ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜನರು ಬಹಳ ಜಾಗರೂಕರಾಗಿರಬೇಕು. ರೈಲ್ವೆ ಕ್ರಾಸಿಂಗ್‌ಗಳಲ್ಲಿ ಪ್ರತಿ ನಿತ್ಯ ಹಲವಾರು ಅಪಘಾತಗಳ ಸಂಭವಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳದೇ ಇರುವುದು ದುರಾದೃಷ್ಟಕರ.

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ರೈಲ್ವೆ ಕ್ರಾಸಿಂಗ್‌ನಲ್ಲಿ ಸಂಭವಿಸಿದ ಅಪಘಾತದ ವೀಡಿಯೊವೊಂದು ಹೊರಬಂದಿದೆ. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಯುವಕನ ಗೊಂದಲವೇ ಈ ದುರ್ಘಟನೆಗೆ ಪ್ರಮುಖ ಕಾರಣ. ರೈಲು ಮುಂದೆ ಸಾಗುವವರೆಗೂ ಆತ ಕಾಯದೇ ಇದ್ದುದ್ದೇ ಈ ಅಪಘಾತಕ್ಕೆ ಕಾರಣ. ಅದೃಷ್ಟವಶಾತ್ ಯುವಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ಈ ಘಟನೆ ಎಲ್ಲಿ ನಡೆಯಿತು ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಏಕೆ ತಾಳ್ಮೆಯಿಂದಿರಬೇಕು ಎಂಬುದನ್ನು ಈ ವೀಡಿಯೊದಿಂದ ಸ್ಪಷ್ಟವಾಗಿ ತಿಳಿಯಬಹುದು. ರೈಲು ಬರುವ ಮೊದಲು ಆ ಪ್ರದೇಶದ ಒಂದು ಕಡೆ ಹಗ್ಗ ಕಟ್ಟಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ಮತ್ತೊಂದು ಕಡೆ ಹಗ್ಗ ಕಟ್ಟಿರುವುದು ಈ ವೀಡಿಯೊದಲ್ಲಿ ಕಂಡು ಬರುವುದಿಲ್ಲ. ರೈಲು ಬರುವ ಮೊದಲು ಕೆಲವರು ರೈಲು ಹಳಿ ದಾಟುತ್ತಿರುವುದನ್ನು ಸಹ ಈ ವೀಡಿಯೊದಲ್ಲಿ ಕಾಣಬಹುದು. ಈ ವೇಳೆ ಯುವಕನೊಬ್ಬ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದಿದ್ದಾನೆ.

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ಯುವಕನು ರೈಲು ಬರುವ ಮೊದಲು ರೈಲು ಹಳಿಗಳನ್ನು ದಾಟಬೇಕೇ, ಬೇಡವೇ ಎಂದು ಗೊಂದಲದಲ್ಲಿರುವುದು ಕಂಡು ಬರುತ್ತದೆ. ಆದರೆ ರೈಲು ಹತ್ತಿರ ಬರುತ್ತಿರುವುದನ್ನು ನೋಡಿದ ಆತ ತನ್ನ ಬೈಕ್‌ ಅನ್ನು ಹಳಿಗಳ ಹತ್ತಿರವೇ ಬಿಟ್ಟಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ಯುವಕನು ಬೈಕ್ ಅನ್ನು ರೈಲಿಗೆ ತಾಗುವಂತೆ ನಿಲ್ಲಿಸಿದ್ದ ಕಾರಣಕ್ಕೆ ವೇಗವಾಗಿ ಬಂದ ರೈಲು ನೆಲದ ಮೇಲೆ ಬಿದ್ದಿದ್ದ ಬೈಕಿಗೆ ಗುದ್ದಿ ಬೈಕ್ ಅನ್ನು ಪುಡಿ ಪುಡಿ ಮಾಡಿದೆ. ಬೈಕ್ ಕೆಳಗೆ ಬೀಳುತ್ತಿದ್ದಂತೆ ಯುವಕ ಹಿಂದಕ್ಕೆ ಹೋಗಿದ್ದಾನೆ.

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ಇದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವೀಡಿಯೊ ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲ್ವೆ ಕ್ರಾಸಿಂಗ್‌ಗಳಲ್ಲಿ ತಾಳ್ಮೆ ವಹಿಸುವುದು ಅವಶ್ಯಕ ಎಂಬುದನ್ನು ಈ ವೀಡಿಯೊ ತಿಳಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ರೈಲ್ವೆ ಕ್ರಾಸಿಂಗ್‌ಗಳಲ್ಲಿ ಓಡಾಡುವ ಜನರು ರೈಲು ಬರುವ ಮೊದಲು ರೈಲು ಹಳಿಗಳನ್ನು ದಾಟಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಈ ಘಟನೆಯಲ್ಲಿಯೂ ಹಲವು ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ರೈಲು ಹಳಿ ದಾಟುತ್ತಿರುವುದನ್ನು ಕಾಣಬಹುದು.

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ರೈಲಿಗೆ ತೀರಾ ಹತ್ತಿರದಲ್ಲಿ ನಿಂತರೆ ಅಪಾಯ ಖಚಿತ. ಇದಕ್ಕೆ ನೆಲದ ಮೇಲೆ ಬಿದ್ದು ರೈಲಿಗೆ ತಾಗಿ ಪುಡಿ ಪುಡಿಯಾದ ಬೈಕ್ ಸ್ಪಷ್ಟ ನಿದರ್ಶನ. ಒಂದು ವೇಳೆ ಯುವಕನು ಬೈಕಿನ ಮೇಲೆ ಕುಳಿತು ರೈಲಿಗೆ ತಾಗಿದ್ದರೆ, ಆತ ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆಗಳಿದ್ದವು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ. ರೈಲುಗಳನ್ನು ಬೇರೆ ವಾಹನಗಳ ರೀತಿಯಲ್ಲಿ ತಕ್ಷಣ ನಿಲ್ಲಿಸಲು ಸಾಧ್ಯವಿಲ್ಲವೆಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಈ ಕಾರಣಕ್ಕೆ ಹಲವಾರು ಜನರು ರೈಲುಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಯುವಕನ ಗೊಂದಲದಿಂದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್

ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜನರು ತಾಳ್ಮೆ ವಹಿಸಿ ರೈಲು ಮುಂದೆ ಸಾಗುವವರೆಗೂ ಕೆಲ ನಿಮಿಷಗಳ ಕಾಲ ಕಾಯುವುದು ಒಳ್ಳೆಯದು. ಇಲ್ಲದಿದ್ದರೆ ದೊಡ್ಡ ದುರಂತ ಸಂಭವಿಸುವುದು ಖಚಿತ.

Most Read Articles

Kannada
English summary
Lucky escape for young man as train hits motorcycle. Read in Kannada.
Story first published: Friday, January 29, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X