ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಕೆಲವು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ವಿವಿಧ ರೀತಿಯ ಸ್ಟಂಟ್‌ಗಳನ್ನು ಮಾಡುತ್ತಿದ್ದಾರೆ. ಟಿಕ್‌ಟಾಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಗಿಟ್ಟಿಸಲು, ಹೆಚ್ಕು ಫಾಲೋವರ್‌ಗಳನ್ನು ಹೊಂದಲು ನಾನಾ ಕಸರತ್ತುಗಳಲ್ಲಿ ತೊಡಗುತ್ತಾರೆ.

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಅನಗತ್ಯ ಸ್ಟಂಟ್‌ಗಳನ್ನು ಮಾಡುವವರ ಮೇಲೆ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ರೀತಿಯ ಸ್ಟಂಟ್‌ಗಳು ಅವುಗಳನ್ನು ಮಾಡುವವರಿಗೆ ಮಾತ್ರವಲ್ಲದೇ ಬೇರೆಯವರ ಮೇಲೂ ಪರಿಣಾಮವನ್ನು ಬೀರುತ್ತವೆ. ಈ ಕಾರಣಕ್ಕೆ ಅವುಗಳನ್ನು ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಯುವಕರ ಈ ಸ್ಟಂಟ್‌ಗಳು ಇತರರನ್ನು ಪ್ರಚೋದಿಸದಂತೆ ಮಾಡುವುದು ಇದರ ಹಿಂದಿರುವ ಉದ್ದೇಶ.

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಆದರೆ ಸ್ಟಂಟ್‌ಗಳನ್ನು ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕಾದ ಪೊಲೀಸರೇ ಸ್ಟಂಟ್ ಮಾಡಿದರೇ ಹೇಗೆ? ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಒಬ್ಬರಿಗೆ ದಂಡ ವಿಧಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಮಧ್ಯಪ್ರದೇಶದಲ್ಲಿ ನಡೆದಿರುವ ಈ ಘಟನೆ ದೇಶಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಮನೋಜ್ ಯಾದವ್ ಎಂಬುವವರೇ ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡನೆಗೆ ಒಳಗಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್.

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಾಡಿರುವ ಸ್ಟಂಟ್ ವೀಡಿಯೊ ವೈರಲ್ ಆಗುತ್ತಿದೆ. ಈ ಘಟನೆ ತಮ್ಮ ಗಮನಕ್ಕೆ ಬರುತ್ತಲೇ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಮನೋಜ್ ಯಾದವ್‌ರವರಿಗೆ ರೂ.5,000 ದಂಡ ವಿಧಿಸಿ, ಮತ್ತೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಹಿಂದಿ ಚಿತ್ರ ಸಿಂಗಂನಲ್ಲಿ ಇದೇ ರೀತಿಯ ಸಾಹಸ ದೃಶ್ಯವಿದೆ. ಮನೋಜ್ ಯಾದವ್‌ರವರು ಆ ದೃಶ್ಯವನ್ನು ಅನುಸರಿಸಿ ದಂಡ ತೆತ್ತಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲಿದ್ದ ಮನೋಜ್ ಯಾದವ್ ಎರಡು ಹೋಂಡಾ ಅಮೇಜ್ ಕಾರುಗಳ ಮೇಲೆ ನಿಂತು ಸ್ಟಂಟ್ ಮಾಡಿದ್ದಾರೆ.

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಸಾಮಾನ್ಯವಾಗಿ ಈ ರೀತಿಯ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಅನೇಕ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರಲಾಗುತ್ತದೆ. ಆದರೆ ಮನೋಜ್ ಯಾದವ್ ಸ್ಟಂಟ್‌ಗಳನ್ನು ಮಾಡುವಾಗ ಯಾವುದೇ ರಕ್ಷಣಾ ಸಾಧನಗಳನ್ನು ಬಳಸಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಪೊಲೀಸರೇ ಈ ಸ್ಟಂಟ್ ಮಾಡಿರುವ ಕಾರಣಕ್ಕೆ ಬೇರೆ ಯುವಕರು ಇದರಿಂದ ಉತ್ತೇಜಿತರಾಗದಂತೆ ನೋಡಿಕೊಳ್ಳಲು ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಈ ವಿಲಕ್ಷಣ ಸ್ಟಂಟ್ ಮಾಡಲು ಬಳಸಿದ ಎರಡೂ ಹೋಂಡಾ ಅಮೇಜ್ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಈ ಕಾರುಗಳು ಯಾರಿಗೆ ಸೇರಿದವು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವೀಡಿಯೊ ವೈರಲ್ ಆದ ನಂತರ, ಮನೋಜ್ ಯಾದವ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಗರ್ ಪ್ರದೇಶದ ಐಜಿಪಿ ಅನಿಲ್ ಶರ್ಮಾರವರು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Most Read Articles

Kannada
English summary
Madhya Pradesh sub inspector gets Rs.5000 fine for performing stunt. Read in Kannada.
Story first published: Wednesday, May 13, 2020, 11:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X