ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಚೆನ್ನೈ ಹೈಕೋರ್ಟ್‌ನ ಮಧುರೈ ಪೀಠವು ವಾಹನ ಸವಾರರು ವಾಹನಗಳಲ್ಲಿ ಅಂಟಿಸಿರುವ ಫೋಟೋ ಹಾಗೂ ಇನ್ನಿತರ ಯಾವುದೇ ಸ್ಟಿಕ್ಕರ್ ಗಳನ್ನು ಎರಡು ತಿಂಗಳಲ್ಲಿ ತೆಗೆದುಹಾಕಬೇಕು ಎಂದು ಆದೇಶ ನೀಡಿದೆ. ಮಧುರೈನ ವಕೀಲರಾದ ರಮೇಶ್ ಎಂಬುವವರು ಹೈಕೋರ್ಟ್ ನ ಮಧುರೈ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಈ ಅರ್ಜಿಯಲ್ಲಿ ತಮಿಳುನಾಡಿನಲ್ಲಿರುವ 50% ನಷ್ಟು ವಾಹನಗಳಲ್ಲಿ ವಕೀಲರ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಈ ರೀತಿಯ ಸ್ಟಿಕ್ಕರ್ ಅಂಟಿಸುವವರಲ್ಲಿ ಹಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಗಾಂಜಾ ಮಾರಾಟ ಮಾಡುವವರು ಹಾಗೂ ರೌಡಿಗಳು ಈ ರೀತಿ ಸ್ಟಿಕ್ಕರ್‌ಗಳನ್ನು ಬಳಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಕೊನೆಗೆ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆ ಅರ್ಜಿಯಲ್ಲಿ ತಿಳಿಸಲಾಗಿತ್ತು.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ವಕೀಲರ ಸ್ಟಿಕ್ಕರ್ ಅಂಟಿಸಿರುವ ವಾಹನವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಭದ್ರಕೋಟೆಯಾಗಿದೆ. ಈಗ ಹಲವು ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ಕಾನೂನು ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಆ ಕಾಲೇಜುಗಳಲ್ಲಿ ಕೆಲವು ಸಮಾಜ ಘಾತುಕರು ಪದವಿ ಪಡೆದು ವಾಹನಗಳ ಮೇಲೆ ವಕೀಲ ಸ್ಟಿಕ್ಕರ್‌ಗಳನ್ನು ಬಳಸಿ ಸಂಚಾರಿ ಪೊಲೀಸರಿಂದ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರಿಂದ ತಪ್ಪಿಸಿ ಕೊಳ್ಳುತ್ತಿದ್ದಾರೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಈ ಹಿನ್ನೆಲೆಯಲ್ಲಿ 2019 ರ ನಿಯಮಗಳ ಪ್ರಕಾರ ಬಾರ್ ಕೌನ್ಸಿಲ್ ಅನುಮೋದಿಸಿದ ಸ್ಟಿಕ್ಕರ್‌ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಿಕೊಳ್ಳಲು ಅನುಮತಿ ನೀಡಬೇಕು. ಅನುಮತಿಯಿಲ್ಲದೆ ವಕೀಲರ ಸ್ಟಿಕ್ಕರ್ ಅಂಟಿಸುವ ಮೂಲಕ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆ ಅರ್ಜಿಯಲ್ಲಿ ತಿಳಿಸಲಾಗಿತ್ತು.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ನ್ಯಾಯಮೂರ್ತಿಗಳಾದ ಎನ್. ಕಿರುಬಾಕರನ್ ಹಾಗೂ ಪಿ. ಪುಖಲೆಂಡಿ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆಸಿದ ನಂತರ ನ್ಯಾಯ ಪೀಠವು ಆ ಸ್ಟಿಕ್ಕರ್ ಗಳನ್ನು ತೆಗೆದು ಹಾಕುವಂತೆ ಆದೇಶ ಹೊರಡಿಸಿದೆ. ತಮಿಳುನಾಡಿನಲ್ಲಿ ವಕೀಲರು / ಮಾಧ್ಯಮ / ಪೊಲೀಸರ ಸ್ಟಿಕ್ಕರ್‌ಗಳನ್ನು ವಾಹನಗಳ ಮೇಲೆ ಹೆಚ್ಚು ಅಂಟಿಸಲಾಗುತ್ತಿದೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಅಂತಹ ಸ್ಟಿಕ್ಕರ್ ಹೊಂದಿರುವ ವಾಹನಗಳಲ್ಲಿ ಓಡಾಡುವವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಅವರು ತಮ್ಮ ವಾಹನಗಳಲ್ಲಿ ರಾಜಕೀಯ ಪಕ್ಷಗಳ ಧ್ವಜಗಳು, ನಾಯಕರ ಫೋಟೋಗಳು ಹಾಗೂ ತಮ್ಮ ಜಾತಿಯ ನಾಯಕರ ಚಿತ್ರಗಳನ್ನು ಬಳಸುತ್ತಿದ್ದಾರೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಪೊಲೀಸರು ತಮ್ಮ ವಾಹನವನ್ನು ನಿಲ್ಲಿಸಬಾರದು ಹಾಗೂ ಪರಿಶೀಲನೆ ನಡೆಸ ಬಾರದು ಎಂಬ ಉದ್ದೇಶದಿಂದ ಈ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಧ್ವಜ ಹಾಗೂ ಪಕ್ಷದ ನಾಯಕರ ಚಿತ್ರಗಳನ್ನು ಚುನಾವಣಾ ಸಮಯದಲ್ಲಿ ಮಾತ್ರ ಬಳಸಬೇಕು. ಇತರ ಸಮಯಗಳಲ್ಲಿ ಅವುಗಳ ಬಳಕೆ ಅನಗತ್ಯ ಎಂದು ನ್ಯಾಯ ಪೀಠವು ತಿಳಿಸಿದೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಇವುಗಳ ಬಳಕೆಗೆ ಕಾನೂನಿನ ಮೂಲಕ ಅನುಮತಿ ನೀಡುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಕೆಲವು ಆದೇಶಗಳನ್ನು ಹೊರಡಿಸುತ್ತದೆ. ಈ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ನ್ಯಾಯಾಲಯವು ಗೃಹ ಇಲಾಖೆ, ಸಾರಿಗೆ ಇಲಾಖೆ ಹಾಗೂ ಡಿಜಿಪಿಗೆ ಸೂಚನೆ ನೀಡಿದೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ನ್ಯಾಯಾಧೀಶರು ವಾಹನಗಳಲ್ಲಿರುವ ಅನಗತ್ಯ ಸ್ಟಿಕ್ಕರ್‌ಗಳನ್ನು ಮಾತ್ರವಲ್ಲದೆ ವಾಹನಗಳನ್ನು ಸರಿಯಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಅಂದರೆ ವಾಹನಗಳು ನಿಯಮಗಳಿಗೆ ಅನುಸಾರವಾಗಿ ನಿಯಮಿತವಾಗಿ ಪರವಾನಗಿ ಪಡೆಯುತ್ತವೆಯೇ, ಅವುಗಳನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತಿದೆಯೇ, ವಾಹನಗಳಲ್ಲಿರುವ ಹೆಡ್‌ಲೈಟ್ ಗಳನ್ನು ಸರಿಯಾಗಿ ಅಳವಡಿಸಲಾಗಿದೆಯೇ ಎಂಬುದನ್ನೂ ಸಹ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಇವುಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುವ ವಾಹನಗಳನ್ನು ಜಪ್ತಿ ಮಾಡಬೇಕು ಅಥವಾ ದಂಡ ವಿಧಿಸಬೇಕು. ಅದೇ ರೀತಿ ವಾಹನದಲ್ಲಿ ಯಾವುದೇ ನಿಷೇಧಿತ ವಿಂಡೋ ಗ್ಲಾಸ್ ಅಥವಾ ಬಣ್ಣದ ಗ್ಲಾಸ್ ಗಳಿದ್ದರೆ ಅವುಗಳನ್ನು ಸಹ ತೆಗೆದು ಹಾಕಬೇಕೆಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ವಾಹನದ ಹೊರಗೆ ನಾಯಕರ ಫೋಟೋಗಳು ಅಥವಾ ಇತರ ಯಾವುದೇ ಚಿತ್ರಗಳನ್ನು ಅಂಟಿಸಿದರೆ ಅವುಗಳನ್ನು ತೆಗೆದುಹಾಕಬೇಕು. ವಾಹನದ ನಂಬರ್ ಪ್ಲೇಟ್‌ಗಳು, ಮೋಟಾರ್ ವಾಹನ ಕಾಯ್ದೆಯ ನಿಯಮಗಳಿಗೆ ಒಳಪಟ್ಟಿರಬೇಕು. ಈ ಆದೇಶವನ್ನು ಮುಂದಿನ 60 ದಿನಗಳಲ್ಲಿ ಜಾರಿಗೊಳಿಸಬೇಕು ಎಂದು ನ್ಯಾಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ಈ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸಬೇಕು ಅಥವಾ ಅವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಮುಂದಿನ 2 ತಿಂಗಳಲ್ಲಿ ಹೈಕೋರ್ಟ್‌ನ ಈ ಆದೇಶವನ್ನು ಜಾರಿಗೊಳಿಸ ಬೇಕೆಂದು ಹೇಳಲಾಗಿದೆ.

ವಾಹನಗಳಲ್ಲಿ ಅಳವಡಿಸಿರುವ ವಕೀಲರ ಸ್ಟಿಕ್ಕರ್ ತೆಗೆದು ಹಾಕುವಂತೆ ಆದೇಶ ನೀಡಿದ ಹೈ ಕೋರ್ಟ್

ದೇಶದ ಹಲವು ರಾಜ್ಯಗಳಲ್ಲಿ ವಾಹನಗಳಲ್ಲಿ ಅಳವಡಿಸಿರುವ ಜಾತಿ ಸೂಚಕ ಸ್ಟಿಕ್ಕರ್ ಗಳನ್ನು ತೆಗೆದು ಹಾಕಲಾಗುತ್ತಿದೆ. ಜಾತಿ ಸೂಚಕ ಸ್ಟಿಕ್ಕರ್ ಗಳನ್ನು ವಾಹನಗಳಲ್ಲಿ ಅಳವಡಿಸಿರುವ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಲಾಗಿತ್ತು. ಈ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿ ಕಾರ್ಯಾಲಯವು ಸೂಚನೆ ನೀಡಿದ ನಂತರ ಜಾತಿ ಸೂಚಕ ಸ್ಟಿಕ್ಕರ್ ಗಳನ್ನು ವಾಹನಗಳಿಂದ ತೆಗೆದು ಹಾಕಲಾಗುತ್ತಿದೆ.

Most Read Articles

Kannada
English summary
Madras high court orders to remove lawyer stickers from all vehicles details
Story first published: Saturday, September 11, 2021, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X