ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..
ಹೈಪರ್‌ಲೂಪ್ ತಂತ್ರಜ್ಞಾನವು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮುಂಬೈ ಟು ಪುಣೆ ನಡುವೆ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆ ಜಾರಿಯಾಗಲಿದೆ.
ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್‌ಲೂಪ್ ತಂತ್ರಜ್ಞಾನವು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮುಂಬೈ ಟು ಪುಣೆ ನಡುವೆ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆ ಜಾರಿಯಾಗಲಿದೆ.

ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸಬಲ್ಲ ರೈಲು ವ್ಯವಸ್ಥೆ ಎಂಬ ಹಿರಿಮೆಗೆ ಪಾತ್ರವಾಗುವ ಉದ್ದೇಶ ಹೊಂದಿರುವ ಹೈಪರ್‌ಲೂಪ್ ರೈಲು, ವಿಶ್ವದಲ್ಲೇ ಮೊದಲ ಸಂಚಾರವನ್ನು ಮುಂಬೈ ಮತ್ತು ಪುಣೆ ನಡುವೆ ನಡೆಸುವ ಸಾಧ್ಯತೆ ಇದೆ.
Recommended Video


ಇಂಥದ್ದೊಂದು ರೈಲು ಸಂಚಾರ ವ್ಯವಸ್ಥೆ ಆರಂಭಿಸುವ ಕುರಿತು ಸಾಧ್ಯಾಸಾಧ್ಯತೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ಹೈಪರ್'ಲೂಪ್'ನ ಮಾತೃಸಂಸ್ಥೆ ವರ್ಜಿನ್ ಗ್ರೂಪ್, ಭಾನುವಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಇದರ ಮೊದಲ ಹಂತವಾಗಿ ಆಯ್ದ ಮಾರ್ಗದಲ್ಲಿ ಮಾದರಿ ಟ್ರ್ಯಾಕ್ ನಿರ್ಮಿಸಲಾಗುವುದು. ಈ ರೈಲು ವ್ಯವಸ್ಥೆ ಸಾಧ್ಯವಾದ್ರೆ ಹಾಲಿ ಮುಂಬೈ ಮತ್ತು ಪುಣೆ ನಡುವೆ ಸಂಚಾರಕ್ಕೆ ಇರುವ ಅವಧಿ 3 ಗಂಟೆಯಿಂದ 20 ನಿಮಿಷಕ್ಕೆ ಇಳಿಯಲಿದೆ. ಈ ಯೋಜನೆಗೆ ಸದ್ಯ 3.5 ಲಕ್ಷ ಕೋಟಿ ರು.ವೆಚ್ಚವಾಗುವ ನಿರೀಕ್ಷೆ ಇದೆ.

ಹೈಪರ್ ಲೂಪ್ ಹೈ ಸ್ಪೀಡ್ ರೈಲು ಯೋಜನೆ ವಿಚಾರವಾಗಿ ಕೇಂದ್ರದ ಜೊತೆ ಮಾತುಕತೆ ನಡೆಸಿರುವ ವರ್ಜಿನ್ ಗ್ರೂಪ್ ಸಂಸ್ಥಾಪಕ ಬಿಬಾಬ್ ಗ್ಯಾಬ್ರಿಯಲ್, ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ತರ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇನ್ನು 2013ರಲ್ಲಿ ಟೆಸ್ಲಾ ಸ್ಥಾಪಕರಾಗಿರುವ ಎಲಾನ್ ಮಸ್ಕ್ ಮೊದಲ ಬಾರಿಗೆ ಹೈಪರ್ ಲೂಪ್ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದರು. ಆದ್ರೆ ಇದೀಗ ಹೈಪರ್ ಲೂಪ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಗತ್ತಿನ ಪ್ರಮುಖ ದೇಶಗಳು ಯೋಜನೆ ರೂಪಿಸುತ್ತಿವೆ.

ಇನ್ನೊಂದು ಪ್ರಮುಖ ವಿಚಾರವೇನೆಂದರೆ ಹೈಪರ್ ಲೂಪ್ ಸ್ಪೀಡ್ ರೈಲು, ವಿಮಾನಗಿಂತಲೂ ಅತಿ ವೇಗವಾಗಿ ಸಂಚರಿಸುತ್ತದೆ. ಹೀಗಾಗಿ ಯೋಜನೆ ಜಾರಿಗೆ ಬಂದಲ್ಲಿ ಪುಣೆ ಟು ಮುಂಬೈ ಹಾಗೂ ಬೆಂಗಳೂರು ಟು ಚೆನ್ನೈ ಪ್ರಯಾಣ ಕೆಲವೇ ನಿಮಿಷದಲ್ಲಿ ಸಾಧ್ಯವಾಗಲಿದೆ.

ವಿಮಾನ, ರೈಲು, ಹಡಗು ಮತ್ತು ಬಸ್ ಸಾರಿಗೆ ನಂತರ ಹೈಪರ್ ಲೂಪ್ ಅನ್ನು ಭವಿಷ್ಯದ 5ನೇ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿಸಲಾಗಿದೆ. ಹೀಗಾಗಿ ಬೃಹತ್ ನಗರಗಳಲ್ಲಿ ಹೈಪರ್ ಲೂಪ್ ತಂತ್ರಜ್ಞಾನ ಜಾರಿಯಾದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಲಿದೆ.

ಇನ್ನೊಂದು ಪ್ರಮುಖ ವಿಚಾರವನ್ನು ನಾವು ತಿಳಿದುಕೊಳ್ಳಲೇಬೇಕು. ಯಾಕೇಂದ್ರೆ ಇದೊಂದು ಅತ್ಯಂತ ಕಡಿಮೆ ವೆಚ್ಚದಾಯಕ ಯೋಜನೆಯಾಗಿದ್ದು, ಹೈ ಸ್ಪೀಡ್ ರೈಲು ಯೋಜನೆಗಿಂತ 10 ಪಟ್ಟು ಖರ್ಚು ಕಡಿಮೆ ಎಂದರೆ ನೀವು ನಂಬಲೇಬೇಕು.

ಕಡಿಮೆ ಭಾರದ ಸ್ಟೀಲ್ ಟ್ಯೂಬ್‌ನಲ್ಲಿ ಲಗತ್ತಿಸಲಾಗಿರುವ ಪೊಡ್ ಎನ್ನುವ ಕ್ಯಾಪ್ಸುಲ್ ಮುಖಾಂತರ ಈ ಹೈ ಸ್ಪೀಡ್ ರೈಲು ಸಂಚರಿಸಲಿದ್ದು, ನಿಮಗೆ ಪ್ರಯಾಣದ ಆಯಾಸವೇ ಆಗುವುದಿಲ್ಲ.

ಇನ್ನು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸ ಬಲ್ಲ ಆತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಹೈಪರ್ ಲೂಪ್, ಕ್ಯಾಪ್ಸುಲ್‌ಗಳ ಮೂಲಕ ಪರಸ್ಪರ ಸಂಘರ್ಷಣೆಯಾಗದಂತೆ ನೋಡಿಕೊಳ್ಳಲಿದೆ.

ಪ್ರತಿ ಪೊಡ್ ನಡುವೆ 8 ಕಿಲೋ ಮೀಟರ್ ಅಂತರವಿರಲಿದ್ದು, ಒಂದು ಪೊಡ್‌ನಿಂದ ಇನ್ನೊಂದು ಪೊಡ್‌ಗೆ ಕೇವಲ 30 ಸೆಕೆಂಡುಗಳಷ್ಟೇ ವ್ಯತ್ಯಾಸವಿರಲಿದೆ. ಜೊತೆಗೆ ಸೋಲಾರ್‌ನಿಂದಲೇ ನಿಯಂತ್ರಿಸಲ್ಪಡುವ ಹೈಪರ್‌ಲೂಪ್ ರೈಲು, ಗಂಟೆಗೆ 1100 ಕೀ.ಮೀ ವೇಗದಲ್ಲಿ ಚಲಿಸಲಿದೆ.

ಮಹತ್ತರ ಯೋಜನೆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿರುವ ರೈಲ್ವೆ ಸಚಿವ ಸುರೇಶ್ ಪ್ರಭು, ಯೋಜನೆಯ ಜಾರಿ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿಯೇ ಯೋಜನೆ ಜಾರಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಬೃಹತ್ ಯೋಜನೆಯ ಹೈಪರ್ ಲೂಪ್ ಹಳಿ ನಿರ್ಮಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ 50 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಅಂದಾಜಿಸಲಾಗಿದೆ. ಪ್ರತಿಯೊಂದು ಪೊಡ್‌ನಲ್ಲಿ 28ರಿಂದ 40 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ದಿನ ಒಂದಕ್ಕೆ 67 ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುವ ಯೋಜನೆಯಿದೆ.

ಒಂದು ವೇಳೆ ವೇಳೆ ಹೈಪರ್ ಲೂಪ್ ಯೋಜನೆ ಭಾರತದಲ್ಲಿ ನನಸಾದ್ದಲ್ಲಿ ಮುಂಬೈ ಟು ಪುಣೆ ಮತ್ತು ಬೆಂಗಳೂರು ಟು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 30 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಜೊತೆಗೆ ಭಾರತದಲ್ಲಿ ಜನಪ್ರಿಯತೆ ಕೂಡಾ ಪಡೆಯಲಿದೆ.


Click it and Unblock the Notifications








