ಕೆಂಪು ಗ್ರಹದಲ್ಲಿ ಓಡಾಡಿದ ವಾಹನಗಳಿವು..!

By Nagaraja

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಕಳೆದ ದಿನವಷ್ಟೇ ಮಂಗಳ ಗ್ರಹಕ್ಕೆ ಐತಿಹಾಸಿಕ 'ಮಂಗಳಯಾನ' ನೌಕೆಯನ್ನು ಪಿಎಸ್‌ಎಲ್‌ವಿ-ಸಿ25 ಉಡಾವಣಾ ವಾಹನ ಮೂಲಕ ಬಾಹ್ಯಕಾಶ್ಯಕ್ಕೆ ಹಾರಿಬಿಡುವಲ್ಲಿ ಯಶಸ್ವಿಯಾಗಿತ್ತು.

ಪ್ರಮುಖವಾಗಿ ಮಂಗಳ ಗ್ರಹದಲ್ಲಿ ಜೀವಜಲ ಪತ್ತೆಹಚ್ಚುವುದು ಈ ಮಾರ್ಸ್ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ. 450 ಕೋಟಿ ರು. ವೆಚ್ಚದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ (15 ತಿಂಗಳು) ಇಸ್ರೊ ಕೈಗೊಳ್ಳುತ್ತಿರುವ 'ಮಂಗಳಯಾನ' ಜಾಗತಿಕ ಮಟ್ಟದಲ್ಲೂ ಅತ್ಯಂತ ಕುತೂಹಲ ಕೆರಳಿಸಿದೆ.

ಹಾಗಿರುವಾಗ ವೈಜ್ಞಾನಿಕ ಹಾಗೂ ಬಾಹ್ಯಾಕಾಶ ಸಂಶೋಧನೆಗಳಲ್ಲಿ ತೊಡಗಿರುವ ಆಮೆರಿಕಾದ ಬಾಹ್ಯಕಾಶ ಸಂಶೋಧನ ಸಂಸ್ಥೆ ನಾಸಾ (National Aeronautics and Space Administration- NASA), ಬಾಹ್ಯಾಕಾಶದ ಸಂಶೋಧನೆಗೆ ನೆರವಾಗುವಂತಹ ಹಲವಾರು ವಾಹನಗಳನ್ನು ಈಗಾಗಲೇ ರಚಿಸಿರುತ್ತವೆ. ಈ ಪೈಕಿ ಇಂದಿನ ಈ ಲೇಖನದಲ್ಲಿ ಸೌರಮಂಡಲಕ್ಕೆ ವಿಶೇಷವಾಗಿ ಕೆಂಪು ಗ್ರಹಕ್ಕೆ ರವಾನಿಸಲ್ಪಟ್ಟ ಪ್ರಮುಖವಾದ ವಾಹನಗಳ ವಿವರಗಳನ್ನು ಓದುಗರಿಗೆ ಮುಟ್ಟಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ.

ಕೆಂಪು ಗ್ರಹದಲ್ಲಿ ಓಡಾಡಿದ ವಾಹನಗಳಿವು..!

ವಾಹನಗಳಿನ್ನು ಭೂಮಿಗಷ್ಟೇ ಸೀಮಿತವಲ್ಲ. ಭವಿಷ್ಯದಲ್ಲಿ ಸೌರಮಂಡಲದ ಇತರ ಗ್ರಹಗಳಲ್ಲೂ ವಾಹನಗಳ ಸಾನಿಧ್ಯ ಕಂಡುಬರಲಿದೆ ಎಂಬುದು ನಾಸಾ ಗುರಿಯಾಗಿದೆ. ಈ ಸಂಬಂಧ ಮಂಗಳ ಗ್ರಹಗಳ ಕುರುಹುಗಳನ್ನು ಪತ್ತೆಹಚ್ಚಲು ವಾಹನಗಳನ್ನು ತಯಾರಿಸಿತ್ತು.

Apollo Lunar Roving Vehicle

Apollo Lunar Roving Vehicle

1971ನೇ ಇಸವಿಯಲ್ಲಿ ನಾಸಾ ಮೊದಲ ಮಾನವ ಕಾರ್ಯಾಚರಣೆಯ ವಾಹನವನ್ನು ಚಂದ್ರ ನೆಲಕ್ಕೆ ಇಳಿಸಿದ್ದು. ಕೊನೆಯ ಮೂರು ಅಪೊಲೊ ಯೋಜನೆಗಾಗಿ (15,16,17) ಈ ವಾಹನವನ್ನು ಬಳಸಲಾಗಿತ್ತು. ಇದರಲ್ಲಿ ನಾನ್-ರಿಚಾರ್ಜಬಲ್ ಬ್ಯಾಟರಿ ಬಳಸಲಾಗಿತ್ತು.

Apollo Lunar Roving Vehicle

Apollo Lunar Roving Vehicle

ಇದನ್ನು ಪ್ರಮುಖವಾಗಿಯೂ ಕೆಂಪು ಗ್ರಹದ ಸಂಶೋಧನೆಗಾಗಿ ಆಳವಡಿಸಲಾಗಿತ್ತು. ನಾಸಾ ಪ್ರಕಾರ ನಾಲ್ಕು ರೋವರ್‌ಗಳಿಗೆ 38 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಂದರೆ ಈಗಿನ ಸಮಯಕ್ಕೆ ಹೋಲಿಸಿದರೆ ಇದು 200 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ದುಬಾರಿಯಾಗಿದೆ.

Space Exploration Vehicle

Space Exploration Vehicle

ಹೆಸರಲ್ಲೇ ಸೂಚಿಸಿರುವಂತೆಯೇ ಬಾಹ್ಯಾಕಾಶ ಸಂಶೋಧನೆಯೇ ಇದರ ಪ್ರಮುಖ ಉದ್ದೇಶವಾಗಿತ್ತು. ಅಂದ ಹಾಗೆ ಲೂನಾರ್ ರೋವರ್‌ಗಳು ಚಂದ್ರನಲ್ಲಿ ಕೆಲವೇ ತಾಸುಗಳಷ್ಟು ಮಾತ್ರ ಸಂಚರಿಸಬಲ್ಲದು. ಇದೇ ಕಾರಣಕ್ಕಾಗಿ ಸ್ಪೇಸ್ ಎಕ್ಸ್‌ಪ್ಲೋರೇಷನ್ ವೆಹಿಕಲ್ ತಯಾರಿಸಲಾಗಿತ್ತು. ದೀರ್ಘ ಕಾಲ ಬಾಳ್ವಿಕೆ ಹೊಂದುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿತ್ತು.

Space Exploration Vehicle

Space Exploration Vehicle

ಇದರ ಇನ್ನೊಂದು ವಿಶೇಷತೆಯೆಂದರೆ ಇದರೊಳಗೆ ಕುಳಿತುಕೊಳ್ಳುವವರಿಗೆ ಸ್ಪೇಸ್ ಸೂಟ್ ಧರಿಸುವ ಅಗತ್ಯವಿರುವುದಿಲ್ಲ. ಅಂದರೆ ಪ್ರತ್ಯೇಕವಾಗಿ ಸಜ್ಜೀಕರಿಸಲಾದ ಈ ವಾಹನದಲ್ಲಿ ಉಸಿರಾಡಲು ಓಕ್ಸಿಜನ್ ಸೇವೆ ಲಭ್ಯವಿರುತ್ತದೆ. 2010ರಲ್ಲಿ ತಯಾರಿಸಲಾದ ಈ ವಾಹನದ ದರ ಬರೋಬ್ಬರಿ 153 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

Mars Pathfinder/Sojourner

Mars Pathfinder/Sojourner

ಅಗ್ಗದ, ವೇಗವಾಗಿ ಹಾಗೂ ಹೆಚ್ಚು ಸುಧಾರಿತ ವಿನ್ಯಾಸ ಪಡೆದುಕೊಂಡಿರುವ ಮಾರ್ಸ್ ಪಾಥ್‌ಫೈಂಡರ್, ನಾಸಾದಿಂದ ಅಂತರಿಕ್ಷಕ್ಕೆ ಹಾರಿಬಿಡಲಾದ ಮೊದಲ ರೋಬೋಟಿಕ್ ರೋವರ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೂರು ತಿಂಗಳಷ್ಟು ಕಾಲ ಸೌರಮಂಡಲದಲ್ಲಿ ಸುತ್ತಾಡಿದ್ದ ಈ ಆರು ಚಕ್ರಗಳ ಸಣ್ಣದಾದ ರೋವರ್ ಬಂಡಿ, ಭೂಮಂಡಲದ ಸಾವಿರಾರು ಚಿತ್ರಗಳ ಜತೆಗೆ ವಾತಾವರಣ ಹಾಗೂ ಮಣ್ಣಿನ ಕುರಿತು ವಿವರ ಸಂಗ್ರಹಿಸಿತ್ತು. ಇದರ ದರ 250 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

Mars Exploration Rovers

Mars Exploration Rovers

ಮಂಗಳ ಗ್ರಹದ ಮುಂದುವರಿದ ಸಂಶೋಧನೆಗಾಗಿ ಮಾರ್ಸ್ ಎಕ್ಸ್‌ಪ್ಲೋರೇಷನ್ ರೋವರ್ಸ್ ವಾಹನವನ್ನು ತಯಾರಿಸಲಾಗಿತ್ತು. ಅಂತೆಯೇ 2004ನೇ ಇಸವಿಯಲ್ಲಿ ಮೊದಲ ಬಾರಿಗೆ ಮಂಗಳ ಗ್ರಹಕ್ಕೆ ಹಾರಿ ಬಿಡಲಾಗಿತ್ತು. ನಾಸಾ ಮಾಹಿತಿ ಪ್ರಕಾರ ಇದರಲ್ಲಿ ಎರಡು ವಿರುದ್ಧ ದಿಕ್ಕುಗಳಿಗೆ ಚಲಿಸುವ ರೋಬೋಟಿಕ್ ವಾಹನಗಳನ್ನು ಕಳುಹಿಸಿಕೊಡಲಾಗಿತ್ತು. 21 ಮೈಲ್‌ಗಳನಷ್ಟು ಸಂಚರಿಸಿದ ಈ ವಾಹನ ಮಂಗಳ ಗ್ರಹದ ಹಲವಾರು ಚಿತ್ರಗಳನ್ನು ರವಾನಿಸಿತ್ತು. ಆದರೆ ದುರವಷ್ಟವಶಾತ್ ಸಂಪರ್ಕ ಕಡಿತಗೊಂಡಿತ್ತು. 90 ದಿನಗಳ ಯೋಜನೆಯ ಈ ವಾಹನದ ನಿರ್ಮಾಣ, ಬಿಡುಗಡೆ ಹಾಗೂ ಲ್ಯಾಡಿಂಗ್ ಎಲ್ಲ ಸೇರಿ ಒಟ್ಟು 820 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚಾಗಿವೆ.

Curiosity rover

Curiosity rover

ಅಂತರಿಕ್ಷಕ್ಕೆ ರವಾನಿಸಿರುವ ಪೈಕಿ ಇದು ಅತ್ಯಂತ ದೊಡ್ಡ ವಾಹನವಾಗಿದೆ. ಇದು 10 ಫೀಟ್ ಉದ್ದ, 9 ಫೀಟ್ ಅಗಲ ಮತ್ತು 7 ಫೀಟ್ ಎತ್ತರವಿದೆ. ನ್ಲೂಕ್ಲಿಯರ್ ಶಕ್ತಿಯಲ್ಲಿ ಚಲಾಯಿಸುವ ಈ ವಾಹನ, ಆರು ಚಕ್ರಗಳನ್ನು ಪಡೆದಿದ್ದು 200 ಪೌಂಡ್‌ಗಳಷ್ಟು ತೂಕವಿದೆ. ಸಂಪೂರ್ಣ ಮಂಗಳ ಗ್ರಹದ ಚಿತ್ರಣ ಪಡೆಯಲು ಇದರಲ್ಲಿ ವಿಶೇಷವಾದ ಕ್ಯಾಮೆರಾ ಆಳವಡಿಸಲಾಗಿತ್ತು. ಇದರ ಒಟ್ಟು ಖರ್ಚು 2.5 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

Most Read Articles

Kannada
English summary
India has launched its first interplanetary probe,Mars Orbiter Spacecraft onboard PSLV-C25. Have you ever wondered about space cars. Here is some space cars from Nasa which are used in various space missions.
Story first published: Tuesday, November 5, 2013, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X