ಮಹೀಂದ್ರ-ಏರ್‌ಬಸ್ ಜೊತೆಗಾರಿಕೆಯಲ್ಲಿ ರಕ್ಷಣಾ ಹೆಲಿಕಾಪ್ಟರ್ ನಿರ್ಮಾಣ
ಫ್ರಾನ್ಸ್ ಮೂಲದ ಐಕಾನಿಕ್ ಏರ್ ಬಸ್ ಜೊತೆ ಕೈಜೋಡಿಸಿಕೊಂಡಿರುವ ಭಾರತದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಸ್ವದೇಶದಲ್ಲೇ ರಕ್ಷಣಾ ಹೆಲಿಕಾಪ್ಟರ್ ಗಳನ್ನು ನಿರ್ಮಿಸಲಿದೆ.
Also Read: ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು
'ಮೇಕ್ ಇನ್ ಇಂಡಿಯಾ' ಭಾಗವಾಗಿ ಮಹೀಂದ್ರ ಈ ಮಹತ್ತರ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಈ ಸಂಬಂಧ ಮೂರು ದಿನಗಳ ಪರ್ಯಂತ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷರು 16 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಭಾರತದ ಮಿಲಿಟರಿ ಅಗತ್ಯಗಳನ್ನು ನೂತನ ಮಹೀಂದ್ರ-ಏರ್ ಬಸ್ ಹೆಲಿಕಾಪ್ಟರ್ ಗಳು ಈಡೇರಿಸಲಿದೆ. ಇದು ಮುಂದಿನ ದಿನಗಳಲ್ಲಿ ಭಾರತ ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವಾಗಲು ನೆರವಾಗಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ ರಕ್ಷಣಾ ವ್ಯವಸ್ಥೆಯ ಮುಖ್ಯಸ್ಥ ಎಸ್ ಪಿ ಶುಕ್ಲಾ, "ನಾವೆಲ್ಲ ಒಗ್ಗಟ್ಟಾಗಿ ಭಾರತದ ಮುಂದಿನ ತಲೆಮಾರಿನ ಹೆಲಿಕಾಪ್ಟರ್ ಗಳನ್ನು ತಯಾರಿಸಲಿದ್ದೇವೆ" ಎಂದಿದ್ದಾರೆ. ಮಾತು ಮುಂದುವರಿಸಿದ ಅವರು "ಇದು ಭಾರತದ ಮಿಲಿಟರಿ ಅಗತ್ಯಗಳನ್ನು ಈಡೇರಿಸಲಿದ್ದು, ನಿಕಟ ಭವಿಷ್ಯದಲ್ಲಿ ರಫ್ತು ಮಾಡಲಿದ್ದೇವೆ" ಎಂದಿದ್ದಾರೆ.

ಹಾಗಿದ್ದರೂ ಈ ಮಹತ್ತರ ಯೋಜನೆಗೆ ಉಭಯ ಸಂಸ್ಥೆಗಳು ಎಷ್ಟೆಷ್ಟು ಹೂಡಿಕೆ ಮಾಡಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅಲ್ಲದೆ ಬೇಹುಗಾರಿಕೆ, ಕಣ್ಗಾವಲು, ನೌಕಾ ಉಪಯುಕ್ತತೆ ಮತ್ತು ಬಹು ಕ್ರಿಯಾತ್ಮಕ ನೌಕಾ ಹೆಲಿಕಾಪ್ಟರ್ ಗಳನ್ನು ನಿರ್ಮಿಸಲಾಗುವುದು ಎಂಬುದು ತಿಳಿದು ಬಂದಿದೆ.

ಮಿಲಿಟರಿ ಹೆಲಿಕಾಪ್ಟರ್ ಗಳ ನಿರ್ಮಾಣದಲ್ಲೇ ವಿಶ್ವದಲ್ಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಏರ್ ಬಸ್ ಈಗಾಗಲೇ H125M, H135M, H145M, AS565 MBe, AS532 ALe, H225M, ಟೈಗರ್ ಮತ್ತು NH90 ಶ್ರೇಣಿಯ ಹೆಲಿಕಾಪ್ಟರ್ ಗಳನ್ನು ನಿರ್ಮಿಸಿದೆ.

ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ಕೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೆಚ್ಚು ಸುರಕ್ಷಿತ, ವಿಶ್ವಾಸಾರ್ಹ, ಗುಣಮಟ್ಟ ಯುದ್ಧ ವಿಮಾನಗಳನ್ನು ತಯಾರಿಸುವ ಇರಾದೆಯನ್ನು ಹೊಂದಿದ್ದಾರೆ.

ಒಟ್ಟಿನಲ್ಲಿ ಏರ್ ಬಸ್ ಸಂಸ್ಥೆಯ ಭಾಗವಾಗಿರುವ ಏರ್ ಬಸ್ ಹೆಲಿಕಾಪ್ಟರ್ ಮತ್ತು ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಡಿಫೆನ್ಸ್, ಭಾರತದ ಮಿಲಿಟರಿ ಬೇಡಿಕೆಗಳನ್ನು ಈಡೇರಿಸಲು ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ.

ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?


Click it and Unblock the Notifications








