ಯಾರು ಊಹಿಸಿರಲಿಲ್ಲ: ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿತು ಮಹೀಂದ್ರಾದ ಬಹುಬೇಡಿಕೆಯ ಈ SUV.. ವಿಡಿಯೋ

ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾದ ಸ್ಕಾರ್ಪಿಯೊ ಎನ್ ಎಸ್‌ಯುವಿ ಪ್ರತಿಯೊಬ್ಬರ ಅಚ್ಚುಮೆಚ್ಚಾಗಿದೆ. ಬಿಡುಗಡೆಯಾದಾಗಿ ದೊಡ್ಡಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿದೆ. ಈ ಸ್ಕಾರ್ಪಿಯೊ ಎನ್ ಎಷ್ಟರಮಟ್ಟಿಗೆ ಬೇಡಿಕೆ ಹೊಂದಿದೆ ಅಂದರೇ ಕೆಲವೊಂದು ರೂಪಾಂತರಗಳನ್ನು ವಿತರಣೆ ಪಡೆಯಲು ತಿಂಗಳು ಗಟ್ಟಲೇ ಗ್ರಾಹಕರು ಕಾಯಲೇಬೇಕು. ಇದು ಪಿಕ್ಅಪ್ ಟ್ರಕ್ ಆದ್ರೆ ಹೇಗಿರುತ್ತೆ? ಹೇಳಿ..

ಸದ್ಯ, ಅಂತದದ್ದೇ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದ್ದು, ಇಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‌ಯುವಿ, ಪಿಕ್ಅಪ್ ಟ್ರಕ್ ಆಗಿ ಮಾಡಿಫೈಗೊಂಡರೆ, ಹೇಗಿರಲಿದೆ ಎಂಬುದನ್ನು ಅನಿಮೇಷನ್ ಕಲ್ಪನೆ ಮೂಲಕ ತೋರಿಸಲಾಗಿದೆ. ಇದು, ನೋಡಲು ಈಗಾಗಲೇ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿರುವ ಟೊಯೊಟಾ ಹಿಲಕ್ಸ್‌ನಂತೆಯೇ ಕಾಣುತ್ತಿದ್ದು, ವಿಡಿಯೋ ವೀಕ್ಷಿಸಿದ ಪ್ರತಿಯೊಬ್ಬರು ಲೈಕ್ ಮಾಡುತ್ತಿದ್ದಾರೆ.

ಯಾರು ಊಹಿಸಿರಲಿಲ್ಲ: ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿತು ಮಹೀಂದ್ರಾದ ಬಹುಬೇಡಿಕೆಯ ಈ SUV.. ವಿಡಿಯೋ

ಅನಿಮೇಷನ್ ಕಲ್ಪನೆಯಲ್ಲಿ ಮೂಡಿಬಂದಿರುವ ಸ್ಕಾರ್ಪಿಯೊ ಪಿಕ್ಅಪ್ ಟ್ರಕ್ ಫ್ರಂಟ್ ಡಿಸೈನ್ ನೋಡವುದಾದರೆ, ಆಕರ್ಷಕವಾದ ಹೈಡ್ ಲೈಟ್ಸ್ ಹೊಂದಿದ್ದು, ಲೋಗೋ ಕೂಡ ಹೊಸದಾಗಿದೆ. ಗ್ರಿಲ್‌ನಲ್ಲಿರುವ ಕ್ರೋಮ್ ಇನ್‌ಸರ್ಟ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಲ್ಲದೆ, ರಗಡ್ ಲುಕ್‌ ಹೊಂದಿರುವ ಈ ಪಿಕ್ಅಪ್ ಟ್ರಕ್ ಸಂಪೂರ್ಣ ಕೆಂಪು ಬಣ್ಣವನ್ನು ಪಡೆದಿದ್ದು, ಇದೇ ಹೈಲೆಟ್ ಆಗಿದೆ. ಆಫ್-ರೋಡ್ ಚಾಲನೆಗೂ ಸೂಕ್ತ ಎಂಬಂತೆ ತೋರುತ್ತಿದೆ.

ಅದಕ್ಕಾಗಿ 18 ಇಂಚಿನ ವೀಲ್ಸ್ ಹೊಂದಿದೆ. ಸಾಮಾನ್ಯವಾಗಿ ಮಹೀಂದ್ರಾದ ಸ್ಕಾರ್ಪಿಯೊ ಎನ್ ಎಸ್‌ಯುವಿಯಲ್ಲಿ 3 ರೋಗಳಲ್ಲಿ 7 ಆಸನ ವ್ಯವಸ್ಥೆ ಇರುತ್ತದೆ. ಪಿಕ್ಅಪ್ ಟ್ರಕ್ ಆಗಿ ಬದಲಾಗಿರುವ ಈ ಸ್ಕಾರ್ಪಿಯೊದಲ್ಲಿ ಕೇವಲ 2 ರೋ ಇದ್ದು, 4 ಆಸನಗಳು ಮಾತ್ರ ಇವೆ. ಜೊತೆಗೆ ಕ್ಯಾಬಿನ್ ಒಳಭಾಗವು ಅತ್ಯಾಕರ್ಷಕ ಲುಕ್ ಹೊಂದಿದ್ದು, ಇದು ನೋಡುಗರನ್ನು ಸೆಳೆಯುತ್ತಿದೆ.

ಸದ್ಯ, ಭಾರತದ ಮಾರುಕಟ್ಟೆ ಖರೀದಿಗೆ ಸಿಗುವ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ ರೂ.13.05 ಲಕ್ಷದಿಂದ ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಜೊತೆಗೆ ಎರಡು ಎಂಜಿನ್ ಆಯ್ಕೆಗಳನ್ನು ಪಡೆದಿದ್ದು, 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಪವರ್, 380 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

6 ಸ್ವೀಡ್ ಆಟೋಮೆಟಿಕ್/ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಮತ್ತೊಂದು, 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 172 bhp ಗರಿಷ್ಠ ಪವರ್ ಹಾಗೂ 370 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಈ ಎಸ್‌ಯುವಿ, 2WD (ಟೂ ವೀಲ್ ಡ್ರೈವ್), 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಮಹೀಂದ್ರಾ ಸ್ಕಾರ್ಪಿಯೊ ಎನ್, ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25 ಅಂಕ ಗಳಿಸಿ, 5 ಸ್ಟಾರ್ ರೇಟಿಂಗ್ ಪಡೆದಿದ್ದು, ಆರು ಏರ್ ಬ್ಯಾಗ್ ಹೊಂದಿದೆ.

ನಿಮಗೆ ತಿಳಿದಿರಲಿ.. ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ಸ್ಕಾರ್ಪಿಯೊದ ಡ್ಯುಯಲ್ ಕ್ಯಾಬ್ ಪಿಕಪ್ ಆವೃತ್ತಿಯನ್ನು 'ಸ್ಕಾರ್ಪಿಯೊ ಗೆಟ್‌ಅವೇ' ಹೆಸರಿನಲ್ಲಿ ಮಾರಾಟ ಮಾಡುತ್ತಿತ್ತು. ಆದರೆ, ಬೇಡಿಕೆ ಕಡಿಮೆಯಾದ ಹಿನ್ನೆಲೆ, ಸ್ಥಗಿತಗೊಳಿಸಿತು. ಇನ್ನು, ಸ್ಕಾರ್ಪಿಯೊ ಎನ್ ಎಸ್‌ಯುವಿ ಪಿಕ್ಅಪ್ ಟ್ರಕ್ ರೂಪದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ಹಲವು ಗ್ರಾಹಕರು ಕಾಯುತ್ತಿದ್ದು, ಕಂಪನಿ ಮಾತ್ರ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Article Published On: Monday, May 22, 2023, 14:38 [IST]
English summary
Mahindra scorpio n suv imagined pick up truck
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+