ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಮಳೆ ಬೀಳುತ್ತಿರುವ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರು ಸಂಚರಿಸಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ನಮ್ಮ ದೇಶದಲ್ಲಿರುವ ಬಹುತೇಕ ರಸ್ತೆಗಳು ಹಳ್ಳ ಗುಂಡಿಗಳಿಂದ ಕೂಡಿರುತ್ತವೆ. ಇನ್ನು ಮಳೆಗಾಲದಲ್ಲಿ ಈ ರಸ್ತೆಗಳು ತೀರಾ ಹದಗೆಡುತ್ತವೆ. ಜೋರಾಗಿ ಮಳೆಯಾದರಂತೂ ಪರಿಸ್ಥಿತಿ ಹೇಳತೀರದು. ಕೆಲವೊಮ್ಮೆ ವಾಹನವನ್ನು ರಸ್ತೆಯಲ್ಲಿಯೇ ಬಿಟ್ಟು ಮನೆಗೆ ಬರುವ ಪರಿಸ್ಥಿತಿ ಕೂಡ ಬರಬಹುದು. ಮಳೆ ನೀರಿನಿಂದ ಜಲಾವೃತ್ತವಾಗಿರುವ ಪ್ರದೇಶಗಳಲ್ಲಿ ವಾಹನಗಳು ಸಿಲುಕಿಕೊಂಡಿರುವುದನ್ನು ನಾವು ನೋಡಿಯೇ ಇರುತ್ತೇವೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಇದರ ನಡುವೆ Mahindra Bolero ಕಾರು ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದ ರಸ್ತೆಯಲ್ಲಿ ಸಾಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ Mahindra ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ರವರನ್ನು ಅಚ್ಚರಿಗೊಳಿಸಿದೆ. ಈ ವೀಡಿಯೊವನ್ನು ಟ್ವಿಟರ್, ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಈ ವೀಡಿಯೊದಲ್ಲಿ ಪ್ರವಾಹದ ನೀರು ರಸ್ತೆಯುದ್ದಕ್ಕೂ ಅಲೆಗಳಂತೆ ಹರಿಯುತ್ತಿರುವುದನ್ನು ಕಾಣಬಹುದು. ಈ ವೀಡಿಯೊದಲ್ಲಿರುವ ಘಟನೆ ನಡೆದಿರುವುದು ಗುಜರಾತ್‌ ರಾಜ್ಯದಲ್ಲಿ ಎಂದು ಹೇಳಲಾಗಿದೆ. ಈ ವೀಡಿಯೊ ಪೋಸ್ಟ್ ಮಾಡಿರುವವರು ಗುಜರಾತ್ ಪೋಲಿಸ್ ಹಾಗೂ ಆನಂದ್ ಮಹೀಂದ್ರಾ ರವರನ್ನು ಟ್ಯಾಗ್ ಮಾಡಿದ್ದಾರೆ. ಈ ವೀಡಿಯೊ ಪೋಸ್ಟ್ ಮಾಡಿ Mahindra ಹೈ ಟು ಮಮ್ಕಿನ್ ಹೈ ಎಂದು ಬರೆದಿದ್ದಾರೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ರಸ್ತೆಯಲ್ಲಿ ತುಂಬಾ ನೀರು ತುಂಬಿದ್ದು, ನದಿಯಂತೆ ಹರಿದಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ನೀರಿನಲ್ಲಿಯೇ ಬಿಳಿ ಬಣ್ಣದ Mahindra Bolero ಕಾರು ಹಾದುಹೋಗುತ್ತದೆ. ನೀರು Bolero ಕಾರಿನ ಬಾನೆಟ್ ಅನ್ನು ತಲುಪುತ್ತದೆ. ಆದರೂ Bolero ನಿಲ್ಲಿಸದೆ ಮುಂದೆ ಚಲಿಸಿದೆ. ಈ Bolero ಕಾರು ಗುಜರಾತ್ ಪೊಲೀಸರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಈ ವೀಡಿಯೊ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ, ಈ ಮಳೆಯಲ್ಲಿ ಈ ವೀಡಿಯೊ ನೋಡಿ ನನಗೆ ಆಶ್ಚರ್ಯವಾಗಿದೆ ಎಂದು ಬರೆದಿದ್ದಾರೆ. ಟ್ವಿಟರ್ ಬಳಕೆದಾರರು ವೀಡಿಯೊವನ್ನು ಇಷ್ಟ ಪಟ್ಟಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೊ ಇದುವರೆಗೂ 3000 ಕ್ಕೂ ಹೆಚ್ಚು ಲೈಕ್‌ ಹಾಗೂ 320 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಿಟ್ಟಿಸಿದೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

Bolero ಕಾರು ಕಳೆದ ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ Mahindra ಕಂಪನಿಯ ವಾಹನವಾಗಿದೆ. Mahindra Boleroವಿಶೇಷವಾಗಿ ಭಾರತದ ಸಣ್ಣ ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಆದ್ಯತೆಯ ಎಸ್‌ಯು‌ವಿಯಾಗಿ ಉಳಿದಿದೆ. ಇತ್ತೀಚಿಗೆ Mahindra ಕಂಪನಿಯು Bolero Neo ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಈ ಎಸ್‌ಯು‌ವಿಯು ಮೂಲತಃ Mahindra TUV300 ಯ ಫೇಸ್ ಲಿಫ್ಟ್ ಆವೃತ್ತಿಯಾಗಿದೆ. ಹೊಸ Bolero ಎಸ್‌ಯು‌ವಿ ಸಹ ಅದೇ ವಿಶ್ವಾಸಾರ್ಹ ಡ್ರೈವ್ ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದರೆ Bolero Neo ಖಂಡಿತವಾಗಿಯೂ ಹೊಸ ತಲೆಮಾರಿನ Bolero ಅಲ್ಲ. Mahindra ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ Bolero ಎಸ್‌ಯುವಿಯನ್ನು ಪರಿಷ್ಕರಿಸಿ, ಹೊಸ ತಲೆಮಾರಿನ ಮಾದರಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

Mahindra Bolero ಎಸ್‌ಯು‌ವಿಯಲ್ಲಿ 1.5 ಲೀಟರ್ ಸಾಮರ್ಥ್ಯದ ಎಂಹಾಕ್ 75 ಬಿಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 75 ಬಿಎಚ್‌ಪಿ ಪವರ್ ಹಾಗೂ 210 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಈ ಎಸ್‌ಯು‌ವಿಯು ಆಫ್ ರೋಡ್ ಮೋಡ್‌ಗೆ ಮೀಸಲಾಗದಿದ್ದರೂ ಒರಟಾದ ರಸ್ತೆಗಳನ್ನು ಎದುರಿಸಲು ಸಮರ್ಥವಾಗಿದೆ. Bolero ಎಸ್‌ಯು‌ವಿ ರೇರ್ ವ್ಹೀಲ್ ಸೆಟಪ್ ಹೊಂದಿದೆ. Mahindra Bolero ಎಸ್‌ಯುವಿಯನ್ನು ಭಾರತದಲ್ಲಿ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬಿಎಸ್ 6 Bolero ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9.39 ಲಕ್ಷಗಳಿಂದ ಆರಂಭವಾಗುತ್ತದೆ.

ಭಾರತದಲ್ಲಿ ನೀರಿನಲ್ಲಿ, ಕೆಸರಿನಲ್ಲಿ ಸಿಲುಕುವ ವಾಹನಗಳನ್ನು ಬೇರೆ ವಾಹನಗಳ ಸಹಾಯದಿಂದ ಹೊರಕ್ಕೆ ಎಳೆಯುವ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ. ಇತ್ತೀಚಿಗೆ ಕೆಸರಿನಲ್ಲಿ ಸಿಲುಕಿದ್ದ Ford Ecosport ಎಸ್‌ಯು‌ವಿಯನ್ನು ಟ್ರಾಕ್ಟರ್ ನೆರವಿನಿಂದ ಹೊರಕ್ಕೆ ತರಲಾಗಿತ್ತು.

ಜಲಾವೃತ್ತವಾಗಿದ್ದ ರಸ್ತೆಯಲ್ಲಿ ಮುನ್ನುಗಿದ Mahindra Bolero ಎಸ್‌ಯು‌ವಿ

ಕಾರು ಚಿಕ್ಕದೇ ಆಗಿರಲಿ ಅಥವಾ ದೊಡ್ಡದೇ ಆಗಿರಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತ್ತವಾಗಿದ್ದರೆ ಆ ಮಾರ್ಗದಲ್ಲಿ ಸಂಚರಿಸದೇ ಇರುವುದೇ ಒಳ್ಳೆಯದು. ಇಲ್ಲದಿದ್ದರೆ ಅಪಾಯವನ್ನು ಮೈ ಮೇಲೆ ಎಳೆದು ಕೊಳ್ಳಬೇಕಾಗುತ್ತದೆ. ಈ ಮೇಲ್ಕಂಡ ಘಟನೆಯಲ್ಲಿ Mahindra Bolero ಕಾರಿಗೆ ಯಾವುದೇ ಅಪಾಯವಾಗಿಲ್ಲ ಎಂಬುದೇ ಸಮಾಧಾನಕರ ಸಂಗತಿ. Mahindra ಕಂಪನಿಯ ಕಾರುಗಳು ಗುಣಮಟ್ಟಕ್ಕೆ ಹಾಗೂ ಬಲಿಷ್ಟತೆಗೆ ಹೆಸರುವಾಸಿಯಾಗಿವೆ. ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ತಮ್ಮ ಸಮಾಜ ಮುಖಿ ಕಾರ್ಯಗಳಿಗೆ ಜನಪ್ರಿಯರಾಗಿದ್ದಾರೆ. ಇತ್ತೀಚಿಗೆ ಮುಕ್ತಾಯವಾದ ಟೋಕಿಯೊ ಒಲಂಪಿಕ್ ಹಾಗೂ ಪ್ಯಾರಾಲಂಪಿಕ್ ಕ್ರೀಡೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿ ಕೊಂಡವರಿಗೆ ಆನಂದ್ ಮಹೀಂದ್ರಾ ಹೊಸ XUV 700 ಎಸ್‌ಯುವಿಯನ್ನು ಉಡುಗೊರೆಯಾಗಿ ಘೋಷಿಸಿದ್ದಾರೆ.

Most Read Articles

Kannada
English summary
Mahindra bolero suv moves in flooded road video details
Story first published: Tuesday, September 14, 2021, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X