ಗೊತ್ತಿಲ್ಲದೆ ಕರೆತಂದು ಅಪ್ಪನ ಕನಸಿನ ಕಾರನ್ನು ಗಿಫ್ಟ್ ಕೊಟ್ಟ ಮಗ: ಮೂಖವಿಸ್ಮಿತರಾದ ತಂದೆ!

ಮಕ್ಕಳು ಬೆಳೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪೋಷಕರ ಪಾತ್ರ ಅತಿ ಮುಖ್ಯವಾದದ್ದು, ಅಂದುಕೊಂಡ ಸ್ಥಾನಕ್ಕೆ ಬೆಳೆದರೆ ಸಾಕು ಎಂದು ಬಯಸುವ ತಂದೆ-ತಾಯಿ ಮಕ್ಕಳಿಂದ ಯಾವುದೇ ಉಡುಗೊರೆಗಳನ್ನು ಬಯಸುವುದಿಲ್ಲ. ಒಂದು ವೇಳೆ ಅವರಿಂದ ಉಡುಗೊರೆಗಳು ಸಿಕ್ಕರೆ ತಮ್ಮ ಬಾಳಲ್ಲಿ ಎಂದೂ ಕಾಣದ ಸಂತೋಷವನ್ನು ಕಾಣುತ್ತಾರೆ. ಈಗ ಟ್ರೆಂಡ್ ಬದಲಾಗಿರುವುದರಿಂದ ಮಕ್ಕಳು ತಮ್ಮ ಪೋಷಕರಿಗೆ ಕಾರುಗಳು ಮತ್ತು ಬೈಕುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇತ್ತೀಚೆಗೆ ಮಗನೊಬ್ಬ ತನ್ನ ತಂದೆಯ ಹುಟ್ಟುಹಬ್ಬದಂದು ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರನ್ನು ಉಡುಗೊರೆಯಾಗಿ ನೀಡಿ ತಂದೆಗೆ ಅಚ್ಚರಿಗೊಳಿಸಿದ್ದಾನೆ.

ಈ ಕುರಿತ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತಂದೆಗೆ ಗೊತ್ತಿಲ್ಲದೆ ಮಹೀಂದ್ರಾ ಡೀಲರ್‌ ಶಿಪ್‌ನಲ್ಲಿ ಕಾರನ್ನು ಡೆಲಿವರಿ ಪಡೆಯುವ ಕ್ಷಣಗಳು ನೋಡುಗರನ್ನು ರಂಜಿಸುತ್ತಿದೆ. ಮಹೀಂದ್ರಾ ಸ್ಕಾರ್ಪಿಯೋ - ಎನ್ ಎಸ್‌ಯುವಿ ತಂದೆಗೆ ಅವರ ಜನ್ಮದಿನದಂದು ಉಡುಗೊರೆಯಾಗಿ ನೀಡಿರುವುದಾಗಿ ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ.

mahindra-scorpio-n-surprise-gift-to-father-viral-video

ಡೀಲರ್‌ಶಿಪ್‌ನಲ್ಲಿ ಕುಟುಂಬವೆಲ್ಲಾ ಸೇರಿ ತಂದೆಗೆ ಸರ್‌ಪ್ರೈಸ್ ಆಗಿ ಕಾರನ್ನು ನೀಡುತ್ತಿದ್ದಂತೆ ಮೂಖವಿಸ್ಮಿತರಾಗಿದ್ದಾರೆ. ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳುವಷ್ಟರಲ್ಲಿ ಕಾರಿನ ಕೀಲಿಯನ್ನು ಹಸ್ತಾಂತರಿಸಲಾಗಿದೆ. ಈ ವೇಳೆ ಕುಟುಂಬ ಸೇರಿದಂತೆ ತಂದೆಯ ಮುಖದಲ್ಲಿ ಎಲ್ಲಿಲ್ಲದ ಸಂತೋಷವನ್ನು ನೋಡಬಹುದು. ನಂತರ ಕುಟುಂಬ ಪೂಜಾ ಆಚರಣೆಗಳನ್ನು ನಡೆಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಈ ವೀಡಿಯೊದಲ್ಲಿ, ಉಡುಗೊರೆಯನ್ನು ಸ್ವೀಕರಿಸುವ ವ್ಯಕ್ತಿಯ ಪ್ರತಿಕ್ರಿಯೆಯನ್ನು ಗಮನಿಸಬಹದು. ತಂದೆ ಮುಖದ ಮೇಲಿನ ನಗು ಬಹಳ ಸ್ಪಷ್ಟವಾಗಿತ್ತು. ಕಾರಿನಲ್ಲಿ ಕುಳಿತ ನಂತರ ಅವರು ಎಲ್ಲರಿಗೂ ಧನ್ಯವಾದ ತಿಳಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದ್ದು, ತಂದೆಯ ಮುಗ್ದ ಪ್ರತಿಕ್ರಿಯೆಗೆ ಎಲ್ಲರೂ ಫಿದಾ ಆಗಿದ್ದಾರೆ.

mahindra-scorpio-n-surprise-gift-to-father-viral-video

ಕಾರಿನ ವಿಶೇಷತೆಗಳು: ಮಹೀಂದ್ರಾ ನೀಡುವ ಪ್ರೀಮಿಯಂ ಎಸ್‌ಯುವಿಗಳಲ್ಲಿ ಸ್ಕಾರ್ಪಿಯೋ-ಎನ್‌ ಕೂಡ ಒಂದಾಗಿದೆ. ಈ ಎಸ್‌ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.13.85 ಲಕ್ಷದಿಂದ ಪ್ರಾರಂಭವಾಗಿ ರೂ.24.54 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ - ಎನ್‌ ಎಸ್‌ಯುವಿನಲ್ಲಿ ಎಲೆಕ್ಟ್ರಿಕ್ ಸನ್ ರೂಫ್, ಮೂರು ಸಾಲಿನ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಡ್ಯುಯಲ್ ಟೋನ್ ಅಪ್ಹೋಲ್ಸ್ಟರಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹೆಚ್ಚಿನ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ - ಎನ್‌ ಪೆಟ್ರೋಲ್ ಆವೃತ್ತಿಯು 2.0-ಲೀಟರ್ ಎಂಸ್ಟಾಲಿಯನ್ ಟರ್ಬೋಚಾರ್ಜ್ಡ್ ಎಂಜಿನ್ ಹಾಗೂ 2.2-ಲೀಟರ್ ಎಂಹಾಕ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ನೀಡುತ್ತವೆ. ಡೀಸೆಲ್ ಎಂಜಿನ್ ಮಾತ್ರ 4×4 ಆಯ್ಕೆಯೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 16, 2024, 11:29 [IST]
English summary
Mahindra scorpio n surprise gift to father viral video
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+