Mahindra Scorpio: ಚಾಲಕನ ಆ ಒಂದು ತಪ್ಪಿನಿಂದ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕೆರೆ ಪಾಲು!

ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೊಡ್ಡ ನಗರಗಳಲ್ಲಿ ವಾಹನ ಮಾಲೀಕರು, ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಕಾರುಗಳನ್ನು ತೊಳೆಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಜನರು ತಾವೇ ಸ್ವತಃ ಬೈಕ್ ಹಾಗೂ ಕಾರುಗಳನ್ನು ಸ್ವಚ್ಛಗೊಳಿಸುತ್ತಾರೆ. ಅದರಲ್ಲಿಯೂ ಕೆರೆ ಅಥವಾ ನದಿ ತಟದಲ್ಲಿ ಈ ರೀತಿಯ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತವೆ.

ಕೆರೆಯಲ್ಲಿ ಬಿದ್ದಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಎಸ್‌ಯುವಿಯನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಛತ್ತೀಸ್‌ಗಢ (Chhattisgarh)ದ ಬೈಕುಂತ್‌ಪುರ ಕೊರಿಯಾದ ಜುಮ್ಕಾ ಬಂದ್‌ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಸ್ಕಾರ್ಪಿಯೋವನ್ನು ಹೊರ ತೆಗೆಯಲು ಸಹಾಯ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಚಾಲಕನ ಆ ಒಂದು ತಪ್ಪಿನಿಂದ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕೆರೆ ಪಾಲು: ಇರಲಿ ಕೊಂಚ ಜಾಗ್ರತೆ

ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ಸ್ವಚ್ಛಗೊಳಿಸಲು ಚಾಲಕ ಅದನ್ನು ಕೆರೆ ದಂಡೆಗೆ ತಂದಿದ್ದಾನೆ. ಆ ಬಳಿಕ, ಆತ ಕಾರನ್ನು ನಿಲ್ಲಿಸಿ ಅದರಿಂದ ಇಳಿದಿದ್ದಾನೆ. ಆದರೆ, ಹ್ಯಾಂಡ್‌ಬ್ರೇಕ್ ಹಾಕುವುದನ್ನು ಮರೆತಿದ್ದಾನೆ ಎನ್ನಲಾಗಿದೆ. ಚಾಲಕ ಎಸ್‌ಯುವಿಯಿಂದ ಇಳಿಯುತ್ತಿದಂತೆ, ಅದು ನೀರಿನೊಳಗೆ ಹೋಗುವುದಕ್ಕೆ ಪ್ರಾರಂಭಿಸಿದ್ದು, ಆತ ದಿಕ್ಕು ಕಾಣದೆ ನಿಂತಿದ್ದಾನೆ (ಸಾಮಾನ್ಯವಾಗಿ ನದಿ ಅಥವಾ ಕೆರೆಗಳು ಇಳಿಜಾರಿನಲ್ಲಿ ಇರುತ್ತವೆ).

ಈ ವಿಡಿಯೋವನ್ನು ಗಮನಿಸಿದರೆ ಕೆರೆ ಎಷ್ಟು ಅಳವಾಗಿದೆ ಎಂದು ಸುಲಭವಾಗಿ ಅರ್ಥವಾಗುತ್ತದೆ. ನೀರಿನಲ್ಲಿ ಮುಳುಗಿದ್ದಾಗ ಮಹೀಂದ್ರಾ ಸ್ಕಾರ್ಪಿಯೋ-ಎನ್ ಟೈಲ್‌ಗೇಟ್ ಮಾತ್ರ ಗೋಚರಿಸುತ್ತಿದ್ದವು. ಕಿಟಕಿಗಳು ತೆಗೆದಿದ್ದ ಕಾರಣ ಕಾರಿನೊಳಗೆ ಸಂಪೂರ್ಣವಾಗಿ ನೀರು ತುಂಬಿತ್ತು. ಮಹೀಂದ್ರಾ ಸ್ಕಾರ್ಪಿಯೋವನ್ನು ಕೆರೆಯಿಂದ ಹೊರತೆಗೆಯಲು ಹರಸಾಹಸ ಪಡಲಾಗಿದ್ದು, ಅದಕ್ಕಾಗಿ ಕ್ರೇನ್ ಅನ್ನೇ ತರಿಸಲಾಗಿದೆ.

ಚಾಲಕನ ಆ ಒಂದು ತಪ್ಪಿನಿಂದ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕೆರೆ ಪಾಲು: ಇರಲಿ ಕೊಂಚ ಜಾಗ್ರತೆ

ಎಸ್‌ಯುವಿಯನ್ನು ಮುಂಭಾಗದ ಬಂಪರ್‌ಗೆ ಹೆಚ್ಚಿನ ಹಾನಿಯಾಗಿರುವುದನ್ನು ಕಾಣಬಹುದು. ಜೊತೆಗೆ ಕ್ಯಾಬಿಬ್ ಒಳಭಾಗದಿಂದಲೂ ನೀರು ಹರದಿದೆ. ಭಾರತದಲ್ಲಿ ಇಂತಹ ಹಲವು ಘಟನೆಗಳು ಜರುಗಿವೆ. ಕೆಲವು ತಿಂಗಳ ಹಿಂದೆ, ಹೋಂಡಾ ಬ್ರಿಯೋದಲ್ಲಿ ಕುಟುಂಬವೊಂದು ತೆರಳುತ್ತಿತ್ತು. ತಮ್ಮ ಕಾರನ್ನು ನೀರಿನ ಹೊಂಡದ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಆದರೆ ಹ್ಯಾಂಡ್‌ಬ್ರೇಕ್ ಹಾಕಿರಲಿಲ್ಲ. ಆ ಕಾರು, ಕೊಂಚ ಮುಂದಕ್ಕೆ ಹೋಗಿ 12 ಅಡಿಗಳಷ್ಟು ನೀರಿಗೆ ಉರುಳಿ ಬಿದಿತ್ತು.

ನೀವು ಕೂಡ ಈ ರೀತಿಯ ಸನ್ನಿವೇಶಗಳು ಮತ್ತು ಇಳಿಜಾರಿನ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸುವಾಗ ಹ್ಯಾಂಡ್‌ಬ್ರೇಕ್ ಅನ್ನು ತಪ್ಪದೆ ಹಾಕಿರಿ. ಆ ಮೂಲಕ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಬಹುದು. ನಿಮ್ಮ ಕಾರು - ಬೈಕ್ ಗಳನ್ನು ನದಿ ಅಥವಾ ಕೆರೆಗಳಲ್ಲಿ ತೊಳೆಯದೆ ಸಂಬಂಧಪಟ್ಟ ಸ್ಥಳದಲ್ಲಿ ವಾಶ್ ಮಾಡಿಸಿರಿ. ಈ ಮೂಲಕ ನೀರಿನ ಮೂಲಗಳನ್ನು ಶುದ್ಧವಾಗಿಡಬಹುದು. ಇದು ಮಾನವ ಹಾಗೂ ಜಲಚರಗಳಿಗೂ ಒಳ್ಳೆದು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ರೂ.13.26 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್, 6 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, 2WD (ಟೂ ವೀಲ್ ಡ್ರೈವ್)/ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಮಹೀಂದ್ರಾ ಸ್ಕಾರ್ಪಿಯೋ ಹೊಂದಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್, ರೇರ್ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, ಹಿಲ್-ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 27, 2023, 11:07 [IST]
English summary
Mahindra scorpio n driver forgets apply handbrake car fall down lake
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+