ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಭಾರತದ ವಿವಿಧ ಭಾಗಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 100 ಗಳ ದಾಟಿದೆ. ಈ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ದಿನ ನಿತ್ಯದ ಓಡಾಟಕ್ಕೆ ವಾಹನಗಳನ್ನು ಅವಲಂಬಿಸಿರುವ ವಾಹನ ಸವಾರರು ವಾಹನ ಬಳಸಲು ಹಿಂದೆ ಮುಂದೆ ನೋಡುವಂತಾಗಿದೆ.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಭಾರತದಲ್ಲಿ ಪೆಟ್ರೋಲ್ ಬೆಲೆ ಮಾತ್ರವಲ್ಲದೇ ಡೀಸೆಲ್ ಬೆಲೆಯೂ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆಯಾಗುವ ಆತಂಕ ಎದುರಾಗಿದೆ. ಮಧುರೈನ ಬಿಪಿ ಪಾಂಡ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಮೀನಿನ ಅಂಗಡಿಯೊಂದು ತನ್ನ ಗ್ರಾಹಕರಿಗೆ ವಿಭಿನ್ನ ಬಗೆಯ ಕೊಡುಗೆಯನ್ನು ನೀಡುತ್ತಿದೆ.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಈ ಕೊಡುಗೆಯನ್ವಯ ರೂ. 500 ಗಳಿಗಿಂತ ಹೆಚ್ಚು ಬೆಲೆಯ ಮೀನು ಖರೀದಿಸುವ ಗ್ರಾಹಕರಿಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಈ ಕೊಡುಗೆ ಘೋಷಣೆಯ ನಂತರ ಅಲ್ಲಿನ ಗ್ರಾಹಕರು ಮೀನು ಖರೀದಿಸಲು ಮೀನು ಅಂಗಡಿಗೆ ಮುಗಿ ಬಿದ್ದಿದ್ದರು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಈ ಮೀನಿನ ಅಂಗಡಿಯ ಮುಂದೆ ಈ ಕೊಡುಗೆಯ ಬಗ್ಗೆ ಸೂಚನಾ ಫಲಕವನ್ನು ಸಹ ಅಳವಡಿಸಲಾಗಿತ್ತು. ಈ ಸೂಚನಾ ಫಲಕದಲ್ಲಿ ಅಂಗಡಿಗೆ ಬರುವ ಗ್ರಾಹಕರು ಫೇಸ್ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲಿಸಬೇಕು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ರೂ. 500 ಗಳಿಗಿಂತ ಹೆಚ್ಚಿನ ಬೆಲೆಗೆ ಮೀನು ಖರೀದಿಸುವ ಗ್ರಾಹಕರಿಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸೂಚನಾ ಫಲಕದಲ್ಲಿ ಘೋಷಿಸಲಾಗಿತ್ತು. ಅಂದ ಹಾಗೆ ಈ ಕೊಡುಗೆ ಕೇವಲ ಒಂದು ದಿನ ಅಂದರೆ ಆಗಸ್ಟ್ 1 ಕ್ಕೆ ಮಾತ್ರ ಲಭ್ಯವಿತ್ತು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಈ ಬಗ್ಗೆ ಮಾಹಿತಿ ಪಡೆದ ನಂತರ ಅನೇಕ ಜನರು ಮೀನು ಅಂಗಡಿ ಮುಂದೆ ಜಮಾಯಿಸಿದ್ದರು. ಇಷ್ಟು ಸಾಲದೆಂಬಂತೆ ಈ ಬಗ್ಗೆ ತಮ್ಮ ಸ್ನೇಹಿತರು ಹಾಗೂ ಪರಿಚಯಸ್ಥರಿಗೂ ಮಾಹಿತಿ ನೀಡಿದರು. ಮೀನು ಖರೀದಿಸುವವರಿಗೆ ಉಚಿತವಾಗಿ ಪೆಟ್ರೋಲ್ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾದ ನಂತರ ಜನರು ಈ ಅಂಗಡಿ ಮುಂದೆ ಕಿಕ್ಕಿರಿದು ಸೇರಿದ್ದರು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದ ಕಾರಣಕ್ಕೆ ಅಂಗಡಿಯ ಸಿಬ್ಬಂದಿ ಗ್ರಾಹಕರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟರು. ಘೋಷಿಸಿದಂತೆ ರೂ. 500 ಗಳಿಗಿಂತ ಹೆಚ್ಚಿನ ಬೆಲೆಯ ಮೀನು ಖರೀದಿಸಿದ ಗ್ರಾಹಕರಿಗೆ 1 ಲೀಟರ್ ಪೆಟ್ರೋಲ್ ಖರೀದಿಸಲು ಟೋಕನ್ ನೀಡಲಾಗಿದೆ.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಈ ಟೋಕನ್ ಹೊಂದಿರುವ ಗ್ರಾಹಕರು ಪೆಟ್ರೋಲ್ ಬಂಕ್'ನಲ್ಲಿ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯಬಹುದು. ಮೀನು ಅಂಗಡಿಯ ಈ ಘೋಷಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಹಕರು ಉಚಿತ ಪೆಟ್ರೋಲ್ ಕೂಪನ್‌ಗಳನ್ನು ಪಡೆಯುವ ಸಲುವಾಗಿಯೇ ರೂ. 500 ಗಳಿಗಿಂತ ಹೆಚ್ಚಿನ ಬೆಲೆಯ ಮೀನು ಖರೀದಿಸಿದರು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಈ ಬಗ್ಗೆ ಮಾಲೈಮಲರ್ ಪತ್ರಿಕೆ ವರದಿ ಮಾಡಿದೆ. ಭಾರತದಲ್ಲಿ ಈ ರೀತಿ ಕೊಡುಗೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಕೇಕ್ ಖರೀದಿಸುವವರಿಗೆ ಪೆಟ್ರೋಲ್ ಉಚಿತ ಎಂದು ಘೋಷಿಸಲಾಗಿತ್ತು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಬಿರಿಯಾನಿ ಖರೀದಿಸುವವರಿಗೂ ಪೆಟ್ರೋಲ್ ಉಚಿತ ಎಂದು ಘೋಷಿಸಲಾಗಿತ್ತು. ಇಷ್ಟು ಮಾತ್ರವಲ್ಲದೇ ಮಧುರೈ ಜಿಲ್ಲೆಯ ತಿರುಮಂಗಲಂನಲ್ಲಿ ಒಂದು ಕೆ.ಜಿ ಮಾಂಸ ಖರೀದಿಸಿದರೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲಾಗುವುದು ಎಂದು ಮಾಂಸದಂಗಡಿಯೊಂದು ಇತ್ತೀಚೆಗೆ ಘೋಷಿಸಿತ್ತು.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಈ ಕೊಡುಗೆ ಒಂದು ತಿಂಗಳವರೆಗೆ ಲಭ್ಯವಿರುತ್ತದೆ ಎಂದು ಮಾಂಸದ ಅಂಗಡಿ ತಿಳಿಸಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರ ನಡುವೆ ಈ ರೀತಿಯ ಘೋಷಣೆಗಳು ಹೆಚ್ಚಿನ ಸಂಖ್ಯೆಯ ವಾಹನ ಸವಾರರನ್ನು ಆಕರ್ಷಿಸುತ್ತಿವೆ.

ಮೀನು ಖರೀದಿಸಿದವರಿಗೆ ದೊರೆಯಿತು ಒಂದು ಲೀಟರ್ ಉಚಿತ ಪೆಟ್ರೋಲ್

ಇದರಿಂದ ಸಂಬಂಧಿತ ಮಳಿಗೆಗಳಲ್ಲಿ ಮಾರಾಟ ಹೆಚ್ಚಳವಾಗಿದೆ. ಈ ಕೊಡುಗೆಗಳ ಮೂಲಕ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯುವ ವಾಹನ ಸವಾರರು ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ. ಇದರಿಂದ ಹಲವು ವಾಹನ ಸವಾರರು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬದಲು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇಂದರಿಂದಾಗಿ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Madurai fish stall offers one liter free petrol for its customers. Read in Kannada.
Story first published: Tuesday, August 3, 2021, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X