ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

By Rahul Ts

ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ಜಗತ್ತಿನ ಎಲ್ಲ ರಾಷ್ಟ್ರಗಳು ಸಹ ನಾ ಮುಂದು ತಾ ಮುಂದು ಎನ್ನತ್ತಿದ್ದು, ಇದರಲ್ಲಿ ಭಾರತವು ಸಹ ಹಿಂದೆ ಬಿದ್ದಿಲ್ಲ. ಅಸಾಧ್ಯ ಎನ್ನುವುದನ್ನು ಸಾಧ್ಯವಾಗಿಸುವ ಈ ಭವಿಷ್ಯ ಸಾರಿಗೆ ವ್ಯವಸ್ಥೆಯು ಸದ್ಯದಲ್ಲೇ ಮುಂಬೈ ಟು ಪುಣೆ ನಡುವೆ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್‌ ಲೂಪ್ ಸಾರಿಗೆ ಶೀಘ್ರದಲ್ಲೇ ಪುಣೆಯಲ್ಲಿ 15 ಕಿಲೋಮೀಟರ್‍‍ನ ಬಹಿರಂಗ ಪ್ರದರ್ಶನವನ್ನು ಪ್ರಾರಂಭಿಸಲಿದ್ದು, ಜನತೆಗೆ ಹೊಸ ತಂತ್ರಜ್ಞಾನದೊಂದಿಗೆ ಸುರಕ್ಷಿತ ಮತ್ತು ವೇಗವಾಗಿ ಮಾರ್ಗವನ್ನು ಮುಟ್ಟಬಲ್ಲ ಸಾರಿಗೆಯ ಅನುಭವವನ್ನು ನೀಡಲು ಹೈಪರ್ ಲೂಪ್ ದೇಶದಲ್ಲಿ ಕಾಲಿಡುತ್ತಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಹೈ‍ಪರ್‍ ಲೂಪ್ ಸಾರಿಗೆ ಮೂಲಕ ಮುಂಬೈ ಟು ಪುಣೆ ನಡುವೆ 25 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದ್ದು, ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಅವರು ಅಮೆರಿಕದ ನೆವಾಡಾದಲ್ಲಿನ ಹೈಪರ್‍‍‍‍‍ಲೂಪ್ ಒನ್ ಟೆಸ್ಟ್ ಸೈಟ್ ಅನ್ನು ಭೇಟಿ ನೀಡಿ ಯೋಜನೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಶೀಘ್ರದಲ್ಲೇ ವರ್ಜಿನ್ ಹೈಪರ್ ಲೂಪ್ ಒನ್ ಇಂಜಿನಿಯರ್‍‍ಗಳನ್ನು ಪುಣೆಗೆ ಕಳುಹಿಸುವ ಯೋಜನೆಯಲಿದ್ದು, ಪುಣೆ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಹೈಪರ್‍‍‍‍‍ಲೂಪ್ ಅನ್ನು ಪರೀಕ್ಷಿಸಲು 15 ಕಿಲೋಮೀಟರ್‍‍ನ ಸುರಂಗವನ್ನು ಕೊರೆಯಲಿದೆ. ಹಾಗೆಯೇ ಇದಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಮಹಾರಾಷ್ಟ್ರ ಸರ್ಕಾರವೇ ಒದಗಿಸಲಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಕಳೆದ ವರ್ಷವೇ ಆಂಧ್ರ ಪ್ರದೇಶದ ಆರ್ಥಿಕ ಅಭಿವೃದ್ಧಿ ಮಂಡಳಿ ಮತ್ತು ಹೈಪರ್‍‍‍‍‍ಲೂಪ್ ಸಾರಿಗೆ ಇಲಾಖೆಯು ತಿಳುವಳಿಕೆಯ ಸ್ಮರಣಿಕೆಗೆ (Memorandom of Understanding) ಸಹಿ ಹಾಕಿದ್ದು, ಆಂಧ್ರ ಪ್ರದೇಶ ಆರ್ಥಿಕ ಅಭಿವೃದ್ಧಿ ಮಂಡಳಿ ಮತ್ತು ಆಂಧ್ರ ಪ್ರದೇಶ ಸರ್ಕಾರವು ಹೈಪರ್ ಲೂಪ್ ಟ್ರಾನ್ಸ್ಪೋರ್ಟೇಷನ್ ಟೆಕ್ನಾಲಜೀಸ್ ಏಕೀಕರಣಕ್ಕೆ ಸಹಾಯ ಮಾಡಲಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಆಂಧ್ರ ಪ್ರದೇಶದ ರಾಜಧಾನಿಯಾದ ಅಮರಾವತಿ ಮತ್ತು ವಿಜಯವಾಡದ ನಡುವೆ ಹೈಪರ್‌ಲೂಪ್ ಲೈನ್ ನಿರ್ಮಿಸಲು ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್(ಎಚ್‌ಟಿಟಿ)ಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಎಪಿ ಸರ್ಕಾರವು ಸಹ ಅಧಿಕೃತವಾಗಿ ಘೋಷಣೆ ಮಾಡಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಈ ಯೋಜನೆಯಿಂದಾಗಿ ಬಹಳಷ್ಟು ಜನಕ್ಕೆ ಪ್ರಯಾಣದಲ್ಲಿ ಹೆಚ್ಚು ಅನುಕೂಲವಾಗಲಿದೆ. ಇದಲ್ಲದೆ, ದೇಶದಲ್ಲಿ 5 ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

"ಆಂಧ್ರಪ್ರದೇಶದೊಂದಿಗಿನ ಪಾಲುದಾರಿಕೆಯಲ್ಲಿ ಸುರಕ್ಷಿತ ಮತ್ತು ಸಮರ್ಥ ಕಾರ್ಯಾಚರಣೆಗೆ ಅಗತ್ಯವಿರುವ ನಿಯಂತ್ರಕ ಮಾನದಂಡಗಳನ್ನು ನಿರ್ಮಿಸಲು ಹೈಪರ್‍‍‍ಲೂಪ್ ಟ್ರಾನ್ಸ್ಪೋರ್ಟೇಷನ್ ಟೆಕ್ನಾಲಜೀಸ್ ಸ್ಥಳೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. ಎಂದು ಹೆಚ್‍‍ಟಿಟಿಯ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕರಾದ ಬಿಬೊಪ್ ಗ್ರೆಸ್ಟಾ ಹೇಳಿಕೊಂಡಿದ್ದಾರೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಅಕ್ಟೋಬರ್ 1ರಿಂದ ಪ್ರಾಯೋಗಿಕ ಅಧ್ಯಯನವನ್ನು ಆರಂಭಿಸಲಿರುವ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್ ಸಂಸ್ಥೆಯು ಆರು ತಿಂಗಳ ಕಾಲ ಪ್ರಾಯೋಗಿಕ ಅಧ್ಯಯನ ನಡೆಸಿದ ನಂತರ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂಬ ವಿಚಾರ ತಿಳಿದು ಬಂದಿದೆ.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಅಮರಾವತಿಯಿಂದ ವಿಜಯವಾಡ ನಗರಕ್ಕೆ ಬರಲಿರುವ ಹೈ‍‍ಪರ್‍‍ಲೂಪ್ ಸಾರಿಗೆಯ ಪ್ರಾರಂಭ ಮತ್ತು ಅಂತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಯದ ಅವಧಿಯನ್ನು ಇನ್ನೂ ಚರ್ಚಿಸಲಾಗಿಲ್ಲ ಎನ್ನಲಾಗಿದ್ದು, ಯೋಜನೆಗೆ ಅನುಮತಿ, ಭೂ ಸ್ವಾಧೀನ, ಟೆಂಡರ್‍‍ಗಳು ಮತ್ತು ಸರ್ಕಾರದ ಬದಲಾವಣೆಯ ಮೂಲಕ ತಂತ್ರಗಳನ್ನು ಪೂರ್ಣಗೊಳಿಸುವುದಕ್ಕಾಗಿ ಕೆಲವು ವರ್ಷಗಳ ಸಮಯ ಬೇಕಾಗಬಹುದು.

ಮುಂಬೈ ಟು ಪುಣೆ ನಡುವಿನ ಹೈಪರ್‍‍ಲೂಪ್ ವಿನೂತನ ಯೋಜನೆಗೆ ದಿನಗಣನೆ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

Most Read Articles

Kannada
Read more on hyperloop transport train
English summary
Mumbai to Pune in 25 minutes – Maharashtra CM arrives at Hyperloop demo track site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more