ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಇತ್ತೀಚೆಗೆ ಉದ್ಯಮಿ ಆನಂದ್ ಮಹೀಂದ್ರಾರವರು ಟ್ವಿಟರ್ ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದರು. ಈ ವೀಡಿಯೊದಲ್ಲಿ ಕಾರೊಂದು ನೀರಿನಲ್ಲಿ ಸಾಗುತ್ತಿದೆ. ನಂತರ ಈ ಕಾರು ನೀರಿನಿಂದ ಹೊರ ಬರುತ್ತದೆ. ಟ್ವಿಟರ್ ಬಳಕೆದಾರರೊಬ್ಬರು ಈ ಕಾರು ಮಹೀಂದ್ರಾ ಸ್ಕಾರ್ಪಿಯೋ ಎಂದು ಹೇಳಿದ್ದಾರೆ.

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಈ ಕಾರು ನೀರಿನ ಹರಿವಿನ ಜೊತೆಯಲ್ಲಿಯೇ ಮುಂದೆ ಸಾಗುತ್ತದೆ. ನೀರು ಕಾರನ್ನು ತನ್ನ ಜೊತೆಯಲ್ಲಿಯೇ ಕೊಂಡೊಯ್ಯುತ್ತಿದೆ ಎಂಬಂತೆ ಭಾಸವಾಗುತ್ತದೆ. ನೀರಿನ ಹರಿವು ತುಂಬಾ ಅಪಾಯಕಾರಿಯಾಗಿದ್ದ ಕಾರಣ ಕಾರು ಯಾವಾಗ ಬೇಕಾದರೂ ಮುಳುಗುವ ಸಾಧ್ಯತೆಗಳಿದ್ದವು. ನೀರಿನ ಹರಿವಿನ ಜೊತೆಯಲ್ಲಿಯೇ ಸಾಗುತ್ತಿದ್ದ ಕಾರು ಇದ್ದಕ್ಕಿದಂತೆ ಸರ್ಫೆಸ್ ಕಡೆಗೆ ಸಾಗುತ್ತದೆ.

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಕೆಲ ಸಮಯದ ನಂತರ ಈ ಕಾರು ಸರ್ಫೆಸ್ ಅನ್ನು ತಲುಪುತ್ತದೆ. ನಂತರ ನೀರಿನಲ್ಲಿಯೇ ವೇಗವಾಗಿ ಚಲಿಸುತ್ತದೆ. ಇದರ ನಂತರ, ಇದೇ ನೀರಿನ ಮತ್ತೊಂದು ಹರಿವಿನಲ್ಲಿ ಆ ಕಾರು ನೀರನ್ನು ದಾಟಿ ಒಣ ಪ್ರದೇಶವನ್ನು ತಲುಪುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಈ ವೀಡಿಯೊವನ್ನು ಶೇರ್ ಮಾಡಿರುವ ಟ್ವಿಟರ್ ಬಳಕೆದಾರರು ನೀರಿನಲ್ಲಿಯೂ ಸಾಗುವ ವಾಹನದ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಈ ವಾಹನವು ಮಹೀಂದ್ರಾ ಸ್ಕಾರ್ಪಿಯೋ ಎಂದು ಹೇಳಿದ್ದಾರೆ.

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾರವರು ನೀರಿನಲ್ಲಿ ಚಲಿಸಿದ ಸ್ವರಾಜ್ ಟ್ರ್ಯಾಕ್ಟರ್‌ನ ಕ್ಲಿಪ್‌ಗಳನ್ನು ನೋಡಿದ ನಂತರ, ನಮ್ಮ ವಾಹನಗಳು ಈಜಾಡುತ್ತಿರುವುದನ್ನು ನೋಡಿದ್ದೇನೆ. ನಿಜವಾಗಿಯೂ ಇದು ಯಾವ ವಾಹನ ಎಂದು ನನಗೆ ತಿಳಿದಿಲ್ಲ. ಆದರೆ ಅದು ನನಗೆ ಸ್ಫೂರ್ತಿ ನೀಡಿದೆ.ಆಳವಾದ ನೀರಿನಿಂದ ಹೊರಬರಲು ನಾವು ಹೊಸ ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಎಸ್‌ಯುವಿಗಳು ತಮ್ಮ ಪವರ್ ನಿಂದಾಗಿ ದೇಶಾದ್ಯಂತ ಹೆಸರುವಾಸಿಯಾಗಿವೆ. ಮಹೀಂದ್ರಾ ಕಂಪನಿಯ ಟ್ರಾಕ್ಟರುಗಳು ಹಾಗೂ ಇನ್ನಿತರ ವಾಹನಗಳು ಸಹ ಜನಪ್ರಿಯವಾಗಿವೆ. ಆನಂದ್ ಮಹೀಂದ್ರಾರವರು ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದ ವೀಡಿಯೊದಲ್ಲಿ ಟ್ರಾಕ್ಟರ್ ವೊಂದು ಆಳವಾದ ನೀರಿನಲ್ಲಿ ಮುಳುಗುತ್ತಿತ್ತು.

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಈ ವೀಡಿಯೊದಲ್ಲಿರುವ ವಾಹನವು ಮಹೀಂದ್ರಾ ಸ್ಕಾರ್ಪಿಯೋ ಎಂಬುದು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಈ ವೀಡಿಯೊದಲ್ಲಿರುವ ವಾಹನವು ಎಲ್ಲಿಂದ ಬಂದಿದೆ ಎಂಬುದು ದೃಢವಾಗಿಲ್ಲ. ಆದರೆ ಈ ವಾಹನವು ತನ್ನ ಪವರ್ ಏನು ಎಂಬುದನ್ನು ತೋರಿಸಿರುವುದಂತೂ ನಿಜ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅಪಾಯಕಾರಿ ನೀರಿನ ಹರಿವಿನಿಂದ ಹೊರಬಂದ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ತನ್ನ 2020ರ ಹೊಸ ಥಾರ್ ಎಸ್ ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಎಸ್ ಯುವಿಯ ಬಿಡುಗಡೆಯನ್ನು ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

Most Read Articles

Kannada
English summary
Mahindra Scorpio comes out of a water stream. Read in Kannada.
Story first published: Tuesday, September 8, 2020, 11:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X