ಡೆಲಿವರಿ ದಿನವೆ ಎಡವಟ್ಟು: ಶೋರೂಂನಿಂದ ಸೀದಾ ಗುಜರಿಗೆ... ಹೊಚ್ಚ ಹೊಸ ಮಹೀಂದ್ರಾ ಥಾರ್!
ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಕಾರು ಖರೀದಿಸಲು ಸಾಧ್ಯ ಎಂಬ ಊಹೆ ಈಗ ಬದಲಾಗಿದೆ. ಪ್ರಸ್ತುತ ಭಾರತದಲ್ಲಿ ಹಲವು ಕಾರು ಕಂಪನಿಗಳು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಜೊತೆಗೆ ಡೌನ್ ಪೇಮೆಂಟ್ ಇಎಂಐ ಆಯ್ಕೆ ಕೂಡ ಸಿಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹೊಸ ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸಾಗುತ್ತಿದೆ. ಈ ಕಸನು ಬಹುತೇಕರು ನನಸು ಮಾಡಿಕೊಳ್ಳುವುದು ಸಹ ಸುಲಭವಾಗುತ್ತಿದೆ. ಆದರೆ ಹೊಸ ಕಾರನ್ನು ಇನ್ನೇನು ಡೆಲಿವರಿ ಪಡೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅದಕ್ಕೆ ಅಪಘಾತ ನಡೆದರೆ ಹೇಗಿರುತ್ತೆ? ಊಹಿಸಲೇ ಭಯಾನಕವಾಗಿದೆ ಅಲ್ಲವೇ.. ಇಂಥಹದ್ದೇ ಘಟನೆಯೊಂದು ನಡೆದಿದ್ದು, ಹೊಚ್ಚ ಹೊಸ ಕಾರು ಜಖಂಗೊಂಡಿದೆ.
ದೇಶಾದ್ಯಂತ ಆಫ್ ರೋಡ್ ಕಿಂಗ್ ಎಂದು ಹೆಸರು ಮಾಡಿರುವ ಮಹೀಂದ್ರಾ ಥಾರ್ (Mahindra Thar) ಡೀಲರ್‌ಶಿಪ್‌ನಲ್ಲಿ ಡೆಲಿವರಿ ಪಡೆಯುವ ಮುನ್ನವೇ ಅಪಘಾತಕ್ಕೊಳಗಾಗಿ ಸಂಪೂರ್ಣ ಹಾನಿಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ದಂಪತಿಯೊಂದು ಹೊಚ್ಚ ಹೊಸ ಮಹೀಂದ್ರಾ ಥಾರ್ ಡೆಲಿವರಿ ಪಡೆಯುವಾಗ ಅನಿರೀಕ್ಷಿತವಾಗಿ ಡೀಲರ್‌ಶಿಪ್‌ನ ಮೊದಲ ಮಹಡಿಯಿಂದ ಉರುಳಿ ಕೆಳಗೆ ಬಿದ್ದಿದೆ.

ಈ ಘಟನೆಯು ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿರುವ ಶೋರೂಂನಲ್ಲಿ ನಡೆದಿದೆ. ದಂಪತಿ ಡೆಲಿವರಿ ಮುನ್ನ ಸಾಂಪ್ರದಾಯಿಕ ಪೂಜೆ ಮಾಡುವ ಸಮಯದಲ್ಲಿ ಪತ್ನಿ ಮಾನಿ ಪವಾರ್' ನಿಧಾನವಾಗಿ ಮುಂದಕ್ಕೆ ಚಲಿಸಿ, ಆಚರಣೆಯ ಭಾಗವಾಗಿ ಟೈರ್ ಅಡಿಯಲ್ಲಿ ಚಕ್ರದ ಮುಂದೆ ಇರಿಸಲಾದ ನಿಂಬೆಹಣ್ಣನ್ನು ತುಳಿಸಬೇಕಿತ್ತು. ಆದರೆ ಆಕಸ್ಮಿಕವಾಗಿ ಅವರು ಆಕ್ಸಿಲರೇಟರ್ ತುಳಿದಿದ್ದು, ಎಸ್‌ಯುವಿ ಮುಂದಕ್ಕೆ ಓಡಿ ಶೋರೂಂನ ಗಾಜಿನ ಗೋಡೆಯನ್ನು ಭೇದಿಸಿ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದೆ.
ಆ ಸಮಯದಲ್ಲಿ ಮಾಣಿ ಅವರ ಪತಿ ಪ್ರದೀಪ್ ಮತ್ತು ವಿಕಾಸ್ ಎಂಬ ಶೋರೂಂ ಸಿಬ್ಬಂದಿ ವಾಹನದೊಳಗೆ ಕುಳಿತಿದ್ದರು, ಮಾರಾಟಗಾರ ಕಾರಿನ ಕಾರ್ಯಗಳನ್ನು ವಿವರಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳು ಆಗಿಲ್ಲ. ಮಾನಿ ಪವಾರ್ ಅವರನ್ನು ಚಿಕಿತ್ಸೆಗಾಗಿ ಸ್ಥಳಿಯ ಮಲಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಸದ್ಯ ಡಿಸ್ಚಾರ್ಜ್ ಆಗಿ ಸುಗಮವಾಗಿದ್ದಾರೆ.

ಕುಟುಂಬ ಅಥವಾ ಶೋರೂಂ ಆಡಳಿತ ಮಂಡಳಿಯಿಂದ ಯಾವುದೇ ದೂರು ದಾಖಲಾಗಿಲ್ಲ. ಈ ಅಪಘಾತವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ರಸ್ತೆಯಲ್ಲಿ ಪಲ್ಟಿಯಾದ ಥಾರ್ ಮತ್ತು ಶೋರೂಂನ ಮೊದಲ ಮಹಡಿಯಲ್ಲಿ ಮುರಿದ ಗಾಜಿನ ಮುಂಭಾಗವನ್ನು ತೋರಿಸುವ ವೀಡಿಯೊಗಳು ಎಲ್ಲಡೆ ವೈರಲ್ ಆಗಿವೆ. ಹೊಚ್ಚ ಹೊಸ ಕಾರಿನ ಬಗ್ಗೆ ಆಟೋ ಉತ್ಸಾಹಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್ಚುವರಿ ಮಾಹಿತಿ: ಮಣಿ ಪವಾರ್ ಸೋಮವಾರ ರಾತ್ರಿ ದೆಹಲಿಯ ನಿರ್ಮಾಣ್ ವಿಹಾರ್ ನಲ್ಲಿರುವ ಮಹೀಂದ್ರಾ ಡೀಲರ್ ಶಿಪ್ ನಲ್ಲಿ 27 ಲಕ್ಷ ರೂಪಾಯಿ ಬೆಲೆಯ ತನ್ನ ಹೊಚ್ಚ ಹೊಸ ಥಾರ್ ಅನ್ನು ತೆಗೆದುಕೊಂಡರು. ಪತ್ನಿ ಅದನ್ನು ಚಲಾಯಿಸುವ ಮೊದಲು ಡೀಲರ್ ಶಿಪ್‌ನಲ್ಲಿ ಸಾಂಪ್ರದಾಯಿಕ ಸಮಾರಂಭವನ್ನು ನಡೆಸಲು ನಿರ್ಧರಿಸಿ, ಕಾರಿನ ಟೈರ್ ಕೆಳಗೆ ನಿಂಬೆಹಣ್ಣನ್ನು ಇರಿಸಲು ಮುಂದಾಗಿದ್ದರು.
ನಿಂಬೆಹಣ್ಣಿನ ಮೇಲೆ ಕಾರನ್ನು ಓಡಿಸುವ ಸಮಯದಲ್ಲಿ ಮಹಿಳೆ ವೇಗವರ್ಧಕವನ್ನು ಬ್ರೇಕ್ ಎಂದು ತಪ್ಪಾಗಿ ಭಾವಿಸಿದ್ದರು, ಇದರಿಂದಾಗಿ ಕಾರು ಗಾಜಿನ ಗೋಡೆಯ ಮೂಲಕ ಅಪ್ಪಳಿಸಿ ಕೆಳಗಿನ ಬೀದಿಗೆ ಬಿದ್ದಿದೆ. ಏರ್ ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಕೂಡಲೇ ನೆರೆಯ ಮಲಿಕ್ ಆಸ್ಪತ್ರೆಗೆ ಕಳುಹಿಸಲಾಯಿತು. ವರದಿಗಳ ಪ್ರಕಾರ, ಪ್ರಥಮ ಚಿಕಿತ್ಸೆಯ ನಂತರ ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಕಾರು ಆಕಸ್ಮಿಕವಾಗಿ ಬಿದ್ದಾಗ ಅಲ್ಲೆ ಹತ್ತಿರವಿದ್ದ ಮೋಟಾರ್ ಸೈಕಲ್ ಕೂಡ ಹಾನಿಗೊಳಗಾಯಿತು. ಯಾರಿಗೂ ಗಾಯಗಳಾಗಿಲ್ಲ ಎಂದು ಅಲ್ಲಿನ ಉಪ ಪೊಲೀಸ್ ಆಯುಕ್ತ (ಪೂರ್ವ) ಅಭಿಷೇಕ್ ಧನಿಯಾ ದೃಢಪಡಿಸಿದ್ದಾರೆ. ಈ ಅಸಾಮಾನ್ಯ ಘಟನೆಯು ಸೀಮಿತ ಶೋರೂಂಗಳಲ್ಲಿ ವಾಹನ ಪೂಜಾ ಆಚರಣೆಗಳನ್ನು ಮಾಡುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








