ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಇಂದಿನ ಆಟೋಮೊಬೈಲ್ ಜಗತ್ತಿನಲ್ಲಿ ವಾಹನಗಳನ್ನು ಬಳಸದೇ ಒಂದೇ ಕಡೆ ನಿಲ್ಲಿಸಲು ಸಾಧ್ಯವೇ ಇಲ್ಲ. ಕಚೇರಿಯೇ ಆಗಲಿ ಅಥವಾ ತರಕಾರಿ ಖರೀದಿಗೆ ಆಗಲಿ ಹತ್ತಿರದ ಜಾಗಗಳಿಗೆ ಆಗಲಿ ವಾಹನಗಳಲ್ಲಿಯೇ ತೆರಳುತ್ತೇವೆ.

ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಆದರೆ ಇದಕ್ಕೆಲ್ಲಾ ಬ್ರೇಕ್ ಹಾಕಿದ್ದು, ಕರೋನಾ ವೈರಸ್ ಎಂಬ ಮಹಾಮಾರಿ. ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 24ರಿಂದ ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಯಿತು. ಲಾಕ್ ಡೌನ್ ಕಾರಣದಿಂದಾಗಿ ಮಾರ್ಚ್ ತಿಂಗಳ ಅಂತ್ಯದಿಂದ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಯಿತು. ಕಳೆದ ಮೇ ತಿಂಗಳ ಆರಂಭದವರೆಗೂ ಲಾಕ್ ಡೌನ್ ಜಾರಿಯಲ್ಲಿತ್ತು. ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದರು.

ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಮೇ ತಿಂಗಳ ಮೊದಲ ವಾರದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ನಲ್ಲಿ ಹಲವು ವಿನಾಯಿತಿಗಳನ್ನು ನೀಡಿದವು. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಪುನರಾರಂಭಗೊಂಡಿತು. ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡಲಾಗಿದ್ದರೂ ಪರಿಸ್ಥಿತಿ ಮೊದಲಿನಂತಿಲ್ಲ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಮಧುರೈನ ವಕೀಲರೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಕಳೆದ ಮೂರು ತಿಂಗಳಿನಿಂದ ಬಳಸುತ್ತಿಲ್ಲ. ಇದಕ್ಕೆ ಕರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣವಲ್ಲ. ಅವರ ಸ್ಕೂಟರಿನಲ್ಲಿ ಗುಬ್ಬಚ್ಚಿ ಗೂಡು ಕಟ್ಟಿರುವುದೇ ಇದಕ್ಕೆ ಕಾರಣ.

ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಅರುಣ್ ಸ್ವಾಮಿನಾಥನ್ ಮಧುರೈನ ಉಲಗನೇರಿ ಪ್ರದೇಶಕ್ಕೆ ಸೇರಿದವರು. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ವಕೀಲರಾಗಿರುವ ಅವರು ಟಿವಿಎಸ್ ಸ್ಕೂಟಿ ಸ್ಕೂಟರ್ ಹೊಂದಿದ್ದಾರೆ. ಗುಬ್ಬಚ್ಚಿ ಆ ಸ್ಕೂಟರ್‌ನಲ್ಲಿ ಮೂರು ತಿಂಗಳ ಹಿಂದೆ ಗೂಡು ಕಟ್ಟಿದೆ. ಅರುಣ್ ಸ್ವಾಮಿನಾಥನ್ ರವರು ಆ ಗೂಡನ್ನು ತೆಗೆದುಹಾಕಲು ಮನಸ್ಸು ಮಾಡಿಲ್ಲ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಈ ಕಾರಣಕ್ಕೆ ಅವರ ಸ್ಕೂಟರ್ ಕಳೆದ ಮೂರು ತಿಂಗಳಿನಿಂದ ನಿಂತಲ್ಲೇ ನಿಂತಿದೆ. ಅವರು ಆ ಸ್ಕೂಟರ್ ಅನ್ನು ಪಕ್ಕಕ್ಕೂ ಸಹ ಸರಿಸಿಲ್ಲ. ಈಗ ಗುಬ್ಬಚ್ಚಿ ಈ ಗೂಡಿನಲ್ಲೇ ಮೊಟ್ಟೆ ಇಟ್ಟಿದೆ. ಅರುಣ್ ಸ್ವಾಮಿನಾಥನ್ ರವರು ತಮ್ಮ ಸ್ಕೂಟರ್ ಅನ್ನು ಅಲ್ಲಿಂದ ತೆಗೆಯುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅರುಣ್ ಸ್ವಾಮಿನಾಥನ್ ರವರ ಈ ಮಾನವೀಯತೆಗೆ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಗುಬ್ಬಚ್ಚಿ ಗೂಡಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಸ್ಕೂಟರ್ ಬಳಸದ ವಕೀಲರ ಬಗ್ಗೆ ಟೆಲಿಗ್ರಾಫ್ ಟಿವಿ ವರದಿ ಮಾಡಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಗುಬ್ಬಚ್ಚಿ ಗೂಡಿನ ಕಾರಣಕ್ಕೆ ಸ್ಕೂಟರ್ ಮುಟ್ಟದ ವಕೀಲ

ಗುಬ್ಬಚ್ಚಿಗಳು ಮೊಬೈಲ್ ಟವರ್ ಗಳಿಂದ ಉಂಟಾಗುವ ರೆಡಿಯೇಷನ್ ಹಾಗೂ ಇನ್ನಿತರ ಕಾರಣಗಳಿಗಾಗಿ ಕಣ್ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗುಬ್ಬಚ್ಚಿಗಳನ್ನು ರಕ್ಷಿಸುವ ಸಲುವಾಗಿ 3 ತಿಂಗಳಿಗಿಂತ ಹೆಚ್ಚು ಕಾಲದಿಂದ ಸ್ಕೂಟರ್ ಬಳಸದ ವಕೀಲ ಅರುಣ್ ಸ್ವಾಮಿನಾಥನ್ ರವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಮೂಲ: ತಂತಿ ಟಿವಿ

Most Read Articles

Kannada
English summary
Madurai lawyer not using his scooty from three months due to sparrow nest. Read in Kannada.
Story first published: Friday, July 17, 2020, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X