ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಸದಾ ಕಾಲ ಟ್ವಿಟರ್ ನಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಟ್ವೀಟ್ ಗಳ ಮೂಲಕ ಹೊಸ ಹೊಸ ವೀಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ.

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಆನಂದ್ ಮಹೀಂದ್ರಾ ಈ ಬಾರಿಯೂ ಆಸಕ್ತಿದಾಯಕ ಸಂಗತಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಬಾರಿ ಅವರು ಮಾಡಿರುವ ಟ್ವೀಟ್ ಮಹೀಂದ್ರಾ ಬೊಲೆರೊ ವಾಹನಕ್ಕೆ ಸಂಬಂಧಿಸಿದೆ. ಬೊಲೆರೊ ಕಾರನ್ನು ಮೊಬೈಲ್ ಲೈಬ್ರರಿಯಾಗಿ ಮಾಡಿಫೈ ಮಾಡಲಾಗಿದೆ. ಈ ಮೊಬೈಲ್ ಲೈಬ್ರರಿಯನ್ನು ಸಾರ್ವಜನಿಕರು ಬಳಸಬಹುದು.

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ವೈರಲ್ ಆಗಿದ್ದು, ಸಾವಿರಾರು ಜನರು ಲೈಕ್ ಮಾಡಿ, ರಿಟ್ವೀಟ್ ಮಾಡಿದ್ದಾರೆ. ಕೆಲ ಟ್ವಿಟರ್ ಬಳಕೆದಾರರು ಈ ಕಾರಿನ ಮಾಲೀಕರನ್ನು ಶ್ಲಾಘಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಈ ಬೊಲೆರೊ ಪೀಕ್-ಅಪ್‌ ವಾಹನದಲ್ಲಿ ಲೈಬ್ರರಿಯನ್ನು ನಿರ್ಮಿಸಲಾಗಿದೆ. ಬೊಲೆರೊ ಲೈಬ್ರರಿಯ ಚಿತ್ರವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ, ಈ ಬೊಲೆರೊದಲ್ಲಿ ಗ್ರಂಥಾಲಯವನ್ನು ನಿರ್ಮಿಸಲಾಗಿದ್ದು, ಇದು ನಿಜವಾಗಿಯೂ ಕಾರಿನ ಅತ್ಯುತ್ತಮ ಬಳಕೆಯಾಗಿದೆ ಎಂದು ಹೇಳಿದ್ದಾರೆ.

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಈ ಚಿತ್ರವನ್ನು ಲುಧಿಯಾನದಲ್ಲಿರುವ ನನ್ನ ಸ್ನೇಹಿತ ಮಿನ್ನಿಯವರು ಶೇರ್ ಮಾಡಿದ್ದಾರೆ. ಈ ಬೊಲೆರೊ ವಾಹನವು ಗುರು ಗೋವಿಂದ್ ಸಿಂಗ್ ಸ್ಟಡಿ ಸರ್ಕಲ್‌ಗೆ ಸೇರಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಈಗಿನ ಯುವಕರು ಡಿಜಿಟಲ್ ಪ್ರಪಂಚದಿಂದ ಹೊರಬಂದು ಪುಸ್ತಕಗಳನ್ನು ಓದಲಿ ಎಂಬುದು ಗುರು ಗೋವಿಂದ್ ಸಿಂಗ್ ಸ್ಟಡಿ ಸರ್ಕಲ್‌ನ ಉದ್ದೇಶವೆಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರು ಈ ಕಾರಿನ ಉದ್ದೇಶವನ್ನು ಶ್ಲಾಘಿಸಿದ್ದಾರೆ.

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ವಾಸ್ತವವಾಗಿ, ಈ ಲೈಬ್ರರಿಯನ್ನು ಮಹೀಂದ್ರಾ ಬೊಲೆರೊ ಪಿಕ್-ಅಪ್‌ ವಾಹನದಲ್ಲಿ ನಿರ್ಮಿಸಲಾಗಿದೆ. ವಾಹನದ ಹಿಂದಿರುವ ಗೂಡ್ಸ್ ಕ್ಯಾರಿಯರ್ ನಲ್ಲಿ ಬುಕ್ ಶೆಲ್ಫ್ ಗಳನ್ನು ಜೋಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಈ ವಾಹನದಲ್ಲಿ ಸ್ಲೈಡಿಂಗ್ ಬುಕ್ ಶೆಲ್ಫ್ ಗಳನ್ನು ಮಾಡಲಾಗಿದೆ. ಈ ಶೆಲ್ಫ್ ನಲ್ಲಿ ಹೆಚ್ಚು ಹೆಚ್ಚು ಜಾಗವನ್ನು ಬಳಸಲಾಗಿದೆ. ಬುಕ್ ಶೆಲ್ಫ್ ಸ್ಲೈಡಿಂಗ್ ಅನ್ನು ಸುಲಭವಾಗಿ ಹೊರ ತೆಗೆದು ಒಳಗಿಡಬಹುದು.

ಮೊಬೈಲ್ ಲೈಬ್ರರಿಯಾಗಿ ಬದಲಾದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್

ಈ ಟ್ವೀಟ್ ವೈರಲ್ ಆಗಿ ಜನ ಮೆಚ್ಚುಗೆ ಗಳಿಸಿದೆ. ಅನೇಕ ಟ್ವಿಟರ್ ಬಳಕೆದಾರರು ಡಿಜಿಟಲ್ ಮೂಲಕ ಮಾತ್ರವಲ್ಲದೆ ಪುಸ್ತಕಗಳು ಹಾಗೂ ಗ್ರಂಥಾಲಯದ ಮೂಲಕವೂ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Most Read Articles
 
Kannada
English summary
Mahindra Bolero Pickup truck converted as mobile library. Read in Kannada.
Story first published: Wednesday, October 14, 2020, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X