ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಟಾಟಾ ಮೋಟಾರ್ಸ್ ಕಂಪನಿಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾದ ಟಾಟಾ ಸಫಾರಿ ಮತ್ತೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕಾರು ಪ್ರಿಯರಲ್ಲಿ ಸಂಚಲನವನ್ನುಂಟು ಮಾಡಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಟಾಟಾ ಮೋಟಾರ್ಸ್ ಕಂಪನಿಯ ಮಾಲೀಕ ರತನ್ ಟಾಟಾ.

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಈಗ ರತನ್ ಟಾಟಾ ಅವರ ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಬೇರೊಬ್ಬರು ಬಳಸುತ್ತಿರುವ ಬಗ್ಗೆ ಸುದ್ದಿಯಾಗಿದೆ. ಇದು ಸ್ವತಃ ರತನ್ ಟಾಟಾ ಅವರಿಗೂ ಆಶ್ಚರ್ಯವನ್ನುಂಟು ಮಾಡಿದೆ. ದೇಶದ ಹಿತಕ್ಕಾಗಿ ಸದಾ ಮಿಡಿಯುವ ರತನ್ ಟಾಟಾ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅವರು ಟಾಟಾ ಮೋಟಾರ್ಸ್ ಕಾರುಗಳನ್ನು ಮಾತ್ರವಲ್ಲದೇ ಹಲವು ಜನಪ್ರಿಯ ಕಂಪನಿಗಳ ಕಾರುಗಳನ್ನು ಸಹ ಹೊಂದಿದ್ದಾರೆ.

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಯುವತಿಯೊಬ್ಬಳು ರತನ್ ಟಾಟಾರವರಿಗೆ ಸೇರಿದ ಫ್ಯಾನ್ಸಿ ನಂಬರ್ ಅನ್ನು ತನ್ನ ಕಾರಿನಲ್ಲಿ ಬಳಸಿ ದುರುಪಯೋಗಪಡಿಸಿಕೊಂಡಿದ್ದಾಳೆ. ಈ ಕೃತ್ಯವೆಸಗಿದ ಯುವತಿಯನ್ನು ಬಂಧಿಸಿರುವ ಮಹಾರಾಷ್ಟ್ರ ಸಂಚಾರ ಪೊಲೀಸರು ಆಕೆಯ ಕಾರನ್ನು ವಶಪಡಿಸಿಕೊಂಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ರತನ್ ಟಾಟಾರವರ ಕಾರಿನ ನಂಬರ್ ಬಳಸಲು ಆಕೆ ನೀಡಿದ ಕಾರಣ ಪೊಲೀಸರನ್ನು ಅಚ್ಚರಿಗೆ ದೂಡಿದೆ. ತನ್ನ ರಾಶಿಗೆ ಸೂಕ್ತವಾದ ನಂಬರ್ ಆದ ಕಾರಣ ರತನ್ ಟಾಟಾರವರ ಕಾರಿನಲ್ಲಿದ್ದ ಎಂಹೆಚ್ 01 ಡಿಕೆ 111 ನಂಬರ್ ಅನ್ನು ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಬಳಸಿದ್ದಾಗಿ ತಿಳಿಸಿದ್ದಾಳೆ.

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಆದರೆ ಈ ಸಂಖ್ಯೆ ರತನ್ ಟಾಟಾರವರಿಗೆ ಸೇರಿದ್ದು ಎಂದು ತನಗೆ ತಿಳಿದಿರಲಿಲ್ಲವೆಂದು ಆಕೆ ಹೇಳಿದ್ದಾಳೆ. ರತನ್ ಟಾಟಾರವರು ಈ ಸಂಖ್ಯೆಯನ್ನು ತಮ್ಮ ಕಾರ್ವೆಟ್ ಸೂಪರ್‌ಕಾರ್‌ನಲ್ಲಿ ಬಳಸುತ್ತಿದ್ದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಕಾರ್ವೆಟ್, ಶೆವ್ರೊಲೆಟ್ ಕಂಪನಿಗೆ ಸೇರಿದ ಕಾರ್ ಆಗಿದೆ. ರತನ್ ಟಾಟಾರವರು ಹೆಚ್ಚಿನ ಪ್ರಮಾಣದ ಸಾಮರ್ಥ್ಯ ಹೊಂದಿದೆ ಎಂಬ ಕಾರಣಕ್ಕೆ ಕಾರ್ವೆಟ್ ಸೂಪರ್ ಕಾರನ್ನು ಖರೀದಿಸಿದರು. ಈ ಕಾರಿನ ಬೆಲೆ ಸುಮಾರು 58,900 ಯುರೋಗಳಾಗಿದೆ.

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಸದ್ಯ ಒಂದು ಯೂರೋದ ಬೆಲೆ ರೂ.90.20ಗಳಾಗಿದೆ. ಈ ಕಾರನ್ನು ಯುರೋಪಿಯನ್ ದೇಶಗಳಲ್ಲಿ ಸುಮಾರು ರೂ.53 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ರತನ್ ಟಾಟಾರವರಿಗೆ ಸೇರಿದ ನಂಬರ್ ಅನ್ನು ತನ್ನ ಬಿಎಂಡಬ್ಲ್ಯು ಕಾರಿನಲ್ಲಿ ಬಳಸಿರುವ ಯುವತಿ ಹಲವು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾಳೆ.

MOST READ: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಮಹಾರಾಷ್ಟ್ರದ ಸಂಚಾರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಸಂಖ್ಯೆ ರತನ್ ಟಾಟಾರವರಿಗೆ ಸೇರಿದ್ದು, ಅವರು ಯಾವುದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿಲ್ಲವೆಂದು ಕಂಡು ಬಂದ ನಂತರ ಪೊಲೀಸರು ಈ ಕಾರಿನ ಮಾಲೀಕರನ್ನು ಪತ್ತೆ ಹಚ್ಚಿ ಯುವತಿಯನ್ನು ಬಂಧಿಸಿದ್ದಾರೆ.

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಈ ಅಪರಾಧಕ್ಕಾಗಿ ಪೊಲೀಸರು ಯುವತಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಸ್ಟ್ರೇಷನ್ ನಂಬರ್ ಮೂಲಕ ಯುವತಿ ಬೇರೆ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಳೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಈ ರೀತಿಯ ನಕಲಿ ನೋಂದಣಿ ಸಂಖ್ಯೆಗಳ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ದೇಶಾದ್ಯಂತ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಜಾರಿಗೆ ತರಲು ಮುಂದಾಗಿದೆ. ದೆಹಲಿಯಲ್ಲಿ ಈಗಾಗಲೇ ಹೆಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಟಾಟಾಗೂ ತಪ್ಪಲಿಲ್ಲ ನಕಲಿ ರಿಜಿಸ್ಟ್ರೇಷನ್ ನಂಬರ್ ಕಾಟ

ಹೆಚ್‌ಎಸ್‌ಆರ್‌ಪಿ ಅನುಷ್ಠಾನಗೊಂಡ ನಂತರ ನಕಲಿ ನಂಬರ್ ಪ್ಲೇಟ್'ಗಳನ್ನು ಅಳವಡಿಸಿಕೊಂಡು ಅಪರಾಧವೆಸಗುವುದಕ್ಕೆ ಬ್ರೇಕ್ ಬೀಳಲಿದೆ. ಇದಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ.

Most Read Articles

Kannada
English summary
Maharastra cops arrests lady for forging Ratan Tata's car number. Read in Kannada.
Story first published: Thursday, January 7, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X