2014 ಸ್ಕಾರ್ಪಿಯೊ ಟಿವಿ ಜಾಹೀರಾತು ನೋಡಲು ಮರೆಯದಿರಿ
ದೇಶದ ಅತಿ ದೊಡ್ಡ ಉಪಯುಕ್ತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಕಳೆದ ವಾರವಷ್ಟೇ ಹೊಸ ತಲೆಮಾರಿನ ಸ್ಕಾರ್ಪಿಯೊ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದಾದ ಬೆನ್ನಲ್ಲೇ ಬೆಂಗಳೂರು ನಗರ ಪ್ರವೇಶವನ್ನು ಪಡೆದಿತ್ತು.
ಈ ನಡುವೆ ಎಸ್‌ಯುವಿ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ, ಹೊಸ ಸ್ಕಾರ್ಪಿಯೊಗೆ ಸಂಬಂಧಿಸಿದಂತೆ ಆಕರ್ಷಕ ವಾಣಿಜ್ಯ ಟಿ.ವಿ ಜಾಹೀರಾತುವೊಂದನ್ನು ಬಿಡುಗಡೆ ಮಾಡಿದೆ. ಇದು ಪ್ರೇಕ್ಷಕರಲ್ಲಿ ನಿಜಕ್ಕೂ ಕುತೂಹಲ ಮೂಡಿಸುತ್ತಿದೆ.

ಹಿಂದಿನಿಂತಲೂ ಹೊಸ ಮಾದರಿ ಪರಿಚಯಿಸಿದಾಗ ಮಾಡಿದಾಗ ಪ್ರಚಾರಕ್ಕಾಗಿ ಟಿ.ವಿ ಪ್ರಚಾರ ಜಾಹೀರಾತು ಬಿಡುಗಡೆ ಮಾಡುವುದುವನ್ನು ಮಹೀಂದ್ರ ರೂಢಿಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಹೊಸ ಸ್ಕಾರ್ಪಿಯೊ ನಿಮ್ಮಲ್ಲಿ ರೋಮಾಂಚನ ಮೂಡಿಸುವುದರಲ್ಲಿ ಎರಡು ಮಾತಿಲ್ಲ.
ಅಂದ ಹಾಗೆ ಸೆಪ್ಟೆಂಬರ್ 26ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ 2014 ಮಹೀಂದ್ರ ಸ್ಕಾರ್ಪಿಯೊ ಎಸ್2 ಬೇಸ್ ವೆರಿಯಂಟ್ ಪ್ರಾರಂಭಿಕ ಎಕ್ಸ್ ಶೋ ರೂಂ ದರ 8.31 ಲಕ್ಷ ರು.ಗಳಿಷ್ಟಿದೆ. ಹಾಗೆಯೇ ಟಾಪ್ ಎಂಡ್ ಎಸ್10 ಫೋರ್ ವೀಲ್ ಡ್ರೈವ್ ಮಾದರಿಯು 13.05 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ (ಎಕ್ಸ್ ಶೋ ರೂಂ).


Click it and Unblock the Notifications








