ಭೀಕರ ಅಪಘಾತದಲ್ಲಿ ಜೀವ ಉಳಿಸಿದ ಕಾರು... ಸುರಕ್ಷತೆಯಲ್ಲಿ ಟಾಟಾಗೆ ಪೈಪೋಟಿ ನೀಡ್ತಿದೆ ಈ ಬ್ರಾಂಡ್!
ಭಾರತದಲ್ಲಿ ಸುರಕ್ಷತೆ ನೀಡುವ ಕೆಲವೇ ಕಾರು ಬ್ರಾಂಡ್‌ಗಳಲ್ಲಿ ಸ್ವದೇಶಿ ಬ್ರಾಂಡ್‌ಗಳು ಕೂಡ ಇವೆ. ಅದರಲ್ಲೂ ಟಾಟಾ ಕಾರುಗಳು ಸುರಕ್ಷತೆ ವಿಷಯದಲ್ಲಿ ಸಖತ್ ಫೇಮಸ್ ಆಗಿವೆ. ನಂತರ ನಮ್ಮದೇ ಸ್ವದೇಶಿ ಬ್ರಾಂಡ್ ಆದ ಮಹೀಂದ್ರಾ ಕೂಡ ಉತ್ತಮ ಗುಣಮಟ್ಟಕ್ಕೆ ಜನಪ್ರಿಯವಾಗುತ್ತಿದ್ದು, ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಪ್ರಯಾಣಿಕರ ಜೀವ ಉಳಿಸಿದೆ.
ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ ಮಹೀಂದ್ರಾ ಕಂಪನಿಯ ಹೊಸ ಸ್ಕಾರ್ಪಿಯೋ-ಎನ್ ಕಾರು ನಜ್ಜುಗುಜ್ಜಾದರೂ ಪ್ರಯಾಣಿಕರ ಜೀವ ಉಳಿಸಿದೆ. ಒಡಿಶಾದಲ್ಲಿ ನಡೆದ ಈ ಅಪಘಾತದ ನಂತರದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಮಹೀಂದ್ರಾ ಸ್ಕಾರ್ಪಿಯೊ ಎನ್‌ನಲ್ಲಿದ್ದವರು ಹೆಚ್ಚಿನ ವೇಗದ ಅಪಘಾತದ ನಂತರ ಕಾರಿನ ರೂಫ್ ಹರಿದಿದ್ದರೂ ಸಹ ಬದುಕುಳಿದಿದ್ದಾರೆ.

ವಿವರವಾದ ಮಾಹಿತಿಗೆ ಹೋಗುವುದಾದರೆ, ಒಡಿಶಾದ ಕೆಂಡುಜಾರ್ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದಿಲ್ಲವಾದರೂ, ಮೂಲಗಳ ಪ್ರಕಾರ ಕಾರು ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ.
ಹೆದ್ದಾರಿಯಲ್ಲಿ ಕಾರನ್ನು ಅತಿವೇಗದಲ್ಲಿ ಓಡಿಸಲಾಗುತ್ತಿತ್ತು. ಚಾಲಕ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದನೋ ಅಥವಾ ನಿಯಂತ್ರಣವನ್ನು ಕಳೆದುಕೊಂಡನೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಾಹನವು ರಸ್ತೆಯಿಂದ ಆಚೆ ಬಂದು ಹಲವಾರು ಮರಗಳಿಗೆ ಡಿಕ್ಕಿ ಹೊಡೆದಿದೆ. SUV ಯ ರೂಫ್ ಮರವೊಂದಕ್ಕೆ ಅಪ್ಪಳಿಸಿ ನಜ್ಜುಗುಜ್ಜಾಗಿದೆ ಎಂದು ತೋರುತ್ತಿದ್ದು, ಎಂಥವರು ಬದುಕುಳಿಯುವುದು ಅಸಾಧ್ಯ.

ಅಪಘಾತದ ಬಳಿಕ ಸ್ಕಾರ್ಪಿಯೋ N ಮುಂಭಾಗ ತೀವ್ರ ಹಾನಿಯಾಗಿದೆ. ಗಾಯಗೊಂಡ ಪ್ರಯಾಣಿಕರ ಬಗ್ಗೆ ವಿಡಿಯೋದಲ್ಲಿ ನಿರ್ದಿಷ್ಟ ವಿವರಗಳನ್ನು ತಿಳಿಸಿಲ್ಲ. ಆದ್ರೆ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಅಪಘಾತಕ್ಕೆ ಒಳಗಾದ ಸ್ಕಾರ್ಪಿಯೋ ಎನ್ ವಾಹನವನ್ನು ಟೌ ಟ್ರಕ್ ಬಳಸಿ ಸೇವಾ ಕೇಂದ್ರಕ್ಕೆ ಸಾಗಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕೆಲವು ತಿಂಗಳ ಹಿಂದೆ ಮಹೀಂದ್ರಾ ಸ್ಕಾರ್ಪಿಯೊ ಎನ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ರಾಕ್ಟರ್ ಅರ್ಧ ಭಾಗವಾಗಿತ್ತು. ಇದನ್ನು ಗಮನಿಸಿದರೆ ವಾಹನದ ಗುಣಮಟ್ಟ ಯಾವ ಮಟ್ಟಿಗೆ ಇದೆ ಎಂಬುದು ತೋರುತ್ತದೆ. ಮಹೀಂದ್ರಾ ಸ್ಕಾರ್ಪಿಯೋ Global NCAP ನಿಂದ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಆದ್ರೂ ಕೂಡ ಎಸ್‌ಯುವಿಗಳನ್ನು ಎಚ್ಚರಿಕೆಯಿಂದ ಓಡಿಸಬೇಕು.
ಮಹೀಂದ್ರಾ ಸ್ಕಾರ್ಪಿಯೋ N ಒಂದು ಲ್ಯಾಡರ್ ಆನ್ ಫ್ರೇಮ್ ಹೊಂದಿರುವ SUV ಆಗಿರುವುದರಿಂದ, ಎತ್ತರದ ಗುರುತ್ವಾಕರ್ಷಣೆಯ ಕೇಂದ್ರವನ್ನು ಹೊಂದಿದೆ. ಇದರರ್ಥ ಈ SUV ಹೆಚ್ಚಿನ ವೇಗದಲ್ಲಿ ತಿರುವುಗಳನ್ನು ಪಡೆಯಲು ಸಾಧ್ಯವಿಲ್ಲ, ವಿಶೇಷವಾಗಿ ನೂರರ ವೇಗದಲ್ಲಿ ತಿರುವುಗಳನ್ನು ಪಡೆದರೆ ರೋಲ್ ಹೊಡೆಯುವುದು ಖಚಿತ. ಮೇಲೆ ತಿಳಿಸಿದ ಅಪಘಾತವು ಸಹ ಹೆಚ್ಚಿನ ವೇಗದಲ್ಲಿ ತಿರುವು ಪಡೆದ ಕಾರಣದಿಂದಲೇ ನಡೆದಿರಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ.
ಮಹೀಂದ್ರ ಸ್ಕಾರ್ಪಿಯೋ Global NCAP ನಿಂದ 5-ಸ್ಟಾರ್ ರೇಟಿಂಗ್ ಅನ್ನು ಪಡೆದರೂ ಸುರಕ್ಷಿತ ಮಿತಿಗಳಲ್ಲಿ ಚಾಲನೆ ಮಾಡಲು ಶಿಫಾರಸು ಮಾಡಲಾಗುತ್ತದೆ. ವಿಶೇಷವಾಗಿ ಹೆದ್ದಾರಿಯಲ್ಲಿರುವಾಗ. ಈ ಅಪಘಾತದಿಂದ ಕೇವಲ ಗಾಯಗಳೊಂದಿಗೆ ಪಾರಾಗಿರುವವರು ಅದೃಷ್ಟವೆಂತರೆಂದೇ ಹೇಳಬಹುದು. ಈ ಅಪಘಾತದಲ್ಲಿ ಸ್ಕಾರ್ಪಿಯೋ-ಎನ್ ಕಾರಿನ ಗುಣಮಟ್ಟದ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications