ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

By Praveen Sannamani

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆ ಅಂತಾ ಕೇಳಿದ್ರೆ ನಿತ್ಯ ವಾಹನ ಸವಾರಿ ಮಾಡುವರನ್ನು ಕೇಳಿದ್ರೆ ಮಾತ್ರ ಅದರ ರಿಯಾಲಿಟಿ ಗೊತ್ತಾಗುತ್ತೆ. ಇದೇ ಕಾರಣಕ್ಕೆ ಅದೆಷ್ಟೋ ಜನ ಈ ಊರಿನ ಸಹವಾಸವೇ ಬೇಡಾ ಅಂತಾ ತಮ್ಮ ಹಳ್ಳಿಗಳತ್ತ ವಾಪಸ್ ಹೋಗಿ ಆಗಿದೆ. ಇದೀಗ ಇಲ್ಲೊಬ್ಬ ಸಾಫ್ಟ್‌ವೇರ್ ಉದ್ಯೋಗಿಗೂ ಅದರ ಬಿಸಿತಟ್ಟಿದ್ದು, ಲಕ್ಷ ಲಕ್ಷ ಸಂಬಳದ ಉದ್ಯೋಗವನ್ನೇ ಬಿಟ್ಟು ತನ್ನ ಹಳ್ಳಿಯತ್ತ ವಾಪಸ್ ಹೊರಟ್ಟಿದ್ದಾನೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಪ್ರತಿ ವರ್ಷ ಸಾವಿರಾರು ಐಟಿ ಉದ್ಯೋಗಗಳನ್ನು ಸೃಷ್ಠಿಸುವ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಳತಿರದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿಯಿದ್ದು, ಇದರಿಂದ ಬೇಸತ್ತಿರುವ ಐಟಿ ಉದ್ಯೋಗಿಯಾಗಿರುವ ರೂಪೇಶ್ ಕುಮಾರ್ ವರ್ಮಾ ಐಟಿ ಸಿಟಿ ಬೆಂಗಳೂರಿಗೆ ಗುಡ್ ಬೈ ಹೇಳುತ್ತಿದ್ದಾನೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಇದಕ್ಕೂ ಮುನ್ನ ತನ್ನ ಕೆಲಸದ ಕೊನೆಯ ದಿನದಂದು ಕಾರಿನ ಬದಲಾಗಿ ಕುದುರೆ ಸವಾರಿ ಮೂಲಕವೇ ಕಚೇರಿಗೆ ಆಗಮಿಸಿ ಎಲ್ಲರ ಗಮನಸೆಳೆದಿದ್ದಾನೆ. ಇಷ್ಟು ದಿನಗಳ ಕಾಲ ಈ ಟ್ರಾಫಿಕ್ ಸಮಸ್ಯೆಯಲ್ಲಿ ಜೀವನ ನಡೆಸಿದ್ದ ನನಗೆ ಇನ್ಮುಂದೆ ಮುಕ್ತಿ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿರುವ ರೂಪೇಶ್ ಕುಮಾರ್ ವರ್ಮಾ, ಇದರ ಜತೆಗೆ 'ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಇದು ಅಂತಿಮ ದಿನ' ಎಂಬ ಫಲಕವನ್ನು ಕುದುರೆ ಸವಾರಿ ವೇಳೆ ಪ್ರದರ್ಶನ ಮಾಡಿದ್ದಾನೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ರಾಜಸ್ತಾನದ ನಿಫಾಲಿ ಮೂಲದ ಸಾಫ್ಟ್​ವೇರ್​ ಇಂಜಿನಿಯರ್‌ ಆಗಿರುವ​ ರೂಪೇಶ್​ ಕುಮಾರ್​ ವರ್ಮಾ, ಬೆಂಗಳೂರಿಗೆ ಬಂದು ನೆಲೆಸಿ 8 ವರ್ಷಗಳಾಗಿವೆಯೆಂತೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ವರ್ಮಾ ಬೇಸತ್ತಿದ್ದು, ಸಾಫ್ಟ್​ವೇರ್​ ಉದ್ಯೋಗವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಈ ಹಿನ್ನಲೆಯಲ್ಲಿ ಬೆಂಗಳೂರಿನ ಓಲ್ಡ್​ ಏರ್​ಪೋರ್ಟ್​ ಮತ್ತು ಸರ್ಜಾಪುರ ರಸ್ತೆ ಬಳಿ ಇರುವ ಎಂಬಸಿ ಗಾಲ್ಫ್​ ಲಿಂಕ್ಸ್​ ಸಂಸ್ಥೆಗೆ ಹೋಗಲು ಕುದುರೆ ಸವಾರಿ ಮಾಡಿದ್ದಾರೆ. ಜತೆಗೆ 'ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಇದು ಅಂತಿಮ ದಿನ' ಎಂಬ ಫಲಕವನ್ನೂ ಹಿಡಿದು ವರ್ಮಾ ಸಾಗಿದ್ದು ಹಲವರಿಗೆ ಕುತೂಹಲ ಹುಟ್ಟಿಸಿದ್ದು ಮಾತ್ರ ಸುಳ್ಳಲ್ಲ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಇನ್ನು ಬೆಂಗಳೂರು ಬಿಟ್ಟು ರಾಜಸ್ತಾನಕ್ಕೆ ವಾಪಸ್ ಹೋಗುತ್ತಿರುವ ರೂಪೇಶ್ ಕುಮಾರ್ ಅವರು ತಮ್ಮದೇ ಊರಿನಲ್ಲಿ ಕೆಲವು ಸ್ನೇಹಿತರ ಜೊತೆಗೂಡಿ ಸ್ವಂತ ಉದ್ಯಮವೊಂದನ್ನು ಆರಂಭಿಸುವ ಗುರಿಹೊಂದಿದ್ದು, 8 ವರ್ಷಗಳ ಕಾಲ ಟ್ರಾಫಿಕ್ ಸಮಸ್ಯೆಯಲ್ಲೇ ಜೀವನ ಕಳೆದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಐಟಿ ಉದ್ಯೋಗಗಳನ್ನು ಸೃಷ್ಠಿಸುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ವಾಹನ ಸಂಖ್ಯೆಯು ಸಹ ಅದೇ ಪ್ರಮಾಣದಲ್ಲಿ ಹೆಚ್ಚಿದ್ದು ಇದರ ಬಗ್ಗೆ ಕಳವಳ ವ್ಯಕ್ತಪಡಿಸುವ ರೂಪೇಶ್ ಕುಮಾರ್ ವರ್ಮಾ, ಬೆಂಗಳೂರು ನನಗೆ ಎಲ್ಲಾ ಕೊಟ್ಟಿದೆ ಆದ್ರೆ ಟ್ರಾಫಿಕ್ ಸಮಸ್ಯೆ ಮಾತ್ರ ನನ್ನ ಜೀವನದಲ್ಲಿ ಜಿಗುಪ್ಸೆ ತರಿಸಿದೆ ಎಂದಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಇದೇ ಕಾರಣಕ್ಕೆ ಕುದುರೆ ಮೇಲೆ ಸವಾರಿ ಮಾಡುತ್ತಾ ತನ್ನ ಸಹದ್ಯೋಗಿಗಳಿಗೆ ಶಾಕ್ ನೀಡಿದ ರೂಪೇಶ್ ಕುಮಾರ್ ವರ್ಮಾ ಅವರು, ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಸ್ವಂತ ಊರಿನಲ್ಲಿಯೇ ಯಾವುದಾರೂ ಸಣ್ಣ ಉದ್ಯಮವನ್ನು ಆರಂಭಿಸುವ ಕನಸಿನೊಂದಿಗೆ ಬೆಂದಕಾಳೂರನ್ನು ಬಿಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಇನ್ನು ಕೆಲಸದ ಒತ್ತಡ, ಕೌಟುಂಬಿಕ ಜಂಜಾಟಗಳ ನಡುವೆ ಬೆಂಗಳೂರಿನಂತಹ ನಗರಗಳಲ್ಲಿ ವಿಲಾಸಿ ಜೀವನಕ್ಕಿಂತ ಮಾನಸಿಕ ಕಿರಿಕಿರಿಯೇ ಹೆಚ್ಚಾಗುತ್ತಿದ್ದು, ಉತ್ತಮ ಸಂದೇಶದೊಂದಿಗೆ ಬಿಕ್ಕಟ್ಟಿನ ವಾತಾರಣಕ್ಕೆ ಗುಡ್ ಬೈ ಹೇಳಿರುವ ರೂಪೇಶ್ ಕುಮಾರ್ ವರ್ಮಾ ಅವರು ದೃಡ ನಿರ್ಧಾರಗಳೊಂದಿಗೆ ಭವಿಷ್ಯದ ದಿನಗಳತ್ತ ಹೆಜ್ಜೆಹಾಕುತ್ತಿರುವುದು ಉತ್ತಮ ನಡೆ ಎನ್ನಬಹುದು.

News Source: news18.com

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

Most Read Articles

Kannada
Read more on traffic bengaluru
English summary
Fed Up of Bengaluru Traffic, Techie Rides a Horse to Work on Last Day, Becomes Internet Sensation.
Story first published: Friday, June 15, 2018, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X