ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

By Nagaraja

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ, ನೂತನ ಕೊಮೊಡೊ ಕಾನ್ಸೆಪ್ಟ್‌ನೊಂದಿಗೆ ಮುಂದೆ ಬಂದಿದೆ. ಮಹೀಂದ್ರ ನೂತನ ಕಾನ್ಸೆಪ್ಟ್ ಹೆಸರು ಸ್ವಲ್ಪ ವಿಚಿತ್ರವಾಗಿ ಅನಿಸಿದರೂ ವಿನ್ಯಾಸದ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ.

ಇದನ್ನು ಮಕ್ರಾಂದ್ ಪಾಟೀಲ್ ಎಂಬವರು ವಿನ್ಯಾಸಗೊಳಿಸಿದ್ದಾರೆ. ಪ್ರಮುಖವಾಗಿಯೂ ಯುವ ಗ್ರಾಹಕರು, ಮಧ್ಯಮ ವಿಭಾಗ, ಕ್ರೀಡಾ ಉತ್ಸಾಹಿ ಮತ್ತು ಕುಟುಂಬ ವರ್ಗದವರನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಅತ್ಯಂತ ಶಕ್ತಿಶಾಲಿ ಅದೇ ಹೊತ್ತಿಗೆ ಅಷ್ಟೇ ಐಷಾರಾಮಿ ವೈಶಿಷ್ಟ್ಯಕ್ಕೆ ಒತ್ತು ಕೊಡಲಾಗಿದೆ. ಇದು ಎಲ್ಲ ಭೂಪ್ರದೇಶಕ್ಕೆ ಹೊಂದಿಕೆಯಾಗಲಿದೆ. ಪ್ರಮುಖವಾಗಿಯೂ ದೀರ್ಘ ದೂರ ಪ್ರಯಾಣ ಹಾಗೂ ಆಫ್ ರೋಡಿಂಗ್‌ಗೆ ಹೆಚ್ಚು ಸೂಕ್ತವೆನಿಸಲಿದೆ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಕೊಮೊಡೊ ಮಹೀಂದ್ರದಿಂದ ಆಗಮನವಾಗಲಿರುವ ತಾಜಾ ಪರಿಕಲ್ಪನೆ ಕಾರಾಗಿದೆ. ಇದು ಇತರ ಮಹೀಂದ್ರ ಕಾರಿಗಿಂತಲೂ ಭಿನ್ನವಾದ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶ ಕಂಡಿದೆ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಎಲ್ಲ ಕೋನದಿಂದಲೂ ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಮಹೀಂದ್ರ ಯಶಸ್ವಿಯಾಗಿದೆ. ಒಟ್ಟಾರೆಯಾಗಿ ಪರಿಪೂರ್ಣ ಆಫ್ ರೋಡ್ ಕಾರೆನಿಸಿಕೊಂಡಿದೆ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಹಿಂದುಗಡೆಯಿಂದ ಸೆಡಾನ್ ಕಾರಿನಂತೆ ಭಾಸವಾಗುತ್ತಿದೆ. ಹಾಗೆಯೇ ಸ್ಟೈಲಿಷ್ ಡಿಸೈನ್ ಕಾಪಾಡಿಕೊಂಡಿದೆ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಮಹೀಂದ್ರದ ಇರಾದೆ ಸ್ಪಷ್ಟವಾಗಿ ಇಲ್ಲಿ ಗೋಚರಿಸುತ್ತದೆ. ಇದು ದೀರ್ಘ ಬಾಳ್ವಿಕೆ ಹಾಗೂ ವಿಶ್ವಾಸಾರ್ಹತೆಗೆ ಹೆಚ್ಚಿನ ಒತ್ತು ಕೊಟ್ಟಿದೆ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಅಷ್ಟಕ್ಕೂ ಮಹೀಂದ್ರ ನೂತನ ಕೊಮೊಡೊ ಆವೃತ್ತಿಯು ಯಾವಾಗ ನಿರ್ಮಾಣ ವರ್ಷನ್ ಪಡೆದುಕೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ.

ಆಫ್ ರೋಡಿಂಗ್‌ಗಾಗಿ ಮಹೀಂದ್ರ 'ಕೊಮೊಡೊ' ಕಾನ್ಸೆಪ್ಟ್

ಒಟ್ಟಿನಲ್ಲಿ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಡುತ್ತಿರುವ ಮಹೀಂದ್ರ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರಯೋಜನ ಪಡೆಯುವಲ್ಲಿ ಯಶಸ್ಸನ್ನು ಕಂಡಿದೆ.

More from DriveSpark

Article Published On: Friday, February 28, 2014, 16:00 [IST]
English summary
Mahindra has revealed their latest concept coded ‘Komodo', which is designed by Makrand Patil. This new concept will attract youth and even middle aged people, sports enthusiasts and families too. The car will have strong stance, it will be big and strong, as well as luxurious.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+