ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಭಾರತದ ಮದುವೆಗಳಲ್ಲಿ ಹಲವು ರೀತಿಯ ಸಂಪ್ರಾದಯಗಳನ್ನು ಪಾಲಿಸಲಾಗುತ್ತದೆ. ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ನವ ದಂಪತಿಗಳನ್ನು ಹೆಲಿಕಾಪ್ಟರ್‍‍ನಲ್ಲಿ ಕಳುಹಿಸುವುದು ಸೇರಿದಂತೆ ಹಲವು ರೀತಿಯ ಘಟನೆಗಳನ್ನು ಕಾಣಬಹುದು.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಆದರೆ ಕೊಲ್ಲಾಪುರದ ವೈದ್ಯರೊಬ್ಬರು ತನ್ನ ಮಗಳ ಮದುವೆಗಾಗಿ ತಮ್ಮ ಟೊಯೊಟಾ ಇನೊವಾ ಕಾರ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿದ್ದಾರೆ. ವೆಡ್ಡಿಂಗ್ ಕಾರ್ ಅನ್ನು ಸಗಣಿಯಿಂದ ಅಲಂಕಾರಗೊಳಿಸಿದ್ದಾರೆ. ನವನಾಥ್ ದೂಧಾಲ್ ಎಂಬುವವರೇ ಕಾರ್ ಅನ್ನು ಈ ರೀತಿಯಾಗಿ ಅಲಂಕಾರ ಮಾಡಿದ ವೈದ್ಯರು.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಮದುವೆಗೆ ಬಂದಿದ್ದವರು ಕಾರಿಗೆ ಸಗಣಿ ಮೆತ್ತಿರುವುದನ್ನು ನೋಡಿ ಮುಖ ಸಿಂಡರಿಸಿಕೊಂಡಿದ್ದರು. ನಂತರ ಸಗಣಿಯನ್ನು ತೆಗೆದು ಹಾಕಿದ ನಂತರ ನಿಜ ಸಂಗತಿಯನ್ನು ತಿಳಿದುಕೊಂಡಿದ್ದಾರೆ. ವೈದ್ಯರು ಸಗಣಿಯ ಬಳಕೆಯನ್ನು ಉತ್ತೇಜಿಸುವ ಕಾರಣಕ್ಕೆ ತಮ್ಮ ಟೊಯೊಟಾ ಕಾರ್ ಅನ್ನು ಸಗಣಿಯಿಂದ ಅಲಂಕರಿಸಿದ್ದರು.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಸಗಣಿಯು ಕ್ಯಾನ್ಸರ್ ಅನ್ನು ಗುಣಪಡಿಸುವುದರ ಜೊತೆಗೆ, ಮಾನವನ ದೇಹದಲ್ಲಿರುವ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂಬ ಕಾರಣಕ್ಕೆ ದೂಧಾಲ್‍‍ರವರು ತಮ್ಮ ಕಾರಿಗೆ ಸಗಣಿಯನ್ನು ಮೆತ್ತಿದ್ದರು ಎಂದು ತಿಳಿದು ಬಂದಿದೆ.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ದೂಧಾಲ್‍‍ರವರ ಪ್ರಕಾರ ಪ್ರಪಂಚದ ವಾತಾವರಣದಲ್ಲಿನ ಉಷ್ಣತೆಯು ವಿಪರೀತವಾಗಿ ಏರಿಕೆಯಾಗುತ್ತಿದೆ. ಈ ಕಾರಣಕ್ಕೆ ದೇಶಿಯ ಹಸುಗಳು ಪರಿಸರಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಲಿವೆ. ಕಾರಿನ ಹೊರಭಾಗಕ್ಕೆ ಸಗಣಿಯನ್ನು ಮೆತ್ತುವುದರಿಂದ ಕ್ಯಾಬಿನ್‍‍ನಲ್ಲಿನ ವಾತಾವರಣವು ತಣ್ಣಗಾಗಲಿದೆ.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಹಸುವಿನ ಸಗಣಿಯು ಕಾರಿನಲ್ಲಿರುವವರನ್ನು ರೇಡಿಯೇಷನ್‍‍ನಿಂದ ಕಾಪಾಡುತ್ತದೆ. ಈ ರೀತಿಯಾಗಿ ಸಗಣಿಯನ್ನು ಮೆತ್ತುವುದರಿಂದ ಕೇವಲ ಮೂರು ಬಕೆಟ್ ನೀರಿನಲ್ಲಿ ಕಾರ್ ಅನ್ನು ತೊಳೆಯಬಹುದು. ಇದರಿಂದಾಗಿ ನೀರನ್ನು ಉಳಿತಾಯ ಮಾಡಬಹುದಾಗಿದೆ ಎಂದು ದೂಧಾಲ್‍‍ರವರು ಹೇಳಿದ್ದಾರೆ.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಸಗಣಿಯಿಂದ ಅಲಂಕರಿಸಲಾಗಿರುವ ಈ ಟೊಯೊಟಾ ಇನೊವಾ ಕಾರಿನ ಮೇಲೆ ಹೂಮಾಲೆಯನ್ನು ಸಹ ಹಾಕಲಾಗಿದೆ. ನವದಂಪತಿ ಈ ಕಾರಿನ ಜೊತೆಗಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಕಾರಿಗೆ ಹಸುವಿನ ಸಗಣಿಯನ್ನು ಮೆತ್ತುತ್ತಿರುವುದು ಇದು ಮೊದಲ ಸಲವೇನಲ್ಲ.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಕಳೆದ ವರ್ಷದ ಬೇಸಿಗೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಸೆಖೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಲವಾರು ಕಾರುಗಳಿಗೆ ಸಗಣಿಯನ್ನು ಮೆತ್ತಲಾಗಿತ್ತು. ಇದರಿಂದಾಗಿ ಕಾರಿನ ಕ್ಯಾಬಿನ್‍‍ನ ವಾತಾವರಣವು ತಣ್ಣಗಿರಲಿದೆ ಎಂದು ಭಾವಿಸುತ್ತಾರೆ.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಇದಕ್ಕೆ ಇದುವರೆಗೂ ಯಾರೂ ವೈಜ್ಞಾನಿಕ ಕಾರಣಗಳನ್ನು ತಿಳಿಸಿಲ್ಲ. ಮಣ್ಣಿನ ಮನೆಗಳ ಮೇಲೆ ಸಗಣಿಯನ್ನು ಮೆತ್ತುವುದರಿಂದ ಮನೆಯ ಒಳಭಾಗವು ತಣ್ಣಗಿರುತ್ತದೆ ಎಂಬುದು ನಿಜವಾದರೂ, ಮೆಟಲ್‍‍ನಿಂದ ತಯಾರಾಗಿರುವ ಕಾರಿಗೆ ಇದು ಎಷ್ಟರ ಮಟ್ಟಿಗೆ ಅನ್ವಯಿಸುತ್ತದೆ ಎಂಬುದು ತಿಳಿದು ಬಂದಿಲ್ಲ.

ದೂಧಾಲ್‍‍ರವರು ಹೇಳಿರುವಂತೆ ಸಗಣಿಯು ರೇಡಿಯೇಷನ್‍‍ನಿಂದ ಕಾಪಾಡುವುದರ ಬಗ್ಗೆ ಇನ್ನಷ್ಟೇ ಸಾಬೀತಾಗಬೇಕಿದೆ. ಇದುವರೆಗೂ ಹಸುವಿನ ಸಗಣಿಯಿಂದಾಗಲೀ ಅಥವಾ ಮೂತ್ರದಿಂದಾಗಲೀ ಯಾವುದೇ ಖಾಯಿಲೆ ಗುಣವಾಗಿರುವ ಬಗ್ಗೆ ವರದಿಯಾಗಿಲ್ಲ.

ಮದುವೆಗಾಗಿ ಸಗಣಿಯಿಂದ ಶೃಂಗಾರಗೊಂಡ ಕಾರು, ಕಾರಣವೇನು ಗೊತ್ತಾ?

ಸಗಣಿಯನ್ನು ಕಾರುಗಳಿಗೆ ಮೆತ್ತುವುದು ಭಾರತದಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದೆ. ಕೆಲವು ತಿಂಗಳುಗಳ ಹಿಂದೆ ಟೊಯೊಟಾ ಕರೊಲಾ ಆಲ್ಟಿಸ್ ಕಾರಿನ ಮಾಲೀಕರು ತಮ್ಮ ಕಾರಿಗೆ ಸಗಣಿಯನ್ನು ಮೆತ್ತಿದ್ದರು. ಇದಾದ ನಂತರ ಮಹೀಂದ್ರಾ ಎಕ್ಸ್‌ಯುವಿ500 ಸಹ ಸಗಣಿಯೊಂದಿಗೆ ಕಾಣಿಸಿಕೊಂಡಿತ್ತು.

Most Read Articles

Kannada
English summary
Doctor coated his daughters toyota innova wedding car with cow dung - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X