Just In
- 13 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್‌ಲಿಫ್ಟ್
- 14 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 14 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 15 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- News
ಪಂಜಾಬ್: ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ರಾಜಕೀಯ- ಅಮರಿಂದರ್ ಸಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಉಕ್ಕಿ ಹರಿಯುತ್ತಿದ್ದ ನದಿಯನ್ನು ಸುಲಭವಾಗಿ ದಾಟಿದ ಮಹೀಂದ್ರಾ ಥಾರ್
ದೇಶದ ಹಲವು ಭಾಗಗಳಲ್ಲಿ ಜೋರು ಮಳೆಯಾಗುತ್ತಿದೆ. ಕೆಲವೆಡೆ ನದಿಗಳು ತುಂಬಿ ಹರಿಯುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ತುರ್ತು ಕೆಲಸವಿದ್ದವರು ಅಪಾಯಮಟ್ಟ ಮೀರಿ ನದಿಗಳು ಹರಿಯುತ್ತಿದ್ದರೂ ಹಾಗೆಯೇ ಸಂಚರಿಸುತ್ತಿದ್ದಾರೆ.

ಇತ್ತೀಚೆಗೆ ಎರಡು ಮಹೀಂದ್ರಾ ಥಾರ್ ಎಸ್‌ಯುವಿಗಳು ಹರಿಯುವ ನದಿಯನ್ನು ದಾಟುತ್ತಿರುವ ವಿಡಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗಿ ಕೊನೆಗೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ತಲಿಪಿದೆ. ಅವರೂ ಕೂಡ ಈ ವಿಡಿಯೋವನ್ನು ಇದೀಗ ಹಂಚಿಕೊಂಡಿದ್ದಾರೆ.
Found this post in my inbox this morning. While I appreciate their faith in the Thar, this looks like an incredibly dangerous manoeuvre. I appeal to Thar owners to exercise restraint. pic.twitter.com/UpKq5jAG8x
— anand mahindra (anandmahindra) July 22, 2022
ಎರಡು ಮಹೀಂದ್ರಾ ಥಾರ್ ಎಸ್‌ಯುವಿಗಳು ಸೇತುವೆಯಿಂದ ಇಳಿದು ನಿಧಾನವಾಗಿ ನದಿಯನ್ನು ದಾಟುತ್ತವೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, "ನಾನು ಬೆಳಿಗ್ಗೆ ನನ್ನ ಇನ್‌ಬಾಕ್ಸ್‌ನಲ್ಲಿ ಈ ವೀಡಿಯೊವನ್ನು ನೋಡಿದೆ, ಜನರು ಮಹೀಂದ್ರ ಥಾರ್ ಮೇಲೆ ಹೊಂದಿರುವ ವಿಶ್ವಾಸವನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಈ ರೀತಿ ಚಾಲನೆ ಮಾಡುವುದು ತುಂಬಾ ಅಪಾಯಕಾರಿ, ನಾನು ಕೂಡ ಥಾರ್ ಚಾಲಕನೇ ಆದರೆ ಇಂಥಹ ಸಾಹಸಗಳನ್ನು ಮಾಡದಂತೆ ಅವರಿಗೆ ಹೇಳಲು ಇಷ್ಟಪಡುತ್ತೇನೆ ಎಂದು ಬರೆದಿದ್ದಾರೆ."

ಈ ವಿಡಿಯೋದಲ್ಲಿನ ಸ್ಥಳವು ಗೋವಾದ ಕೊಲ್ಲಂ ಎಂದು ಹೇಳಲಾಗುತ್ತಿದೆ, ಆ ಭಾಗದಲ್ಲಿ ಮಳೆಯಿಂದಾಗಿ ದೂಧಸಾಗರ್ ನದಿಯ ನೀರು ಕೊಳದ ಮೇಲೆ ಹರಿಯಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಎರಡು ಮಹೀಂದ್ರಾ ಥಾರ್ SUV ಗಳು ಹರಿಯುವ ನದಿಯನ್ನು ಸುಲಭವಾಗಿ ದಾಟುತ್ತವೆ. ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆಯ ಮೇಲೆ ನೀರು ವೇಗವಾಗಿ ಹರಿಯುತ್ತಿರುವುದನ್ನು ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದು.

ಮಹೀಂದ್ರಾ ಥಾರ್ ಒಂದು ಸಮರ್ಥ ಆಫ್-ರೋಡರ್ SUV ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಆಫ್-ರೋಡರ್‌ಗಳ ನೆಚ್ಚಿನ ಕಾರು ಕೂಡ ಹೌದು. ಹೊಸ ತಲೆಮಾರಿನ ಮಹೀಂದ್ರಾ ಥಾರ್ ಅನ್ನು ಅಕ್ಟೋಬರ್, 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು.

ಮಹೀಂದ್ರ ಥಾರ್ 2.0L ಪೆಟ್ರೋಲ್ ಮತ್ತು 2.2L ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರ 2.0 ಲೀಟರ್ ಪೆಟ್ರೋಲ್ ಎಂಜಿನ್ 150 bhp ಮತ್ತು ಡೀಸೆಲ್ ಎಂಜಿನ್ 130 bhp ಪವರ್ ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಬರುತ್ತವೆ.

ಎರಡೂ ಎಂಜಿನ್‌ಗಳನ್ನು 4x4 ಡ್ರೈವ್‌ಟ್ರೇನ್ ಆಯ್ಕೆಯೊಂದಿಗೆ ಲಭ್ಯಗೊಳಿಸಲಾಗಿದೆ. ಹೊಸ ಮಹೀಂದ್ರಾ ಥಾರ್ ಹಳೆಯದಕ್ಕಿಂತ ಹೆಚ್ಚಿನ ಶಕ್ತಿ, ಉತ್ತಮ ವಿನ್ಯಾಸ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಗ್ಲೋಬಲ್ ಎನ್‌ಸಿಎಪಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ನೀಡಿರುವುದರಿಂದ ಹೊಸ ಥಾರ್ ಈಗ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ.

ಎಲ್‌ಇಡಿ ಡಿಆರ್‌ಎಲ್‌ಗಳು, ಅಲಾಯ್ ವೀಲ್‌ಗಳು, ಗಟ್ಟಿಯಾದ ಮೇಲ್ಛಾವಣಿ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಐಎಸ್‌ಒಫಿಕ್ಸ್ ಮೌಂಟ್‌ಗಳೊಂದಿಗೆ ಫಾರ್ವರ್ಡ್-ಫೇಸಿಂಗ್ ಹಿಂಬದಿಯ ಸೀಟುಗಳು, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಟಚ್‌ಸ್ಕ್ರೀನ್ ಡಿಸ್ಪ್ಲೇಯಂತಹ ವೈಶಿಷ್ಟ್ಯಗಳನ್ನು ಕಾರು ಪಡೆದುಕೊಂಡಿದೆ.

ಆಫ್-ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ 60 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ. ಇನ್ನು ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಮಾದರಿಗಾಗಿ ಕಾಯುತ್ತಿದ್ದು, ಹೊಸ ಕಾರು ಆಫ್-ರೋಡ್‌ಗಿಂತಲೂ ಲೈಫ್‌ಸ್ಟೈಲ್ ಮಾದರಿಗಾಗಿ ಬದಲಾಗುತ್ತಿದೆ.

3 ಡೋರ್ ಥಾರ್ ಕಾರಿನಲ್ಲಿ ನಾಲ್ಕು ಆಸನ ಸೌಲಭ್ಯವಿದ್ದರೂ ಮುಂಭಾಗದ ಆಸನಗಳಲ್ಲಿ ಚಾಲಕ ಮತ್ತು ಸಹಪ್ರಯಾಣಿಕ ಹೊರತುಪಡಿಸಿ ಹಿಂಬದಿಯ ಆಸನಗಳಿಗೆ ಪ್ರವೇಶಿಸಲು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಥಾರ್ ಕಾರು ಕೇವಲ ಇಬ್ಬರು ಮಾತ್ರ ಪ್ರಯಾಣಿಸಬಹುದಾದ ಮಾದರಿಯಾಗಿದ್ದು, ಇದು ಆಫ್ ರೋಡ್ ಇಷ್ಟಪಡುವ ಗ್ರಾಹಕರಿಗೆ ಉತ್ತಮವಾಗಿದ್ದರೂ ಕುಟಂಬ ಸಮೇತ ಪ್ರಯಾಣ ಬಯಸುವ ಗ್ರಾಹಕರು ಹೊಸ ಕಾರಿನ ಆಯ್ಕೆಗೆ ಹಿಂದೆ ಸರಿಯುತ್ತಾರೆ.

ಹೀಗಾಗಿ ಪ್ರಾಯೋಗಿಕವಾಗಿ ಹೊಸ 5 ಡೋರ್ ಥಾರ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿರುವ ಮಹೀಂದ್ರಾ ಕಂಪನಿಯು ಈ ವರ್ಷಾಂತ್ಯಕ್ಕೆ ಇಲ್ಲವೇ 2023ಕ್ಕೆ ಬಿಡುಗಡೆಯಾಗಲಿರುವ ಥಾರ್ ಫೇಸ್‌ಲಿಫ್ಟ್ ಮಾದರಿಯಲ್ಲಿ 5 ಡೋರ್ ಮಾದರಿಯನ್ನು ಪರಿಚಯಿಸಬಹುದಾಗಿದೆ.

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸದ್ಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಹೊಸ ಕಾರು ಮಾದರಿಯಲ್ಲಿ 3 ಡೋರ್ ವರ್ಷನ್ ಮಾತ್ರ ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾದರಿಯಲ್ಲಿ 5 ಡೋರ್ ವರ್ಷನ್ ಸಹ ಅಭಿವೃದ್ದಿಪಡಿಸುತ್ತಿದೆ. ಈ ಮಾದರಿಗಾಗಿ ಹಲವರು ಆಫ್ ರೋಡ್ ಪ್ರಿಯರು ಕಾತುರದಿಂದ ಕಾಯುತ್ತಿದ್ದು, ಬಿಡುಗಡೆ ಬಳಿಕ ಭಾರೀ ಸದ್ದು ಮಾಡಲಿದೆ.