ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಇತ್ತೀಚಿನ ದಿನಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಪೊಲೀಸರು ನಾಲ್ಕು ಗಂಟೆಗಳ ಕಾಲ ಚೇಸಿಂಗ್ ಮಾಡಿ ಇಬ್ಬರು ಕಳ್ಳರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಯಾವ ಕಾರಣಕ್ಕೆ ಆ ಇಬ್ಬರನ್ನು ಬೆನ್ನಟ್ಟಿ ಸೆರೆ ಹಿಡಿಯಲಾಯಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈ ಬಗ್ಗೆ ಆಟೋ ಹಿಂದೂಸ್ತಾನ್ ಟೈಮ್ಸ್ ಸುದ್ದಿ ಪ್ರಕಟಿಸಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ. ಈ ಭಾಗದಲ್ಲಿಯೂ ಇತ್ತೀಚಿಗೆ ದರೋಡೆ ಪ್ರಕರಣಗಳು ಹೆಚ್ಚಾಗಿವೆ.

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಈ ಕಾರಣಕ್ಕೆ ಪೊಲೀಸರು ತಪಾಸಣೆ ನಡೆಸಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಇಬ್ಬರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದಾರೆ. ತಕ್ಷಣವೇ ಪೊಲೀಸರು ಇಬ್ಬರನ್ನೂ ತಪಾಸಣೆ ನಡೆಸಲು ಮುಂದಾಗಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಸಿಕ್ಕಿ ಬೀಳುವ ಭಯದಿಂದ ಈ ಇಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸರು ಸಹ ಅವರನ್ನು ಬೆನ್ನತ್ತಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ಚೇಸಿಂಗ್ ಮಾಡಿದ ನಂತರ ಇಬ್ಬರನ್ನೂ ಬಂಧಿಸಲಾಗಿದೆ.

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ವಿಚಾರಣೆ ವೇಳೆ ಅವರಿಬ್ಬರೂ ನಿಲ್ಲಿಸಿರುವ ಕಾರುಗಳಿಂದ ಡೀಸೆಲ್ ಕದಿಯುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಸಿಕ್ಕಿ ಬಿದ್ದ ದಿನವೇ ಅವರಿಬ್ಬರೂ ಒಟ್ಟು 140 ಲೀಟರ್ ಡೀಸೆಲ್ ಕದ್ದಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇಬ್ಬರು ಖದೀಮರಿಂದ ಡೀಸೆಲ್ ಕದಿಯಲು ಬಳಸುತ್ತಿದ್ದ ನಕಲಿ ಕೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಇವರಿಬ್ಬರೂ ಸೇರಿ ಹಲವಾರು ದಿನಗಳಿಂದ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಪೆಟ್ರೋಲ್, ಡೀಸೆಲ್ ಕದಿಯುತ್ತಿದ್ದರು. ಗ್ರಹಚಾರ ಕೈಕೊಟ್ಟ ಕಾರಣ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಹೈರಣಾಗಿದ್ದಾರೆ. ಬೆಲೆ ಏರಿಕೆಯು ಸಹಜ ಸ್ಥಿತಿಗೆ ಬರಲು ಇನ್ನೂ ಹಲವಾರು ದಿನಗಳು ಬೇಕಾಗಬಹುದು.

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಈ ಸಂದರ್ಭದಲ್ಲಿಯೇ ಡೀಸೆಲ್ ಕದಿಯುತ್ತಿದ್ದ ಖದೀಮರು ಜನ ಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡಿದ್ದರು. ಇವರಿಬ್ಬರ ಬಂಧನದ ನಂತರ ಜನರು ಕೊಂಚ ನಿರಾಳಾರಾಗುವಂತಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಾಲ್ಕು ಗಂಟೆಗಳ ಚೇಸಿಂಗ್ ನಂತರ ಸೆರೆ ಸಿಕ್ಕ ಡೀಸೆಲ್ ಕಳ್ಳರು

ಈ ಹಿಂದೆ ವಾಹನಗಳನ್ನು ಕದಿಯುತ್ತಿದ್ದ ಖದೀಮರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಂತರ ಇಂಧನ ಕಳುವು ಮಾಡಲು ಮುಂದಾಗಿದ್ದಾರೆ. ಇದನ್ನು ತಪ್ಪಿಸುವುದು ಸ್ವಲ್ಪ ಕಷ್ಟವಾದರೂ ವಾಹನ ಮಾಲೀಕರು ಸಿಸಿಟಿವಿ ಕ್ಯಾಮೆರಾ ಇರುವ ಪ್ರದೇಶದಲ್ಲಿ ಅಥವಾ ಹೆಚ್ಚು ಸುರಕ್ಷಿತವಾದ ಪ್ರದೇಶಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದು ಒಳ್ಳೆಯದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Maharashtra cops arrests duos stealing diesel from parked vehicles. Read in Kannada.
Story first published: Friday, January 8, 2021, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X