Maruti: ಹೊಸ ಮಾರುತಿ ಡಿಜೈರ್ ಡೆಲಿವರಿ ದಿನವೆ ಅಪಘಾತ: 5-ಸ್ಟಾರ್ ಸೇಫ್ಟಿ ಕಾರು! ಆದರೆ ಪ್ರಯಾಣಿಕರು...

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಡಿಜೈರ್ (Maruti Dzire) ಸೆಡಾನ್ ಎಲ್ಲರನ್ನು ಅಚ್ಚರಿಗೊಳಿಸುವಂತೆ ಅತ್ಯಂತ ಸುರಕ್ಷಿತ ಮಾರುತಿ ಕಾರಾಗಿ ಹೊರಹೊಮ್ಮಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಅದರೂ ಜನರು ಮಾರುತಿ ಕಾರುಗಳನ್ನು ಗುಣಮಟ್ಟದಲ್ಲಿ ನಂಬಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆಲ್ಲಾ ಈಗ ಸರಿಯಾದ ಉತ್ತರ ಸಿಗುವಂತಹ ಉದಾಹರಣೆ ಇಲ್ಲದೆ. ಟೋಲ್ ಪ್ಲಾಜಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಾರುತಿ ಸುಜುಕಿ ಡಿಜೈರ್ ತನ್ನ ಪ್ರಯಾಣಿಕರ ಜೀವ ಉಳಿಸಿ ಅಚ್ಚರಿಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೊ ಪ್ರಕಾರ, ಲಕ್ನೋ ಟೋಲ್ ಪ್ಲಾಜಾದಲ್ಲಿ ಅಪಘಾತ ಸಂಭವಿಸಿದ್ದು, ಹೊಚ್ಚ ಹೊಸ ಮಾರುತಿ ಡಿಜೈರ್ ಸೆಡಾನ್ ಹಿಂಭಾಗಕ್ಕೆ ತೀವ್ರ ಹಾನಿಯಾಗಿದೆ. ಟೋಲ್ ಪ್ಲಾಜಾದಲ್ಲಿ ಕಾಯುತ್ತಿದ್ದ ಡಿಜೈರ್ ಹಿಂಭಾಗಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

lucknow-toll-plaza-maruti-dzire-accident-all-passengers-safe

ಮೂಲಗಳ ಪ್ರಕಾರ ಇಲ್ಲಿ ಕಂಡುಬರುವ ಡಿಜೈರ್ ಸೆಡಾನ್ ಹೊಚ್ಚ ಹೊಸ ಕಾರು, ಬಹುಶಃ ಡೀಲರ್‌ನಿಂದ ಡೆಲಿವರಿ ಪಡೆದು ಮನೆಗೆ ಓಡಿಸಲಾಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಸೆಡಾನ್‌ನ ಮುಂಭಾಗ ಮತ್ತು ಹಿಂಭಾಗವು ಸಂಪೂರ್ಣವಾಗಿ ಹಾನಿಯಾಗಿದೆ. ಸೆಡಾನ್‌ನ ಹಿಂಭಾಗವು ನಜ್ಜುಗುಜ್ಜಾಗಿದೆ. ಮುಂಭಾಗದಲ್ಲಿ ಗ್ರಿಲ್, ಬಾನೆಟ್, ಬಂಪರ್ ಮತ್ತು ಹೆಡ್ ಲ್ಯಾಂಪ್ ಹಾನಿಗೊಳಗಾಗಿದೆ.

ಕಾರಿನ ಸ್ಥಿತಿಯನ್ನು ನೋಡಿದರೆ, ಟ್ರಕ್ ಹೆಚ್ಚಿನ ವೇಗದಲ್ಲಿ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದಿದೆ ಎಂದು ತೋರುತ್ತದೆ. ನೀವು ಮುಂಭಾಗ ಮತ್ತು ಹಿಂಭಾಗಕ್ಕೆ ಹಾನಿಯಾದ ಭಾಗಗಳನ್ನು ಮಾತ್ರ ನೋಡುತ್ತಿರಬಹುದು, ಆದರೆ ಕಾರಿನ ಒಳಗೆ ಯಾವುದೇ ಹಾನಿ ಆಗಿಲ್ಲದಿರುವುದನ್ನು ಕೂಡ ಗಮನಿಸಬೇಕು. ಅಪಘಾತದ ಸಮಯದಲ್ಲಿ ಮುಂಭಾಗದ ಏರ್ ಬ್ಯಾಗ್‌ಗಳು ಕೂಡ ತೆರೆದುಕೊಂಡು ಪ್ರಯಾಣಿಕರಿಗೆ ರಕ್ಷಣೆ ನೀಡಿದೆ.

lucknow-toll-plaza-maruti-dzire-accident-all-passengers-safe

ಕಾರಿನಲ್ಲಿದ್ದ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಕೊನೆಗೂ ಮಾರುತಿ ಸುರಕ್ಷಿತ ಕಾರನ್ನು ನಿರ್ಮಿಸಿದೆ ಎಂಬ ಅಂಶವನ್ನು ತುಂಬಾ ಜನರು ನಂಬಲಸಾಧ್ಯವೆಂಬಂತೆ ನೋಡುತ್ತಿದ್ದಾರೆ. ಈಗಲೂ ಕಾರು 5-ಸ್ಟಾರ್ ರೇಟಿಂಗ್ ಕಾರು ಅಲ್ಲ ಎಂದು ಹಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಅಪಘಾತದಲ್ಲಿ ಕಾರು ರಕ್ಷಣೆ ನೀಡಿರುವುದು ನಿಜ.

ಕಾರು ಪ್ರಯಾಣಿಕರನ್ನು ಸುರಕ್ಷಿತವಾಗಿಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ರಸ್ತುತ ತಲೆಮಾರಿನ ಮಾರುತಿ ಡಿಜೈರ್ ಅಪಘಾತವಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಮತ್ತೊಂದು ಹೊಚ್ಚ ಹೊಸ ಡಿಜೈರ್ ಅಪಘಾತವಾಗಿತ್ತು. ಅಲ್ಲಿಯೂ ಇದೇ ರೀತಿಯ ಫಲಿತಾಂಶವಿತ್ತು. ಆ ಅಪಘಾತದಲ್ಲಿ ಸಿಲುಕಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷತವಾಗಿ ಹೊರಬಂದಿದ್ದಾರೆ.

ಸುರಕ್ಷತೆಯಲ್ಲಿ 5-ಸ್ಟಾರ್ ರೇಟಿಂಗ್: ಮಾರುತಿ ಸುಜುಕಿ ಡಿಜೈರ್ ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 31.24 ಅಂಕಗಳನ್ನು ಗಳಿಸಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಹಾಗೆಯೇ ಮಕ್ಕಳ ರಕ್ಷಣೆ ವಿಭಾಗದಲ್ಲಿ 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್‌ನ್ನು ದಕ್ಕಿಸಿಕೊಂಡಿದೆ. ಇದು ಮಾರುತಿ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಎಂದು ಹೇಳಬಹುದು.

ನಾಲ್ಕನೇ ತಲೆಮಾರಿನ ಹೊಸ ಡಿಜೈರ್ ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಹೊಸ 'ಮಾರುತಿ ಸುಜುಕಿ ಡಿಜೈರ್' ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳು ಹಾಗೂ ಉತ್ತಮ ನಿರ್ಮಾಣ ಗುಣಮಟ್ಟ ಹೊಂದಿರುವುದರಿಂದಲೇ ಗ್ಲೋಬಲ್ ಎನ್‌ಸಿಎಪಿ ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ.

Article Published On: Monday, February 3, 2025, 16:25 [IST]
English summary
Lucknow toll plaza maruti dzire accident all passengers safe
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+