ಬಡ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಮಹೀಂದ್ರ ನೆರವು

By Nagaraja

ದೇಶದ ಅತಿದೊಡ್ಡ ಯುಟಿಲಿಟಿ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ದೇಶದ ಹೆಣ್ಮಕ್ಕಳ ವಿದ್ಯಾಭ್ಯಾಸ ನೆರವಿಗಾಗಿ ಈಗಾಗಲೇ ಹೊಸತಾದ ಅಭಿಯಾನ (2014, ಆಗಸ್ಟ್ 27ರಂದು) ಆರಂಭಿಸಿದೆ.

ಪ್ರಸ್ತುತ ಅಭಿಯಾನವು 'ಹೆಮ್ಮೆಯ ಮಗಳಿಗಾಗಿ ಹೆಮ್ಮೆಯ ಅಪ್ಪಂದಿರು' (Proud Fathers For Daughters) ಎಂದಾಗಿದೆ. ಈ ಮೂಲಕ ಹೆಣ್ಮಕ್ಕಳಿಗೆ ಶೈಕ್ಷಣಿಕ ವಸ್ತುಗಳನ್ನು ಒದಗಿಸುವ ಮೂಲಕ ಓದಿಗೆ ನೆರವಾಗಲಿದೆ.

nanhi kali

'ನನ್ಹಿ ಕಲಿ' ಯೋಜನೆಯ ಭಾಗವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಕೆ.ಸಿ. ಮಹೀಂದ್ರ ಎಡ್ಯೂಕೇಷನ್ ಟ್ರಸ್ಟ್ ಮತ್ತು ನಂದಿ ಫೌಂಡೇಷನ್ ಜಂಟಿಯಾಗಿ ಆಯೋಜಿಸುತ್ತಿದೆ. ಅಲ್ಲದೆ ಈಗಾಗಲೇ 1,00,000ದಷ್ಟು ವಿದ್ಯಾರ್ಥಿನಿಯರಿಗೆ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ದೇಶದ ಒಂಬತ್ತು ರಾಜ್ಯಗಳಲ್ಲಿ ಹಮ್ಮಕೊಂಡಿರುವ ಈ ಅಭಿಯಾನವು, ಗ್ರಾಮೀಣ ಪ್ರದೇಶ ಹಿಂದುಳಿದ ಬಡ ಹೆಣ್ಮಕ್ಕಳಿಗೆ ತನ್ನ ಸಹಾಯ ಹಸ್ತವನ್ನು ಚಾಚಿದೆ.

ದೇಶದ ಅನೇಕ ಜನಪ್ರಿಯ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳನ್ನು ತನ್ನತ್ತ ಸೆಳೆಯುವಲ್ಲಿಯೂ ಪ್ರಸ್ತುತ ಯೋಜನೆ ಯಶಸ್ವಿಯಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ಮತ್ತು ಸಾರಾ ಸಚಿನ್, ಅನಿಲ್ ಮತ್ತು ಸೋನಮ್ ಕಪೂರ್, ರಿಷಿ ಮತ್ತು ರಿಧಿಮ ಕಪೂರ್, ಜಾವೇದ್ ಮತ್ತು ಜೋಯಾ ಅಖ್ತರ್ ಮುಂತಾದವರು ಈಗಾಗಲೇ ಕೈಜೋಡಿಸಿಕೊಂಡಿದ್ದಾರೆ.

ಭಾರತದಲ್ಲಿ ಪುರುಷ-ಮಹಿಳಾ ನಿಷ್ಫತ್ತಿಯು 1000ಕ್ಕೆ 914ರಷ್ಟಿದೆ. ದೇಶದಲ್ಲಿ ಈಗಲೂ ಅನೇಕ ಕುಟುಂಬಗಳು ಹೆಣ್ಣು ಮಗಳ ಬದಲು ಗಂಡು ಮಗನನ್ನೇ ಬಯಸುತ್ತಿದೆ. ಸರಿಯಾದ ವಿದ್ಯಾಭ್ಯಾಸದ ಕೊರತೆಯೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಹೀಂದ್ರ ಯೋಜನೆಯು ಸಮಾಜಕ್ಕೆ ಮಾದರಿಯಾಗಲಿದೆ.

ಅಂದ ಹಾಗೆ ನನ್ಹಿ ಕಲಿ ಯೋಜನೆಗೆ ನೀವು ಕೂಡೂ ಅನುದಾನ ನೀಡಲು ಇಚ್ಛಿಸುದಾದ್ದಲ್ಲಿ ಅಂತೆಯೇ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕೊಟ್ಟಿರುವ ವೆಬ್‌ಸೈಟ್‌ ಲಿಂಕ್‌ಗೆ ಭೇಟಿ ಕೊಡಿರಿ.

Article Published On: Monday, September 1, 2014, 12:41 [IST]
English summary
India's largest manufacturer of Utility Vehicles Mahindra will be launching a new campaign on 27th August, 2014. The campaign is called 'Proud Fathers For Daughters'. It is aimed at providing education to the girl child in India by providing academic and material support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+