ಕೇಜ್ರಿವಾಲ್ ನಾಮಪತ್ರ ಸಲ್ಲಿಕೆಗೆ ಸಿದ್ಧವಾಯ್ತು ಹೊಸ ಮಾಡಿಫೈ ಕಾರು
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಥಾರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯನ್ನು ಹಲವು ರೀತಿಯಲ್ಲಿ ಉಪಯೋಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಈ ವಾಹನವನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಅರವಿಂದ್ ಕೇಜ್ರಿವಾಲ್‍ರವರಿಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾಗಿದೆ. ಅರವಿಂದ್ ಕೇಜ್ರಿವಾಲ್‍ರವರು ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾಡಿಫೈ ಮಾಡಲಾದ ಇದೇ ವಾಹನದಲ್ಲಿ ತೆರಳಿದ್ದಾರೆ.

ಮಾಡಿಫೈ ಮಾಡಲಾದ ಮಹೀಂದ್ರಾ ಥಾರ್ ಎಸ್‍ಯುವಿಯ ಮುಂಭಾಗದ ಗ್ರಿಲ್‍ನಲ್ಲಿ ಆಮ್ ಆದ್ಮಿ ಪಕ್ಷದ ಚಿಹ್ನೆಯಾದ ಪೊರಕೆಯನ್ನು ಗುರುತನ್ನು ಅಳವಡಿಸಲಾಗಿದೆ. ಪಕ್ಷದ ಸ್ಲೋಗನ್ ಆದ ಲಗೆ ರಹೊ ಕೇಜ್ರಿವಾಲ್ ಅನ್ನು ಬಾನೆಟ್ ಮೇಲೆ ಅಳವಡಿಸಲಾಗಿದೆ.

ಈ ವಾಹನದ ಬಣ್ಣವನ್ನು ಸಹ ಬದಲಿಸಲಾಗಿದೆ. ಈ ಎಸ್‍ಯುವಿ ಈಗ ಕಪ್ಪು ಹಾಗೂ ಹಳದಿ ಬಣ್ಣವನ್ನು ಹೊಂದಿದೆ. ಇದರ ಹೊರತಾಗಿ ಮಾಡಿಫೈಗೊಳಿಸಲಾಗಿರುವ ಈ ಎಸ್‍ಯುವಿಯ ಬಗೆಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಮಹೀಂದ್ರಾ ಕಂಪನಿಯು ಹೊಸ ಎಸ್‍ಯುವಿಯಲ್ಲಿ ವಿನ್ಯಾಸ, ಎಂಜಿನ್, ಸ್ಟೈಲ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಿದೆ.

ಹೊಸ ಮಹೀಂದ್ರಾ ಥಾರ್‍ನ ಮುಂಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಹಿಂದಿನಂತೆ ಮುಂಭಾಗದಲ್ಲಿ 7 ಸ್ಲಾಟ್ ಗ್ರಿಲ್, ಎಲ್‍ಇಡಿ ಹೆಡ್‍ಲ್ಯಾಂಪ್‍ಗಳಿರಲಿವೆ. ಇಂಟಿರಿಯರ್‍ನಲ್ಲಿ ಬ್ಲಾಕ್ ಡ್ಯಾಶ್‍ಬೋರ್ಡ್ ಹೊಂದಿರುವ ಅಪ್‍ಡೇಟೆಡ್ ಕ್ಯಾಬಿನ್, ಹೊಸ ಸ್ಟೀಯರಿಂಗ್ ವ್ಹೀಲ್ ಹಾಗೂ ಹೊಸ ಸ್ಟೈಲಿನ ಎಸಿ ವೆಂಟ್‍ಗಳಿರಲಿವೆ.

ಇದರ ಜೊತೆಗೆ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಸಹ ಅಳವಡಿಸಲಾಗುವುದು. ಹೊಸ ಮಹೀಂದ್ರಾ ಥಾರ್‍ನಲ್ಲಿ ಗುಣಮಟ್ಟದ ಸೀಟ್‍ಗಳನ್ನು ನೀಡಲಾಗುವುದು. ಹಿಂಭಾಗದ ಸೀಟ್‍ಗಳು ಒಂದಕ್ಕೊಂದು ಮುಖಾಮುಖಿಯಾಗಿರಲಿವೆ.

ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಮಲ್ಟಿ ಇನ್ಫಾರ್ಮೆಶನ್ ಡಿಸ್‍ಪ್ಲೇ, ಹೊಸ ಗೇರ್ ಲಿವರ್‍ಗಳನ್ನು ಅಳವಡಿಸಲಾಗುವುದು. ಸುರಕ್ಷತೆಗಾಗಿ ಡ್ಯುಯಲ್ ಏರ್‍ಬ್ಯಾಗ್, ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಸ್ಪೀಡ್ ಅಲರ್ಟ್ ಸಿಸ್ಟಂಗಳನ್ನು ನೀಡಲಾಗುವುದು.


Click it and Unblock the Notifications








