ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಇಳಯ ದಳಪತಿ ಖ್ಯಾತಿಯ ನಟ ವಿಜಯ್'ರವರು ಬಳಸುವ ಐಷಾರಾಮಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕೂಡ ಒಂದು. ಈ ಕಾರಿಗಾಗಿ ವಿಜಯ್'ರವರು ಒಂದು ಲಕ್ಷ ರೂಪಾಯಿ ದಂಡ ತೆತ್ತಿದ್ದಾರೆ. ನಟ ವಿಜಯ್'ರವರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ದಂಡ ವಿಧಿಸಿರಬಹುದು ಎಂಬ ಅಭಿಪ್ರಾಯ ಮೂಡುವುದು ಸಹಜ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಆದರೆ ಅವರಿಗೆ ಕೋರ್ಟ್ ದಂಡ ವಿಧಿಸಿರುವುದು ಬೇರೆ ಕಾರಣಕ್ಕೆ. ವಿಜಯ್ ತಾವು ಖರೀದಿಸಿದ್ದ ಕಾರಿನ ಸಂಬಂಧ ಮೊಕದ್ದಮೆ ಹೂಡಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಅವರು ತಮ್ಮ ಬಹುಕೋಟಿ ಬೆಲೆಯ ಐಷಾರಾಮಿ ಕಾರಿನ ಮೇಲೆ ಸರ್ಕಾರ ವಿಧಿಸಿರುವ ಪ್ರವೇಶ ತೆರಿಗೆಯಿಂದ ವಿನಾಯಿತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಆದರೆ ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ರೂ.1 ಲಕ್ಷ ದಂಡ ವಿಧಿಸಿದೆ. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಮಣ್ಯಂರವರು ನಟರು ನಿಜ ಜೀವನದಲ್ಲಿಯೂ ನಾಯಕರಾಗಿರಬೇಕು. ಸಿನಿಮಾದಲ್ಲಿ ಮಾತ್ರ ನಾಯಕರಾಗಬಾರದು ಎಂದು ಅಭಿಪ್ರಾಯಪಟ್ಟರು.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಹೇಳಿಕೊಳ್ಳುವ ನಟರು ತೆರಿಗೆ ವಂಚನೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ತೆರಿಗೆ ಪಾವತಿಸುವುದು ದೇಣಿಗೆ ನೀಡುವಂತೆ ಅಲ್ಲ ಎಂದು ಅವರು ಹೇಳಿದರು.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ದೇಶಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ನ್ಯಾಯಮೂರ್ತಿ ಎಸ್‌.ಎಂ.ಸುಬ್ರಮಣ್ಯಂರವರು ಹೇಳಿದರು. ನಟ ವಿಜಯ್'ರವರಿಗೆ ಹೈ ಕೋರ್ಟ್ ದಂಡ ವಿಧಿಸಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಕೋಟಿಗಟ್ಟಲೇ ಸಂಭಾವನೆ ಪಡೆಯುವ ನಟನಾಗಿ ಕಾರಿನ ಮೇಲೆ ವಿಧಿಸಿರುವ ಪ್ರವೇಶ ತೆರಿಗೆಯಿಂದ ವಿನಾಯಿತಿ ಕೋರಿ ಅವರು ಮೊಕದ್ದಮೆ ಹೂಡಿರುವುದು ಅವರ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ನಟ ವಿಜಯ್ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬಳಸುತ್ತಿದ್ದಾರೆ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಈ ಕಾರಿನ ಮೌಲ್ಯ ಸುಮಾರು ರೂ.3.5 ಕೋಟಿಗಳಾಗಿದೆ. ಈ ಕಾರ್ ಅನ್ನು ಅವರು 2012ರಲ್ಲಿ ಇಂಗ್ಲೆಂಡಿನಿಂದ ಆಮದು ಮಾಡಿಕೊಂಡಿದ್ದರು. ವಿದೇಶದಿಂದ ಆಮದು ಮಾಡಿಕೊಳ್ಳುವ ವಾಹನಗಳಿಗೆ ಭಾರತದಲ್ಲಿ ಗರಿಷ್ಠ ತೆರಿಗೆ ವಿಧಿಸಲಾಗುತ್ತದೆ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಈ ತೆರಿಗೆಗಳು 15% ನಿಂದ 125% ವರೆಗೂ ಇರುತ್ತವೆ. ಸಿಕೆಡಿ ಮೂಲಕ ಆಮದು ಮಾಡಿಕೊಳ್ಳುವ ದ್ವಿಚಕ್ರ ವಾಹನಗಳಿಗೆ 25% ನಷ್ಟು, ಪ್ರಯಾಣಿಕ ವಾಹನಗಳಿಗೆ 30% ನಷ್ಟು, ಟ್ರಕ್ ಹಾಗೂ ಬಸ್‌ಗಳಿಗೆ 30% ನಷ್ಟು ತೆರಿಗೆ ವಿಧಿಸಲಾಗುತ್ತದೆ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಇನ್ನು ಸಿಬಿಯು ಮೂಲಕ ಆಮದು ಮಾಡಿಕೊಳ್ಳುವ ದ್ವಿಚಕ್ರ ವಾಹನಗಳಿಗೆ 50% ನಷ್ಟು, 40,000 ಅಮೆರಿಕನ್ ಡಾಲರ್'ಗಳಿಗಿಂತ ಕಡಿಮೆ ಮೌಲ್ಯದ ಕಾರುಗಳಿಗೆ 60% ನಷ್ಟು, 40,000 ಅಮೆರಿಕನ್ ಡಾಲರ್'ಗಳಿಗಿಂತ ಹೆಚ್ಚು ಬೆಲೆ ಹೊಂದಿರುವ ಕಾರುಗಳಿಗೆ 100% ನಷ್ಟು ತೆರಿಗೆ ವಿಧಿಸಲಾಗುತ್ತದೆ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ಬಳಸಿದ ವಾಹನಗಳಾಗಿದ್ದರೆ, 125% ನಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಪ್ರವೇಶ ತೆರಿಗೆಯನ್ನು ರದ್ದು ಪಡಿಸುವಂತೆ ಕೋರಿ ನಟ ವಿಜಯ್ ಮದ್ರಾಸ್ ಹೈ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ದಂಡ ವಿಧಿಸಿದೆ.

ಇಳಯ ದಳಪತಿ ಖ್ಯಾತಿಯ ನಟನಿಗೆ ದಂಡ ವಿಧಿಸಿದ ಹೈ ಕೋರ್ಟ್

ನಟ ವಿಜಯ್ ಬಳಸುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ 6.6 ಲೀಟರ್ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 570 ಬಿಹೆಚ್‌ಪಿ ಪವರ್ ಹಾಗೂ 780 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Madras High Court imposes Rs.One lakh fine on Tamil actor Vijay. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X