ಮದುವೆಗೆ ಸಿಂಗಾರಗೊಂಡು ಗುಜಿರಿ ಸೇರಿದ ಹ್ಯುಂಡೈ ವರ್ನಾ... ವರ್ನಾ ಏಟಿಗೆ ಥಾರ್ ಪಲ್ಟಿ!
ಮದುವೆಗೆ ಸಿದ್ಧರಾಗಿ ಹೊರಟಿದ್ದ ವಧು-ವರರಿದ್ದ ಕಾರು ಅಪಘಾತವಾಗಿರುವ ಘಟನೆ ಪಂಜಾಬ್‌ನ ಮಾನ್ಸಾ ಸಿರ್ಸಾ ರಸ್ತೆಯಲ್ಲಿ ನಡೆದಿದೆ. ವಧು-ವರರಿದ್ದ ಹ್ಯುಂಡೈ ವೆರ್ನಾ ಮತ್ತು ಮಹೀಂದ್ರಾ ಥಾರ್ ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ವಧು-ವರರು ಸೇರಿದಂತೆ ಐವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತದಲ್ಲಿ ಎರಡೂ ವಾಹನಗಳಿಗೆ ಅಪಾರ ಹಾನಿಯಾಗಿದೆ. ಅಲ್ಲದೆ, ಅಪಘಾತದಲ್ಲಿ ಆಟೋವೊಂದಕ್ಕೂ ಥಾರ್ ಡಿಕ್ಕಿ ಹೊಡೆದಿದ್ದು, ಅದು ಕೂಡ ಪಲ್ಟಿಯಾಗಿದೆ. ಮದುವೆಯ ಕಾರು ಸರ್ದುಲ್ ಗಢದಿಂದ ಮಾನ್ಸಾ ಕಡೆಗೆ ಹೋಗುತ್ತಿದ್ದಾಗ ಡೊಲೊವಾಲ್ ಬಳಿ ಮಾನ್ಸಾ ಕಡೆಯಿಂದ ಅತಿವೇಗದಲ್ಲಿ ಬಂದ ಮಹೀಂದ್ರಾ ಥಾರ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಹ್ಯುಂಡೈ ವರ್ನಾದಲ್ಲಿದ್ದ ವಧು - ವರ ಸೇರಿ ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಗೆ ಗಾಯಗಳಾಗಿವೆ. ಅಪಘಾತ ತೀವ್ರತೆಯ ಮೊದಲ ಪರಿಣಾಮವು ವರ್ನಾದ ಮುಂಭಾಗದ ಏಪ್ರನ್‌ಗೆ ಸಂಭವಿಸಿದಂತೆ ತೋರುತ್ತಿದೆ. ಇದು ಹೆಚ್ಚು ಹಾನಿಗೊಳಗಾಗಿದ್ದರೂ, ವಾಹನದ ರಚನಾತ್ಮಕ ಸಮಗ್ರತೆಯು ಕ್ಯಾಬಿನ್ ಒಳಗೆ ಹೆಚ್ಚು ಹಾನಿಯಾಗದಂತೆ ಮಾಡಿದೆ. ಇದು ಹಳೆಯ ಹ್ಯುಂಡೈ ವರ್ನಾ ಎಂದು ತಿಳಿದುಬಂದಿದೆ.
ಇತ್ತೀಚಿನ ಹ್ಯುಂಡೈ ವರ್ನಾ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿದೆ. ಹಳೆಯ ಹ್ಯುಂಡೈ ವರ್ನಾವನ್ನು ಗ್ಲೋಬಲ್ ಎನ್‌ಸಿಎಪಿನಲ್ಲಿ ಪರೀಕ್ಷಿಸಿಲ್ಲ. ಎರಡೂ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದರೂ ಕಾರಿನಲ್ಲಿದ್ದವರು ಕೇವಲ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ಮಾನ್ಸಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಸ್‌ಯುವಿಗಳು ಉರುಳುತ್ತವೆ: ಪ್ರಪಂಚದಾದ್ಯಂತ ಎಸ್‌ಯುವಿಗಳು ಜನಪ್ರಿಯತೆ ಪಡೆದಿವೆಯಾದ್ರೂ ವೇಗದಲ್ಲಿ ತಿರುವು ತೆಗೆದುಕೊಂಡ್ರೆ ಸುಲಭವಾಗಿ ಪಲ್ಟಿಯಾಗುತ್ತವೆ. ಎಸ್‌ಯುವಿಗಳು ಸವಾಲಿನ ಭೂಪ್ರದೇಶಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಇವನ್ನು ಹೆಚ್ಚಾಗಿ ಆಫ್‌ರೋಡ್‌ಗಳಿಗೆ ಬಳಸಲು ನಿರ್ಮಿಸಲಾಗುತ್ತದೆ. ಆದ್ರೆ SUV ಗಳನ್ನು ಖರೀದಿಸುವ ಹೆಚ್ಚಿನ ಜನರು ಆಫ್ ರೋಡ್ ಸಾಹಸವನ್ನು ಮಾಡುವುದಿಲ್ಲ.
ನಮ್ಮ ಸಾಮಾನ್ಯ ರಸ್ತೆಗಳಲ್ಲಿ ಆಫ್‌ರೋಡರ್ ಎಸ್‌ಯುವಿಗಳನ್ನು ಓಡಿಸಬಾರದು ಎಂಬ ನಿಯಮಗಳೇನು ಇಲ್ಲ. ಆದ್ರೆ ಸೆಡಾನ್‌ಗಳನ್ನು ಓಡಿಸುವ ರೀತಿ ಎಸ್‌ಯುವಿಗಳನ್ನು ಓಡಿಸಲು ವಿನ್ಯಾಸಗೊಳಿಸಿಲ್ಲ. SUV ಗಳ ವಿನ್ಯಾಸ, ಅವುಗಳ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ, ಹ್ಯಾಚ್‌ಬ್ಯಾಕ್ ಅಥವಾ ಸೆಡಾನ್‌ಗಳಿಗೆ ಹೋಲಿಸಿದಾಗ ಅವುಗಳು ಟಿಪ್ಪಿಂಗ್‌ಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ.

ಆದ್ದರಿಂದ, ಹೆಚ್ಚಿನ ವೇಗದಲ್ಲಿ SUV ಗಳನ್ನು ಚಾಲನೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್ ವಾಹನದ ಗುರುತ್ವಾಕರ್ಷಣೆಯ ಕೇಂದ್ರವನ್ನು ಬದಲಾಯಿಸುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ ಮೂಲೆಗಳಲ್ಲಿ ಹೆಚ್ಚಿನ ವೇಗದಲ್ಲಿ SUV ಅನ್ನು ಚಾಲನೆ ಮಾಡುವುದು ತುಂಬಾ ಅಪಾಯ, ಆದರೆ ಸೆಡಾನ್‌ನಂತಹ ಕಡಿಮೆ-ಪ್ರೊಫೈಲ್ ಕಾರುಗಳು ಹಾಗಲ್ಲ.
ಸೆಡಾನ್ ಗಳು ಅತಿವೇಗದಲ್ಲಿ ತಿರುವು ತೆಗೆದುಕೊಂಡ್ರು ಸುರಕ್ಷಿತವಾಗಿರುತ್ತವೆ. ಆದ್ರೆ SUV ಗಳ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ನಿಂದಾಗಿ ಟಿಪ್ಪಿಂಗ್‌ನ ಹೆಚ್ಚಿನ ಅಪಾಯವಿದೆ. ಹೀಗಾಗಿ ಚಾಲಕರು ವಿಶೇಷವಾಗಿ ಸೆಡಾನ್‌ಗಳಿಂದ ಪರಿವರ್ತನೆಗೊಂಡು ಆಫ್‌ರೋಡ್ ಎಸ್‌ಯುವಿಗಳನ್ನು ಓಡಿಸುವವರು ತುಸು ಹೆಚ್ಚು ಜಾಗರೂಕರಾಗಿರಬೇಕು ಎಂಬುದು ನಮ್ಮ ಸಲಹೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications