ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಕಳೆದ ವಾರ ಉತ್ತರಾಖಂಡದ ಡೆಹ್ರಾಡೂನ್‌ನ ಟೋಲ್ ಬೂತ್‌ಗೆ ವೇಗವಾಗಿ ಬಂದ ಟ್ರಕ್‌ವೊಂದು ಡಿಕ್ಕಿ ಹೊಡೆದಿದ್ದು, ಟೋಲ್ ಬೂತ್‌ ಒಳಗಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟೋಲ್ ಗೇಟ್ ದಾಟಲು ಕಾಯುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಲಾರಿ ಟೋಲ್ ಬೂತ್‌ಗೆ ಅಪ್ಪಳಿಸಿದೆ. ಅಪಘಾತವಾದ ಕೆಲವು ಸೆಕೆಂಡುಗಳ ನಂತರ, ಮಹಿಳೆಯೊಬ್ಬರು ಟೋಲ್ ಬೂತ್ ಕೆಲಸಗಾರನನ್ನು ಸುರಕ್ಷಿತವಾಗಿ ಹೊರ ಕರೆತರಲು ಬೂತ್ ಕಡೆಗೆ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಶನಿವಾರ ಮಧ್ಯಾಹ್ನ 2:36 ಗಂಟೆಗೆ ದೋಯಿವಾಲಾದ ಲಾಚಿವಾಲಾ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಸಿಮೆಂಟ್ ತುಂಬಿದ್ದ ಟ್ರಕ್ ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಉರುಳಿದ ನಂತರ ಗಾಯಗೊಂಡ ಟೋಲ್ ಬೂತ್‌ನಲ್ಲಿದ್ದ ವ್ಯಕ್ತಿಯನ್ನು ಮಹಿಳೆ ರಕ್ಷಿಸಿದ್ದಾಳೆ. ಬಳಿಕೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಭಾನುವಾರ ಹಂಚಿಕೊಂಡ 19 ಸೆಕೆಂಡುಗಳ ಈ ವಿಡಿಯೋ ಟ್ವಿಟರ್‌ನಲ್ಲಿ 2,97,600 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. "ಎಚ್ಚರಿಕೆಯಿಂದ ನೋಡಿ, ಡೆಹ್ರಾಡೂನ್‌ನ ಟೋಲ್ ಪ್ಲಾಜಾ ಅಪಘಾತದಲ್ಲಿ ಯುವತಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ಬೂತ್‌ನೊಳಗೆ ಧಾವಿಸಿ ಟೋಲ್ ಪ್ಲಾಜಾ ಕೆಲಸಗಾರನನ್ನು ಉಳಿಸಿದ್ದಾಳೆ "ಎಂದು ಶರಣ್ ಕ್ಲಿಪ್‌ಗೆ ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಮಹಿಳೆ ತನ್ನ ತ್ವರಿತ ಪ್ರತಿಕ್ರಿಯೆಗೆ ಟ್ವಿಟರ್‌ನಲ್ಲಿ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ. ಟ್ವಿಟ್ಟರ್ ಬಳಕೆದಾರರು ಮಹಿಳೆಯ ಸಾಹಸಕ್ಕೆ ಮೆಚ್ಚಿ ಆಕೆಯ ಸಮಯ ಸ್ಪೂರ್ತಿಯನ್ನು ಹೊಗಳುತ್ತಿದ್ದಾರೆ. "ನಿಜವಾಗಿಯೂ ತ್ವರಿತ ಪ್ರತಿಕ್ರಿಯೆ ಮತ್ತು ಕೆಚ್ಚೆದೆಯ ಧೈರ್ಯಕ್ಕೆ ಆಕೆಗೆ ಬಹುಮಾನ ನೀಡಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಅಪಘಾತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ, ಆದರೆ ವಿಡಿಯೋವನ್ನು ಗಮನಿಸಿದರೆ ಲಾರಿ ಚಾಲಕ ಕಾರನ್ನು ಉಳಿಸಲು ಪ್ರಯತ್ನಿಸುವ ಬರದಲ್ಲಿ ಟೋಲ್ ಬೂತ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂಬುದು ಗೊತ್ತಾಗುತ್ತಿದೆ. ಕಾರಿಗೆ ಡಿಕ್ಕಿ ಹೊಡೆದಿದ್ದರೆ ಕಾರಿನಲ್ಲಿದ್ದ ಕುಟುಂಬಕ್ಕೆ ಭಾರೀ ಹಾನಿಯಾಗುತ್ತಿತ್ತು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಉಡುಪಿಯಲ್ಲಿ ಟೋಲ್‌ಪ್ಲಾಜಾಗೆ ಆ್ಯಂಬುಲನ್ಸ್ ಡಿಕ್ಕಿ

ಕಳೆದ ಬುಧವಾರ ಉಡುಪಿ ಜಿಲ್ಲೆಯ ಬೈಂದೂರು-ಶಿರೂರು ಟೋಲ್ ಪ್ಲಾಜಾ ಬಳಿ ಆ್ಯಂಬುಲೆನ್ಸ್ ಚಾಲಕ ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದರು.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಟೋಲ್ ಪ್ಲಾಜಾ ರಸ್ತೆಯ ಮಧ್ಯದಲ್ಲಿ ಹಸುವೊಂದು ಮಲಗಿತ್ತು, ಇದೇ ವೇಳೆ ಆ್ಯಂಬುಲನ್ಸ್ ಟೋಲ್ ಪ್ಲಾಜಾಗೆ ಸಮೀಪಿಸುತ್ತಿದ್ದಂತೆ ಅಲ್ಲಿನ ಟೋಲ್ ಸಿಬ್ಬಂದಿ ಹಸುವನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಾರೆ. ಮತ್ತೊಬ್ಬ ಸಿಬ್ಬಂದಿ ಆಂಬ್ಯುಲೆನ್ಸ್‌ನ ಸುಗಮ ಮಾರ್ಗಕ್ಕಾಗಿ ಲೇನ್‌ನ ಒಂದು ಬದಿಯಲ್ಲಿ ಹಾಕಲಾದ ಬ್ಯಾರಿಕೇಡ್ ಅನ್ನು ತೆಗೆದುಹಾಕಲು ಪ್ರಯತ್ನಿಸುತ್ತಾನೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಆದರೆ ಮಳೆಯಿಂದ ಒದ್ದೆಯಾಗಿದ್ದ ರಸ್ತೆಯಿಂದ ಆಂಬ್ಯುಲೆನ್ಸ್ ನಿಯಂತ್ರಣ ಕಳೆದುಕೊಂಡು ಬ್ರೇಕ್ಸ್ ಕೂಡ ಕೆಲಸ ಮಾಡದ ಕಾರಣ ಹಸುವಿಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಟೋಲ್‌ಗೆ ಡಿಕ್ಕಿಹೊಡೆದಿದೆ. ಅಪಘಾತದ ರಭಸಕ್ಕೆ ಮೂರು ಜನರು ವಾಹನದಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ, ದೃಶ್ಯದ ಪ್ರಕಾರ ಹಸು ಕೂಡ ಪವಾಡಸದೃಶವಾಗಿ ಪಾರಾಗಿ ಅಪಘಾತದ ಸ್ಥಳದಿಂದ ದೂರ ಹೋಗುತ್ತದೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಅಂಬ್ಯುಲೆನ್ಸ್‌ನಂತಹ ತುರ್ತು ವಾಹನಗಳಿಗೆ ಗೇಟ್‌ಗಳಿರುತ್ತವೆ, ನಾನು ಎದುರಿಗೆ ಬಂದಾಗ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ತೆಗೆದರಾದರೂ ರಸ್ತೆಯ ಮಧ್ಯದಲ್ಲಿದ್ದ ಹಸುವನ್ನು ನೋಡಿ ಬ್ರೇಕ್ ಹಾಕಿದೆ. ಆದರೆ ವಾಹನ ಸ್ಕಿಡ್ ಆಗಿ ಉರುಳಿತು ಎಂದು ಗಾಯಗೊಂಡಿರುವ ಆಂಬ್ಯುಲೆನ್ಸ್ ಚಾಲಕ ರೋಶನ್ ರೋಡ್ರಿಗಸ್ ಹೇಳಿದ್ದಾನೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಗಜಾನನ ನಾಯಕ್ (55) ಎಂಬ ರೋಗಿಯನ್ನು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ಸಾಗಿಸುವಾಗ ಸಂಜೆ 4.07 ರ ಸುಮಾರಿಗೆ ಶಿರೂರು ಟೋಲ್ ಗೇಟ್ ಬಳಿ ಈ ಘಟನೆ ಸಂಭವಿಸಿದೆ. ನಾಯಕ್ ಮತ್ತು ಆಂಬುಲೆನ್ಸ್‌ನಲ್ಲಿದ್ದ ಇತರ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೈವೇಗಳಲ್ಲಿ ಟೋಲ್ ಪ್ಲಾಜಾ ಸಮೀಸುತ್ತಿದೆ ಎಂದು ಬೋರ್ಡ್‌ಗಳು ಕಂಡರೂ ಹಲವರು ವಾಹನಗಳ ವೇಗವನ್ನು ಕಡಿಮೆ ಮಾಡುವುದಿಲ್ಲ. ಇದರಿಂದಾಗಿ ಹಲವು ಅಪಘಾತಗಳು ಟೋಲ್ ಪ್ಲಾಜಾ ಬಳಿ ನಡಿಯುತ್ತಿವೆ. ಅಲ್ಲದೇ ಪ್ರಾಣಿಗಳು ಟೋಲ್ ಪ್ಲಾಜಾಗಳ ಸುತ್ತಮುತ್ತ ಸುಳಿಯದಂತೆ ನೋಡಿಕೊಳ್ಳಬೇಕು. ಈ ಹಿಂದೆಯೂ ಇಂತಹ ಅಪಘಾತಗಳಲ್ಲಿ ಟೋಲ್ ಪ್ಲಾಜಾಗಳ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೇಂದ್ರ ರಸ್ತೆ, ಸಾರಿಗೆ ಇಲಾಖೆ ಈ ಕುರಿತು ಕಟ್ಟುನಿಟ್ಟಾದ ಕ್ರಮ ಕೈಗಳ್ಳಬೇಕಿದೆ.

Most Read Articles

Kannada
English summary
Lorry hits toll plaza Woman saves staff by risking her life
Story first published: Tuesday, July 26, 2022, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X