ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಮದ್ರಾಸ್ ಐಐಟಿ ತಂಡವು ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಪರ್ಯಾಯವಾಗಿ ಝಿಂಕ್-ಏರ್ ಬ್ಯಾಟರಿಗಳನ್ನು ತಯಾರಿಸಲು ಮುಂದಾಗಿದೆ. ಈ ಪ್ರಯತ್ನವು ಯಶಸ್ವಿಯಾದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ದೊಡ್ಡ ಕ್ರಾಂತಿಯನ್ನು ನೋಡಲಿದ್ದೇವೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಇವಿ ವಾಹನಗಳ ಆಗಮನದಿಂದ ಪ್ರಸ್ತುತ ಆಟೋಮೊಬೈಲ್ ಉದ್ಯಮದ ಚಿತ್ರಣವೇ ಬದಲಾಗಿದೆ. ಇಷ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಆಟೋಮೊಬೈಲ್ ಕ್ಷೇತ್ರವನ್ನು ಆಳುತ್ತಿದ್ದವು, ಆದರೆ ಇದೀಗ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗಿಯಿಟ್ಟ ಬಳಿಕ ಇಂಧನ ಚಾಲಿತ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಆವಿಷ್ಕಾರದ ಮೊದಲು ವಿದ್ಯುತ್ ಎಂಜಿನ್ ಅನ್ನು ಕಂಡುಹಿಡಿಯಲಾಗಿತ್ತು. ಆದರೆ ಎಂಜಿನ್ ಚಲಾಯಿಸಲು ಅಂದಿನ ಕಾಲದಲ್ಲಿ ತಂತ್ರಜ್ಞಾನ ಕೊರತೆ ಹಾಗೂ ಸಾಕಷ್ಟು ಬ್ಯಾಟರಿಗಳಿಲ್ಲದ ಕಾರಣ ಸ್ಥಗಿತಗೊಂಡಿತ್ತು. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಹೆಚ್ಚು ಜನಪ್ರಿಯವಾದವು. ಆದರೆ ಈಗ ಲಿಥಿಯಂ ಐಯಾನ್ ಬ್ಯಾಟರಿ ಬಂದಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಈ ಲಿಥಿಯಂ ಐಯಾನ್ ಬ್ಯಾಟರಿಗಳು ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ಸಂಗ್ರಹಿಸಬಲ್ಲವು. ಹಾಗಾಗಿ ಈ ಬ್ಯಾಟರಿಗಳನ್ನು ವಾಹನಗಳಲ್ಲಿ ಬಳಸಲು ಆರಂಭಿಸಿದ್ದಾರೆ. ಈ ಬ್ಯಾಟರಿಗಳಲ್ಲಿ ಲಿಥಿಯಂ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಕಚ್ಚಾ ವಸ್ತುವಾಗಿದೆ. ಈ ಲಿಥಿಯಂ ಕಾಂಗೋದಲ್ಲಿ ವ್ಯಾಪಕವಾಗಿ ಲಭ್ಯವಿದ್ದು, ಚೀನಾ ಇದನ್ನು ಖರೀದಿಸಿ ಹೆಚ್ಚು ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಉತ್ಪಾದಿಸಿ ಪ್ರಪಂಚದ ಇತರ ಭಾಗಗಳಿಗೆ ರಫ್ತು ಮಾಡುತ್ತಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಈ ಬ್ಯಾಟರಿಗಳ ಬೆಲೆ ತುಂಬಾ ಹೆಚ್ಚಾಗಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಉತ್ತುಂಗದಲ್ಲಿದೆ. ಹಾಗಾಗಿ ಪ್ರಪಂಚದಾದ್ಯಂತ ಅನೇಕ ವಿಜ್ಞಾನಿಗಳು ಈ ಲಿಥಿಯಂಗೆ ಪರ್ಯಾಯವನ್ನು ಕಂಡುಹಿಡಿಯಲು ವಿವಿಧ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಭಾರತದಲ್ಲೂ ಈ ಸಂಬಂಧ ಹಲವು ಸಂಶೋಧನೆಗಳು ನಡೆಯುತ್ತಿವೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಇತ್ತೀಚೆಗೆ ಐಐಟಿ ಮದ್ರಾಸ್‌ನ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಅರವಿಂದ್ ಕುಮಾರ್ ಚಂದ್ರನ್ ನೇತೃತ್ವದ ತಂಡವು ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಪರ್ಯಾಯವಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಬಹುತೇಕ ಅರ್ಧದಷ್ಟು ಯಶಸ್ವಿಯಾಗಿದ್ದಾರೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಕ್ರಾಂತಿಯನ್ನುಂಟುಮಾಡಲಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಝಿಂಕ್-ಏರ್ ಬ್ಯಾಟರಿಗಳೊಂದಿಗೆ ಬದಲಾಯಿಸಲು ತಂಡವು ಯೋಜಿಸಿದೆ. ಈ ಬ್ಯಾಟರಿಯನ್ನು ತಯಾರಿಸುವಲ್ಲಿ ಝಿಂಕ್ ಪ್ರಮುಖ ಅಂಶವಾಗಿದೆ. ಇದು ಪ್ರಕೃತಿಯಲ್ಲಿ ಅತ್ಯಂತ ಹೇರಳವಾಗಿರುವ ವಸ್ತುವಾಗಿದ್ದು, ಅದರೊಂದಿಗೆ ಬ್ಯಾಟರಿ ತಯಾರಿಸಿದರೆ, ಕಚ್ಚಾ ವಸ್ತುಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಹೀಗಾಗಿ ಈ ಯೋಜನೆ ಲಿಥಿಯಂ ಐಯಾನ್ ಗೆ ಪರ್ಯಾಯವಾಗಲಿದೆ ಎಂದು ಐಐಟಿ ತಂಡ ಭವಿಷ್ಯ ನುಡಿದಿದೆ. ಪ್ರಸ್ತುತ ತಂಡವು ಝಿಂಕ್-ಏರ್‌ನ ಕೋಶಗಳನ್ನು ತಯಾರಿಸುವ ಪ್ರಯತ್ನಲ್ಲಿದೆ. ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ಹಂತವು ಈ ಕೋಶಗಳನ್ನು ಬ್ಯಾಟರಿಗಳಾಗಿ ಪರಿವರ್ತಿಸುವುದಾಗಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಇದು ಸಂಪೂರ್ಣ ಯಶಸ್ವಿಯಾದಲ್ಲಿ ಲಿಥಿಯಂ ಐಯಾನ್ ಬ್ಯಾಟರಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅದರೊಂದಿಗೆ ಎಲೆಕ್ಟ್ರಿಕ್ ವಾಹನದ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವುದರಿಂದ ಪ್ರಸ್ತುತ ಇವಿ ವಾಹನಗಳ ಮೈಲೇಜ್‌ಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತವೆ ಎಂದು ಐಐಟಿ ಮದ್ರಾಸ್‌ನ ರಸಾಯನಶಾಸ್ತ್ರ ತಂಡ ತಿಳಿಸಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಲಿಥಿಯಂ-ಐಯಾನ್ ಬ್ಯಾಟರಿಗಳೊಂದಿಗಿನ ಮತ್ತೊಂದು ಸಮಸ್ಯೆಯೆಂದರೆ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನದಲ್ಲಿ ಸಂಪೂರ್ಣ ಬ್ಯಾಟರಿಯನ್ನು ವಿನಿಮಯ ಮಾಡಿಕೊಳ್ಳುವುದಾಗಿದೆ. ಆದರೆ ಈ ಜಿಂಕ್-ಏರ್ ಬ್ಯಾಟರಿಗಳು ಹಾಗಲ್ಲ, ಬಲ್ಕ್ ಬ್ಯಾಟರಿಗಳ ಬದಲಿಗೆ ಪ್ರತಿ ಕೋಶವನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಬ್ಯಾಟರಿಗಳು ಸೆಲ್ಯುಲಾರ್ ರಚನೆಗಳಾಗಿರುವುದರಿಂದ, ಲಿಥಿಯಂ ಅಯಾನ್‌ನಿಂದ ಕೋಶಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಆದರೆ ಝಿಂಕ್-ಏರ್ ಬ್ಯಾಟರಿಯನ್ನು ಸೇರಿಸಿದರೆ ಪ್ರತಿ ಕೋಶವನ್ನು ಪ್ರತ್ಯೇಕವಾಗಿ ತೆಗೆದುಹಾಕಬಹುದು. ಅಲ್ಲದೆ ಈ ಝಿಂಕ್ ಅಂಶವಿರುವ ಬ್ಯಾಟರಿಯನ್ನು ತಯಾರಿಸಲು ತಗಲುವ ವೆಚ್ಚ ಕಡಿಮೆಯಿರುವುದರಿಂದ ಈಗಿನ ಲಿಥಿಯಂ ಐಯಾನ್ ಬ್ಯಾಟರಿಗಿಂತ ಹಲವು ಪಟ್ಟು ಕಡಿಮೆಯಾಗಲಿದೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಅಷ್ಟೇ ಅಲ್ಲ ಲಿಥಿಯಂ ಐಯಾನ್ ಬ್ಯಾಟರಿಗೆ ಹೋಲಿಸಿದರೆ ಇದರ ತೂಕ ಕೂಡ ತುಂಬಾ ಕಡಿಮೆ. ಅಸಮರ್ಪಕ ಕ್ರಿಯೆಯ ಸಂದರ್ಭದಲ್ಲಿ ಅಸ್ತಿತ್ವದಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಸಾಮೂಹಿಕವಾಗಿ ಬದಲಾಯಿಸಬೇಕಾಗುತ್ತದೆ. ಆದರೆ ಈ ಝಿಂಕ್-ಏರ್ ಬ್ಯಾಟರಿಯನ್ನು ಕ್ಯಾಸೆಟ್ ವ್ಯವಸ್ಥೆಯಲ್ಲಿ ನಿರ್ಮಿಸಲಾಗಿದ್ದು, ಬ್ಯಾಟರಿ ತುಂಬಿದ್ದರೆ ಯಾವ ಕ್ಯಾಸೆಟ್ ರಿಪೇರಿ ಆಗಿದೆ ಎಂದು ನೋಡಿ ಬದಲಾಯಿಸಿದರೆ ಸಾಕು.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಭಾರತದಲ್ಲಿ ಲಿಥಿಯಂ ಕಚ್ಚಾ ವಸ್ತುಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಆದರೆ ಝಿಂಕ್ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಹಾಗಾಗಿ ಈ ಝಿಂಕ್-ಏರ್ ಬ್ಯಾಟರಿಗಳು ಭಾರತಕ್ಕೆ ಹೊಂದಿಕೆಯಾಗುತ್ತವೆ ಎಂದು ಅನೇಕ ತಜ್ಞರು ಹೇಳುತ್ತಿದ್ದಾರೆ.

ಇನ್ಮುಂದೆ ಇವಿ ಸ್ಕೂಟರ್ ಬೆಂಕಿ ಅವಘಡಗಳ ಚಿಂತೆ ಬೇಡ: ಸಿದ್ಧವಾಗುತ್ತಿದೆ ದೇಶೀಯ ಪ್ರಮಾಣಿತ ಬ್ಯಾಟರಿ

ಮದ್ರಾಸ್ ಐಐಟಿ ತಂಡದ ಝಿಂಕ್-ಏರ್ ಬ್ಯಾಟರಿಗಳನ್ನು ಯಶಸ್ವಿಯಾಗಿ ತಯಾರಿಸಿದರೆ, ಎಲೆಕ್ಟ್ರಿಕ್ ವಾಹನಗಳ ಬೆಲೆ ತುಂಬಾ ಕಡಿಮೆಯಾಗಲಿದೆ, ಜನರು ಎಲೆಕ್ಟ್ರಿಕ್ ವಾಹನಗಳಿಂದ ಹೆಚ್ಚು ಮೈಲೇಜ್ ಕೂಡ ಹೆಚ್ಚಾಗಿ ನಿರೀಕ್ಷಿಸಬಹುದು. ಅಲ್ಲದೆ ತೂಕ ಮತ್ತು ವಿನಿಮಯ ತಂತ್ರಜ್ಞಾನ ಎಲ್ಲವೂ ಸರಳವಾಗಿರಲಿದೆ.

Most Read Articles

Kannada
English summary
Madras iit team devolping zinc air batteries replacement for lithium ion
Story first published: Wednesday, June 1, 2022, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X