ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ವಿಶ್ವದ ಕಾರು ತಯಾರಕರ ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ವಾಹನ ಮಾರುಕಟ್ಟೆಯು ಕೂಡ ಒಂದಾಗಿದೆ. ಭಾರತದ ವಾಹನಗ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಕಾರುಗಳ ನಡುವೆ ಸ್ವದೇಶಿ ಕಾರುಗಳು ಮಿಂಚುತ್ತಿದೆ. ಭಾರತದ ವಾಹನಗಳು ಇಲ್ಲಿ ಮಾತ್ರವಲ್ಲದೇ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿಯು ಸಂಚಲನ ಸೃಷ್ಟಿಸುತ್ತಿದೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಇದೀಗ ಕೀನ್ಯಾದ ನೈರೋಬಿ ಪೊಲೀಸ್ ಪಡೆಯನ್ನು ಭಾರತದ ಮಹಿಂದ್ರಾ ಸ್ಕಾರ್ಪಿಯೋ ವಾಹನಗಳು ಸೇರಿಕೊಂಡಿದೆ. ನೈರೋಬಿ ಪೊಲೀಸ್ ಪಡೆಯು 100 ಮಹೀಂದ್ರಾ ಸ್ಕಾರ್ಪಿಯೊ ಸಿಂಗಲ್ ಕ್ಯಾಬ್ ಪಿಕ್ಅಪ್ ವಾಹನಗಳನ್ನು ತಮ್ಮ ಸೇವೆಗಾಗಿ ನಿಯೋಜನೆ ಮಾಡಿದೆ. ನೈರೋಬಿ ಪೊಲೀಸ್ ಪಡೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೊಸ ಮಹೀಂದ್ರಾ ಸ್ಕಾರ್ಪಿಯೊ ಪಿಕ್ಅಪ್ ವಾಹನಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೈರೋಬಿ ಪೊಲೀಸರ ಸೇವೆಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಬಳಸಿಕೊಂಡಿರುವ ಮಾಹಿತಿ ಹೆಚ್ಚು ಸಂತಸ ತಂದಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಈ ಪೋಸ್ಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಸಿಂಗಲ್ ಕ್ಯಾಬ್ ಮಹಿಂದ್ರಾ ಸ್ಕಾರ್ಪಿಯೊ ಪಿಕ್ಅಪ್ ಟ್ರಕ್ ಪವರ್ ಫುಲ್ ವಾಹನವಾಗಿದೆ. ಈ ಪಿಕ್ಅಪ್ ಟ್ರಕ್ ಯಾವುದೇ ಕಠಿಣ ರಸ್ತೆಗಳಲ್ಲಿಯು ಸಂಚರಿಸಲಿದೆ. ಬೆಟ್ಟ, ಗುಡ್ಡ ಪ್ರದೇಶಗಳ ಕಠಿಣ ಆಫ್-ರೋಡ್ ರಸ್ತೆಗಳಲ್ಲಿಯು ಸುಲಭವಾಗಿ ಚಲಿಸುತ್ತದೆ, ಎಲ್ಲಾ ಭೂಪ್ರದೇಶಗಳಲ್ಲಿಯು ಚಲಿಸಲು ಸಾಮರ್ಥ್ಯವಿದೆ ಎಂದು ವಾಹನ ತಯಾರಕರು ಹೇಳುತ್ತಾರೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಕೀನ್ಯಾದ ಬಹುತೇಕ ಪ್ರದೇಶಗಳು ಸರಿಯಾದ ರಸ್ತೆಗಳಿಲ್ಲದ ಹಾಗೂ ದುರ್ಗಮ ಹಾದಿಗಳಾಗಿದೆ. ಹೀಗಾಗಿ ಈ ರಸ್ತೆಗಳಲ್ಲಿ ಸಂಚರಿಸಲು ಪವರ್ ಫುಲ್ ವಾಹನವನ್ನೇ ನೈರೋಬಿ ಪೊಲೀಸರು ಆಯ್ಕೆ ಮಾಡಿಕೊಂಡಿದ್ದಾರೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಸಿಂಗಲ್ ಕ್ಯಾಬ್ ಮಹಿಂದ್ರಾ ಸ್ಕಾರ್ಪಿಯೊ ಪಿಕ್ಅಪ್ ಟ್ರಕ್ ವಾಹನಗಳಿಗೆ ನೀಲಿ ಬಣ್ಣವನ್ನು ನೀಡಲಾಗಿದೆ, ಈ ವಾಹನದ ಸೈಡ್ ಪ್ರೊಫೈಲ್‌ಗಳಲ್ಲಿ ಕೆಂಪು ಮತ್ತು ಹಳದಿ ಅಂಶಗಳನ್ನು ಹೊಂದಿದೆ. ಚಾಲಕನ ಕ್ಯಾಬಿನ್ ವ್ಯತಿರಿಕ್ತ ಬಿಳಿ ಬಣ್ಣವನ್ನು ಪಡೆಯುತ್ತದೆ, ಆದರೆ ಲೋಡಿಂಗ್ ಡೆಕ್ ಜನರನ್ನು ಸಾಗಿಸಲು ಮಾರ್ಪಾಡುಗಳನ್ನು ಮಾಡಿದ್ದಾರೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಕೀನ್ಯಾದ ಸರ್ಕಾರಿ ಸೇವೆಯಲ್ಲಿ ಬಳಸಿರುವ ಭಾರತದ ಮೊದಲ ವಾಹನ ಅನ್ನೋ ಹೆಗ್ಗಳಿಕೆಗೆ ಮಹಿಂದ್ರಾ ಸ್ಕಾರ್ಪಿಯೋ ಪಾತ್ರವಾಗಿದೆ. ಇದೀಗ ಕೀನ್ಯಾದ ರಸ್ತೆಗಳಲ್ಲಿ ಭಾರತದ ಮಹಿಂದ್ರಾ ಸ್ಕಾರ್ಪಿಯೋ ವಾಹನ ನೋಡಬಹುದಾಗಿದೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಮಹಿಂದ್ರಾ ಸ್ಕಾರ್ಪಿಯೋ ಭಾರತದಲ್ಲೂ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಭಾರತದ ಹಲವು ರಾಜ್ಯಗಳ ಪೊಲೀಸ್ ಇಲಾಖೆಯು ಮಹಿಂದ್ರಾ ಸ್ಕಾರ್ಪಿಯೋ ವಾಹನ ಬಳಸುತ್ತಿದೆ. ಭಾರತದಲ್ಲಿ ಪೊಲೀಸ್ ಇಲಾಖೆಯು ಸ್ಕಾರ್ಪಿಯೋ ಎಸ್‍ಯುವಿ ಮಾದರಿಯನ್ನು ಬಳಸುತ್ತಿದ್ದಾರೆ.ಕೀನ್ಯಾದಲ್ಲಿ ಸಿಂಗಲ್ ಕ್ಯಾಬ್ ಪಿಕ್ಅಪ್ ಮಾದರಿಯನ್ನು ಪಡೆದುಕೊಂಡಿದ್ದಾರೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಸಿಂಗಲ್ ಕ್ಯಾಬ್ ಮಹಿಂದ್ರಾ ಸ್ಕಾರ್ಪಿಯೊ ಪಿಕಪ್ ಟ್ರಕ್ ಮಾದರಿಯಲ್ಲಿ 2.2-ಲೀಟರ್ ಟರ್ಬೊ-ಡೀಸೆಲ್ mHawk ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ, ಈ ಎಜಿನ್ 140 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ, ಈ ಪಿಕಪ್ ಟ್ರಕ್ 4x2 ಮತ್ತು 4x4 ಎರಡೂ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯು ಭಾರತದಲ್ಲಿ ತನ್ನ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೊಸ ಎಸ್‍ಯುವಿಯು ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಈ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‌ಯುವಿ ಮಾದರಿಯ ಬಿಡುಗಡೆಗಾಗಿ ಮಹೀಂದ್ರಾ ಕಂಪನಿಯು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಹಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಹೊಸ ಸ್ಕಾರ್ಪಿಯೋ ಕಾರು ಮಾದರಿಯ ಮಾರಾಜೋ ಎಂಪಿವಿ ಹೊಸ ಆವೃತ್ತಿಯಿಂದಲೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದೆ.

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಹೊಸ ಫೀಚರ್ಸ್‌ಗಳಿಂದಾಗಿ ಸ್ಕಾರ್ಪಿಯೋ ಕಾರು ಮತ್ತಷ್ಟು ಬಲಿಷ್ಠ ವಿನ್ಯಾಸದೊಂದಿಗೆ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿದೆ. ಪ್ರೀಮಿಯಂ ಫೀಚರ್ಸ್ ಜೊತೆಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಸೀಟ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ವಿವಿಧ ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಹಲವು ಹೊಸ ಫೀಚರ್ಸ್ ಗಳನ್ನು ಒಳಗೊಂಡೀರುತ್ತದೆ,

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ಇದರೊಂದಿಗೆ ಮಲ್ಟಿ ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಕ್ರೂಸ್ ಕಂಟ್ರೋಲ್, ಸನ್‌ರೂಫ್, ಪುಶ್ ಬಟನ್ ಆನ್/ಆಫ್, ಕೀ ಲೆಸ್ ಎಂಟ್ರಿ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್ ಮತ್ತು ಸಿಲ್ವರ್ ಸ್ಕೀಡ್ ಪ್ಲೇಟ್ ಅನ್ನು ಹೊಂದಿರುತ್ತದೆ,

ಕೀನ್ಯಾದ ನೈರೋಬಿ ಪೊಲೀಸ್ ಪಡೆ ಸೇರಿದ ಮಹಿಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ ಮಾದರಿಪ್ರಸ್ತುತ ಮಾದರಿಗಿಂತಲೂ ರೂ.1 ಲಕ್ಷದಿಂದ 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಾದರಿಯಲ್ಲಿ ನವೀಕರಿಸಿದ ಕ್ಯಾಬಿನ್ ಸ್ಥಳಾವಕಾಶ, ವಿವಿಧ ಎಂಜಿನ್ ಆಯ್ಕೆ ಮತ್ತು ಹೊಸ ಫೀಚರ್ಸ್ ಗಳನ್ನು ಹೊಂದಿರುತ್ತದೆ.

Most Read Articles

Kannada
English summary
Mahindra scorpio joins fleet of nairobi police find here all details
Story first published: Monday, January 10, 2022, 20:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X