನದ ಲಾರಿ ಡ್ರೈವರ್‍‍ಗಳು ಈ ಟ್ರಿಕ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಟ್ರಿಕ್ ಮಾಡಿದ ಹಲವು ಲಾರಿ ಡ್ರೈವರ್‍‍ಗಳನ್ನು ವಶಕ್ಕೆ ಪಡೆಯಲಾಗಿದೆಯೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‍‍ಹೆಚ್‍ಎ‍ಐ) ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ 2 ಫಾಸ್ಟ್‌ಟ್ಯಾಗ್‍‍‍‍ಗಳನ್ನು ಹೊಂದಿರುವ ಲಾರಿಗಳನ್ನು ಬ್ಲಾಕ್‍‍ಲಿಸ್ಟ್ ಗೆ ಸೇರಿಸಲಾಗಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ.

Article Published On: Wednesday, January 8, 2020, 11:06 [IST]
English summary
Trick of lorry drivers to go tollgate free of charge - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+