‘ಸ್ಯಾಮ್ ಬಹುದ್ದೂರ್’ ಚಿತ್ರದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್: ಈ ಕಾರನ್ನೇ ಆರಿಸಲು ಕಾರಣವೇನು ಗೊತ್ತಾ?
ಭಾರತದ ಹೆಮ್ಮೆಯ ವಾಹನ ತಯಾರಿಕಾ ಕಂಪನಿಯಾದ ಮಹೀಂದ್ರಾ ಈಗಾಗಲೇ ಹಲವಾರು ವಾಹನಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿ ಬಹಳಷ್ಟು ಯಶಸ್ಸನ್ನು ಗಳಿಸಿದೆ ಎಂಬ ಮಾತು ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಇದರಲ್ಲಿ ಮಹೀಂದ್ರಾ ಸ್ಕಾರ್ಪಿಯೋ, ಥಾರ್, ಎಕ್ಸ್‌ಯುವಿ 700 ಮುಂತಾದ ಕಾರುಗಳು ಪ್ರಮುಖವಾದವು.
ಇದೀಗ ಮಹೀಂದ್ರಾ ಕಂಪನಿಯ ಐಕಾನಿಕ್ ಕಾರಾದಂತಹ ಸ್ಕಾರ್ಪಿಯೋ ಎನ್ ಮುಂಬರುವ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದೆ. ಹೌದು, ಮುಂಬರಲಿರುವ. ವಿಕ್ಕಿ ಕೌಶಲ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಾಮ್ ಬಹುದ್ದೂರ್ ಚಿತ್ರದ ಮೂಲಕ ಮಹೀಂದ್ರಾ ಕಂಪನಿಯ ಈ ಕಾರು ಬಾಲಿವುಡ್ ಚಿತ್ರದಲ್ಲಿ ಪಾದಾರ್ಪಣೆ ಮಾಡಲಿದೆ.

ಈ ವಿಚಾರ ತಿಳಿದಿರುವ ಮಹೀಂದ್ರಾ ಸ್ಕಾರ್ಪಿಯೋ ಅಭಿಮಾನಿಗಳು ಫುಲ್ ದಿಲ್‌ಖುಷ್ ಆಗಿದ್ದು, ಚಿತ್ರ ರಿಲೀಸ್ ಆಗುವುದನ್ನು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೇಘನಾ ಗುಲ್ಝರ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಸಾಮ್ ಬಹುದ್ದೂರ್ ಚಿತ್ರವು ಇದೇ ವರ್ಷ ಡಿಸೆಂಬರ್ ತಿಂಗಳ ಒಂದನೇ ತಾರೀಖಿನಂದು ಬಿಡುಗಡೆಯಾಗಲಿದೆ.
ಆ್ಯಕ್ಷನ್ ಸೀಕ್ವೆನ್ಸ್ ಅಧಿಕವಾಗಿರುವ ಈ ಚಿತ್ರದಲ್ಲಿ ಅದೇ ಗುಣವನ್ನು ಹೊಂದಿರುವ ಒಂದು ರಗಡ್ ವಾಹನದ ಅಗತ್ಯವಿದ್ದಿದ್ದು, ಆ ಸ್ಥಾನವನ್ನು ಪೂರೈಸಲು ಮಹೀಂದ್ರಾ ಸ್ಕಾರ್ಪಿಯೋ ಎನ್ ಅತ್ಯುತ್ತಮವಾದ ಆಯ್ಕೆ ಎಂಬುದು ಬಹು ಜನರ ಅಭಿಪ್ರಾಯ. ಅದು ಮಾತ್ರವಲ್ಲದೇ ಹಿಂದಿನ ದಿನಗಳಿಂದಲೂ ಆ್ಯಕ್ಷನ್ ಪ್ಯಾಕ್ ಆಗಿರುವ ಚಿತ್ರದ ನಿರ್ದೇಶಕರಿಗೆ ಈ ಮಹೀಂದ್ರಾ ಸ್ಕಾರ್ಪಿಯೋ ವಾಹನ ನೆಚ್ಚಿನ ಆಯ್ಕೆಯಾಗಿತ್ತು ಎಂದು ಪ್ರತ್ಯೇಕವಾಗಿ ಇಲ್ಲಿ ಹೇಳಬೇಕಾಗಿಲ್ಲ.
ಇನ್ನು ಮಹೀಂದ್ರಾ ಸ್ಕಾರ್ಪಿಯೋ ಎನ್ ಕಾರಿನ ಇತರ ವಿಷಯಗಳ ಕುರಿತು ನೋಡುವುದಾದರೆ ಈ ಕಾರು, ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಕಾರಿನ ಫೀಚರ್ಸ್‌ಗಳನ್ನು ನೋಡುವುದಾದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಭಾರತದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಭರಪೂರ ಫೀಚರ್ಸ್‌ಗಳನ್ನು ಹೊಂದಿದೆ ಹೊಂದಿದೆ.
ಇಷ್ಟು ಮಾತ್ರವಲ್ಲದೇ ಸೇಫ್ಟಿಯಲ್ಲೂ ಸಹ ಈ ಕಾರು ಎತ್ತಿದ ಕೈ. ಈ ಸ್ಕಾರ್ಪಿಯೋ ಎನ್ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿದ್ದು, ಆರು ಏರ್ ಬ್ಯಾಗ್ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ.
ಇನ್ನು ಈ ಕಾರಿನ ದರ ರೂ.13.05 ಲಕ್ಷವಾಗಿದೆ (ಎಕ್ಸ್ ಶೋರೂಂ). ಡೀಸೆಲ್ ಪವರ್‌ಟ್ರೇನ್, 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ Z8L ರೂಪಾಂತರದ ಬೆಲೆ ರೂ.24.51 ಲಕ್ಷ ಆಗಿದೆ. ಒಂದೊಳ್ಳೆ ಆಫ್‌ರೋಡ್ ಅಥವಾ ಫೋರ್ ವ್ಹೀಲ್ ಕಾರನ್ನು ಕೊಳ್ಳಬೇಕು ಎಂದು ಎದುರು ನೋಡುತ್ತಿರುವವರಿಗೆ ಇದು ಒಂದು ಉತ್ತಮ ಆಯ್ಕೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications