ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

By Praveen Sannamani

ಪೆಟ್ರೋಲ್ ಬಂಕ್‌ಗಳಲ್ಲಿ ಕೆಲವೊಮ್ಮೆ ಕ್ಯೂ ನಿಂತು ಇಂಧನ ತುಂಬಿಸುವುದೇ ಒಂದು ಹರಸಾಹಸ. ಅದರಲ್ಲೂ ಮೆಟ್ರೋ ಸಿಟಿಗಳಂತಲೂ ಪಿಕ್ ಅವರ್‌ನಲ್ಲಿ ಇಂಧನ ತುಂಬಿಸಿಕೊಂಡು ಬರೋದು ದೊಡ್ಡ ಕೆಲಸವೇ ಆಗಿರುತ್ತೆ. ಇದೇ ಕಾರಣಕ್ಕೆ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ವಾಹನ ಸವಾರರಿಗೆ ವಿನೂತನ ಸೌಲಭ್ಯವೊಂದನ್ನು ಪರಿಚಯಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸುವುದು ಇನ್ನಷ್ಟು ಸುಲಭವಾಗಲಿದೆ.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಪರಿಚಯಿಸಲು ಮುಂದಾಗಿರುವ ಹೊಸ ಸೌಲಭ್ಯದಿಂದ ನೀವು ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂ ನಿಲ್ಲುವುದು ತಪ್ಪಲಿದ್ದು, ಪೆಟ್ರೋಲ್ ಬಂಕ್ ಸಿಬ್ಬಂದಿಯ ಬದಲಾಗಿ ನೀವೇ ಬೇಕಾದಷ್ಟು ಇಂಧನವನ್ನು ತುಂಬಿಸಿಕೊಂಡು ಸ್ಮಾರ್ಟ್ ಕಾರ್ಡ್ ಮೂಲಕವೇ ಹಣ ಪಾವತಿ ಮಾಡಬಹುದಾದ ಸೌಲಭ್ಯ ಇದಾಗಿದೆ.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಹೊಸ ಸೌಲಭ್ಯವನ್ನು 'ಫಾಸ್ಟ್‌ಲೈನ್ ಸರ್ವೀಸ್' ಎಂದು ಕರೆಯಲಾಗಿದ್ದು, ಇಲ್ಲಿ ಯಾವುದೇ ಪೆಟ್ರೋಲ್ ಬಂಕ್ ಸಿಬ್ಬಂದಿ ಇರುವುದಿಲ್ಲ. ಬದಲಾಗಿ ನೀವೇ ಬೇಕಾದ ಇಂಧನ ಮಾದರಿಯನ್ನು ತುಂಬಿಸಿಕೊಳ್ಳಬಹುದು.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಆಟೋ ಪೆಮೇಂಟ್ ಮೂಲಕವೇ ನೀವು ತುಂಬಿಸಿದ ಇಂಧನಕ್ಕೆ ಪ್ರತಿಯಾಗಿ ಹಣ ಪಾವತಿಯಾಗುವ ವ್ಯವಸ್ಥೆ ಇದರಲಿದ್ದು, ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಹೊಸ ಸೌಲಭ್ಯ ಅಳವಡಿಸಿಕೊಳ್ಳುವುದು ಹೇಗೆ?

ಫಾಸ್ಟ್‌ಲೈನ್ ಸೌಲಭ್ಯವನ್ನು ಅಳವಡಿಸಿಕೊಳ್ಳುವ ಮೊದಲು ನಿಮ್ಮ ಅಂಡ್ರಾಯ್ಡ್ ಮತ್ತು ಆ್ಯಪಲ್ ಫೋನ್‌ನಿಂದ ಫಾಸ್ಟ್‌ಲೈನ್ ಆ್ಯಪ್ ಅಳವಡಿಸಿಕೊಳ್ಳಬೇಕಾಗುತ್ತದೆ. ತದನಂತರ ಅಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ದಾಖಲಿಸಿದ್ರೆ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲು ನೀವು ಅರ್ಹರು.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ತದನಂತರ, ಯಾವುದೇ ಫಾಸ್ಟ್‌ಲೈನ್ ಪೆಟ್ರೋಲ್ ಬಂಕ್ ಹೋಗಿ ಇಂಧನ ತುಂಬಿಸಿದಾಗ ಅಲ್ಲಿ ಫಾಸ್ಟ್‌ಲೈನ್ ಆ್ಯಪ್‌ ಆನ್ ಬಂಕ್ ಕೋಡ್‌ವರ್ಲ್ಡ್ ಸ್ಕ್ಯಾನ್ ಮಾಡಬೇಕಾಗುತ್ತೆ. ನಂತರ ಅದು ನೀವು ತುಂಬಿಸಿದ ಇಂಧನ ಪ್ರಮಾಣ ಮತ್ತು ಬೆಲೆ ವಿವರವನ್ನು ನೋಂದಣಿ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸುತ್ತೆ.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಫಾಸ್ಟ್‌ಲೈನ್‌ನಿಂದ ಏನು ಲಾಭ?

ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸುವಲ್ಲಿ ಮೋಸ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿದ್ದು, ಇಲ್ಲಿ ನೀವೇ ಖುದ್ದಾಗಿ ಇಂಧನ ತುಂಬಿಸಿಕೊಳ್ಳುವುದರಿಂದ ಇಂತಹ ಮೋಸದ ವ್ಯವಹಾರಗಳಿಗೆ ಕಡಿವಾಣ ಹಾಕಬಹುದು.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಅದಕ್ಕಿಂತ ಹೆಚ್ಚಾಗಿ ಆಫೀಸ್‌ಗಳಿಗೆ ಹೋಗುವ ಸಮಯದಲ್ಲೇ ಬಹುತೇಕರು ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗಳಿಗೆ ಬರುವುದು ಸಾಮಾನ್ಯ. ಈ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂ ನಿಲ್ಲುವಷ್ಟು ಯಾರಿಗೂ ಸಮಯ ಇರುದಿಲ್ಲ. ಆಗ ಫಾಸ್ಟ್‌ಲೈನ್ ಸರ್ವೀಸ್ ಬಳಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗ ಎನ್ನಬಹುದು.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಇದೇ ಕಾರಣಕ್ಕೆ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಮೆಟ್ರೋ ನಗರಗಳಲ್ಲಿ ಫಾಸ್ಟ್‌ಲೈನ್ ಸರ್ವೀಸ್‌ಗಳನ್ನು ಹೆಚ್ಚಿಸುತ್ತಿದ್ದು, ಇದು ಈಗಾಗಲೇ ಮುಂಬೈ ನಗರದಲ್ಲಿ ಕಾರ್ಯರೂಪಕ್ಕೆ ಬಂದಿರುವುದಲ್ಲದೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಮುಂಬೈನ ಪ್ರಮುಖ 18 ಕಡೆಗಳಲ್ಲಿ ಫಾಸ್ಟ್‌ಲೈನ್ ಸರ್ವೀಸ್ ತೆರೆಯಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲೂ ಕೂಡಾ ಫಾಸ್ಟ್‌ಲೈನ್ ಸೌಲಭ್ಯ ಲಭ್ಯವಾಗಲಿದೆ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

Kannada
Read more on auto news petrol diesel
English summary
Now Fill Up Fuel Without Paying — Hindustan Petroleum Introduces ‘Fastlane’ Service.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more