ಗುರುವಾಯೂರು ದೇವಸ್ಥಾನಕ್ಕೆ ಕಾಣಿಕೆಯಾಗಿ ಬಂತು ದುಬಾರಿ ಬೆಲೆಯ ಮಹೀಂದ್ರಾ ಎಸ್‍ಯುವಿ

ಗುರುವಾಯೂರು ದೇವಸ್ಥಾನ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಜನಪ್ರಿಯ ಯಾತ್ರಾ ಸ್ಥಳವಾಗಿದೆ. ಇದು ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಸಾಮಾನ್ಯವಾಗಿ ಭೂಲೋಕ ವೈಕುಂಟಂ ಎಂದು ಕೂಡ ಕರೆಯಲಾಗುತ್ತದೆ. ಇದರ ಅರ್ಥ ಭೂಮಿಯ ಮೇಲಿನ ವಿಷ್ಣುವಿನ ಪವಿತ್ರ ವಾಸಸ್ಥಾನ ಎಂದು. ಇದು ಹಿಂದೂಗಳಿಗೆ ಅತ್ಯಂತ ಪ್ರಮುಖವಾದ ಪೂಜಾ ಸ್ಥಳಗಳಲ್ಲಿ ಒಂದಾಗಿದೆ.

ಗುರುವಾಯೂರು ದೇವಸ್ಥಾನದಲ್ಲಿ (Guruvayur Temple) ಮಹೀಂದ್ರಾ ಥಾರ್ ಪ್ರದರ್ಶಿಸಿ ಹರಾಜು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ರೀತಿ ಇದೀಗ ಗುರುವಾಯೂರಪ್ಪನ ಹುಡುಕಿಕೊಂಡು ಮತ್ತೊಂದು ಹೊಸ ಮಹೀಂದ್ರಾ ಎಸ್‍ಯುವಿ ಆಗಮಿಸಿದೆ. ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ & ಮಹೀಂದ್ರಾದ ಜನಪ್ರಿಯ XUV700 ಎಸ್‍ಯುವಿಯು ಗುರುವಾಯೂರು ದೇವಾಲಯಕ್ಕೆ ಬಂದಿದೆ.

Mahindra XUV700

XUV700 ಎಸ್‍ಯುವಿಯು ಬ್ರ್ಯಾಂಡ್‌ನಿಂದ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಮಹೀಂದ್ರಾ XUV700 (Mahindra XUV700) ಎಸ್‍ಯುವಿಯ ಟಾಪ್-ಸ್ಪೆಕ್ AX7 ಆಟೋಮ್ಯಾಟಿಕ್ ರೂಪಾಂತರವನ್ನು ದೇವಾಲಯದಲ್ಲಿ ನೀಡಲಾಗಿದೆ. ಭಾನುವಾರ ಮಧ್ಯಾಹ್ನದ ಪೂಜೆಯ ನಂತರ ಗುರುವಾಯೂರಪ್ಪನವರಿಗೆ ವಾಹನ ಸಮರ್ಪಿಸಲಾಯಿತು. ಕಳೆದ ಬಾರಿ ಇದು ಕೆಂಪು ಬಣ್ಣದ ಆಫ್-ರೋಡರ್ ಆಗಿತ್ತು, ಆದರೆ ಈ ಬಾರಿ ಶಾಂತಿಯ ಬಿಳಿ ಬಣ್ಣದ ಮಾದರಿಯಾಗಿದೆ.

ಮಹೀಂದ್ರಾ XUV700 ಟಾಪ್-ಎಂಡ್ ಆಟೋಮ್ಯಾಟಿಕ್ ಎಸ್‍ಯುವಿಯ ಬೆಲೆಯು ಕೇರಳದಲ್ಲಿ ಸುಮಾರು ರೂ.28.50 ಲಕ್ಷವಾಗಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಡೆವಲಪ್‌ಮೆಂಟ್ ಮುಖ್ಯಸ್ಥ ಆರ್ ವೇಲುಸ್ವಾಮಿ ಅವರು ದೇವಸ್ವಂ ಬೋರ್ಡ್ ಅಧ್ಯಕ್ಷ ವಿಕೆ ವಿಜಯನ್ ಅವರಿಗೆ ಎಸ್‌ಯುವಿ ಕೀ ಹಸ್ತಾಂತರಿಸಿದರು.

Mahindra XUV700

ಭಾರತದ ಅತಿ ದೊಡ್ಡ ಯುಟಿಲಿಟಿ ವಾಹನ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ (Mahindra) ಗುರುವಾಯೂರು ದೇವಸ್ಥಾನಕ್ಕೆ ವಾಹನವನ್ನು ಅರ್ಪಿಸುತ್ತಿರುವುದು ಇದು ಎರಡನೇ ಬಾರಿ. ಕಂಪನಿಯು ಈ ಹಿಂದೆ ಎರಡನೇ ತಲೆಮಾರಿನ ಥಾರ್ ಎಸ್‌ಯುವಿಯ ಸೀಮಿತ ಆವೃತ್ತಿಯ ಆವೃತ್ತಿಯನ್ನು ದೇವಾಲಯಕ್ಕೆ ನೀಡಿದ್ದರು. ದೇವಸಂ ಬೋರ್ಡ್ ಈ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹರಾಜಿನಲ್ಲಿ ಮಾರಾಟ ಮಾಡಿ ದೇವಸ್ಥಾನಕ್ಕೆ ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದರು.

2021ರ ಆಗಸ್ಟ್ ತಿಂಗಳಲ್ಲಿ ಮಹೀಂದ್ರಾ ಕಂಪನಿ XUV700 ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ ಇಂದಿನವರೆಗೆ ಕೇವಲ 20 ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ದೊಡ್ಡದೊಂದು ದಾಖಲೆ ಮಾಡಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಲಾಂಚ್ ಆಗಿ ಮೊದಲ 12 ತಿಂಗಳಲ್ಲಿಯೇ ಕಂಪನಿಯು 50,000 ಯುನಿಟ್ XUV700 ಎಸ್‌ಯುವಿಗಳನ್ನು ವಿತರಣೆ ಮಾಡಿತ್ತು.

Mahindra XUV700

ಇತ್ತೀಚೆಗೆ ಮಹೀಂದ್ರಾ XUV700 ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ಸಖತ್ ಜೋಶ್ ನಲ್ಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಡಿಲೆವರಿಯನ್ನು ವೇಗಗೊಳಿಸಲು ಹೆಚ್ಚಿನ XUV700 ಎಸ್‌ಯುವಿಗಳನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ. ಈ ಕಾರನ್ನು ಗ್ರಾಹಕರು, ಇವತ್ತು ಬುಕ್ಕಿಂಗ್ ಮಾಡಿದರೂ ಭಾರೀ ಬೇಡಿಕೆಯ ಕಾರಣ ವಿತರಣೆಯಾಗಲು ಒಂದಷ್ಟು ತಿಂಗಳು ಕಾಯಲೇಬೇಕು.

ಮಹೀಂದ್ರಾ XUV700 ಎಸ್‍ಯುವಿಯಲ್ಲಿ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಪವರ್, 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 155 hp ಪವರ್, 360 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇವೆರೆಡು ಎಂಜಿನ್ 6 ಸ್ವೀಡ್ ಮ್ಯಾನುವಲ್/ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ.

Article Published On: Monday, July 10, 2023, 18:21 [IST]
English summary
Mahindra donates new xuv700 suv to guruvayur temple details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+